ಇಂದಿನ ಟಾಪ್ ೧೦ ಸುದ್ದಿಗಳು..! 04.12.2015

Date:

ಇನ್ಮುಂದೆ ಬೀದಿ ಬದಿಯಲ್ಲಿ ಕಸ ಎಸೆದರೆ ದಂಡ..!

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲಂದರಲ್ಲಿ ಕಸ ಎಸೆಯುವಂತಿಲ್ಲ..! ಉಗುಳುವಂತಿಲ್ಲ..! ಒಂದುವೇಳೆ ಇಂಥಾ ಘನಂದಾರಿಕಾರ್ಯ ಮಾಡಿದ್ದೇ ಆದಲ್ಲಿ ದಂಡ ಕಟ್ಟಬೇಕಾಗುತ್ತೆ…! ಎಂದು ಮೇಯರ್ ಬಿ. ಎನ್ ಮಂಜುನಾಥ ಗೌಡರು ತಿಳಿಸಿದ್ದಾರೆ.
ಮಲ್ಲೇಶ್ವರ ಮೈದಾನದಲ್ಲಿ ಬಿಬಿಎಂಪಿ ಆಯೋಜಿಸಿದ್ದ ಕಸ ವಿಂಗಡಣೆ ಕುರಿತಾದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೀದಿ ಬದಿಯಲ್ಲಿ ಕಸ ಎಸೆಯುವುದು, ಉಗುಳುವುದು ಕಂಡ ಬಂದಿದ್ದೇ ಆದರೆ ದೊಡ್ಡ ಪ್ರಮಾಣದ ದಂಡವನ್ನು ಕಟ್ಟಬೇಕಾಗುತ್ತೆ ಎಂದು ಅವರು ಎಚ್ಚರಿಸಿದರು. ಜನವರಿ 1ರಂದೇ ಈ ಕ್ರಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗುತ್ತಿರುವುದನ್ನೂ ಸ್ಪಷ್ಟಪಡಿಸಿದರು.
ಕಸವಿಂಗಡಣೆ ಸರಿತಯಾಇ ಆಗುತ್ತಿಲ್ಲ.
ಪೌರ ಕಾರ್ಮಿಕರೇ ಮನೆಯ ಬಾಗಿಲಗೆ ಬಂದು ಕಸವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿದ್ದರೂ ಜನ ಅವರಿಗೆ ಕಸ ನೀಡದೇ ಎಲ್ಲಂದರಲ್ಲಿ ಎಸೆಯುತ್ತಿದ್ದಾರೆ. ಖಾಲಿ ಸೈಟನ್ನು ಕಸ ವಿಲೇವಾರಿಯ ಜಾಗವನ್ನಾಗಿ ಮಾಡಿಕೊಂಡಿದ್ದಾರೆ. ರಸ್ತೆ ಪಕ್ಕ ಕಸ ಎಸೆಯುವವರಿಗೆ ಮೊದಲು ನೋಟಿಸ್ ನೀಡಲಾಗುತ್ತೆ..! ಮತ್ತೂ ಕಸ ಎಸೆದರೆ 500 ರೂಪಾಯಿ ದಂಡ..! ಮತ್ತೆ ಮತ್ತೆ ಅದೇ ಕೆಲಸ ಮಾಡುತ್ತಿದ್ದರೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ರಾಜ್ಯಗಳ ಪರಿಹಾರ `ಜಯಾ ನಾಡಿಗೆ’ ಬೇಕಿಲ್ಲವಂತೆ..!

“ನಮಗೆ ಕೇಂದ್ರ ಸರ್ಕಾರದ ನೆರವಿದೆ..! ಈಗ ನಮಗೆ ಬೇರೆ ಯಾವುದೇ ರಾಜ್ಯಗಳ ಪರಿಹಾರದ ಹಣ ಬೇಕಿಲ್ಲ..”.! ಅಂತ ತಮಿಳುನಾಡು ಸಕರ್ಾರ ಎಲ್ಲಾ ರಾಜ್ಯಗಳಿಗೂ ಸಂದೇಶ ನೀಡಿದೆ.
ಶತಮಾನದ ಮಳೆಯಿಂದಾಗಿ ಜಲಪ್ರಳಯಕ್ಕೆ ತುತ್ತಾಗಿರೋ ತಮಿಳುನಾಡಿಗೆ ಕರ್ನಾಟಕ, ದೆಹಲಿ, ಕೇರಳ, ಒರಿಸ್ಸಾ ಸೇರಿದಂತೆ ಅನೇಕ ರಾಜ್ಯಗಳು ಪರಿಹಾರವನ್ನು ಘೋಷಿಸಿವೆ..! ಅದೇರೀತಿ ಕೇಂದ್ರ ಸರ್ಕಾರ ಕೂಡ `ಜಯಾ ನಾಡಿಗೆ’ 1,940 ಕೋಟಿ ರೂ ಪರಿಹಾರ ಘೋಷಿಸಿದೆ. ತಮಿಳು ತೆಲುಗು ಸಿನಿಮಾ ನಟರುಗಳೂ ಪರಿಹಾರ ನೀಡಲು ಮುಂದಾಗಿದ್ದಾರೆ.
ಹೀಗಿರುವಾಗ ತಮಿಳುನಾಡು ಮಾತ್ರ ನಮಗೆ ರಾಜ್ಯಗಳ ಪರಿಹಾರ ಸದ್ಯ ಬೇಡ. ಮುಂದೆ ಅಗತ್ಯವಿದ್ದರೆ ಕೆಳುತ್ತೇವೆಂದು ತಮಿಳುನಾಡು ಅಧಿಕಾರಿಗಳು ತಿಳಿಸಿದ್ದಾರೆ.

ಫ್ಲಿಪ್ ಕಾರ್ಟ್ ಗೆ 2000 ಕೋಟಿ ರೂ ನಷ್ಟ

ಆನ್ಲೈನ್ ಮಾರಾಟ ತಾಣ ಫ್ಲಿಪ್ ಕಾರ್ಟ್ 2015ರ ಮಾರ್ಚ್ ಗೆ ಮುಕ್ತಾಯವಾದ ಹಣಕಾಸು ವರ್ಷದಲ್ಲಿ ಅಂದಾಜು 2000 ಕೋಟಿ ರೂಪಾಯಿಗಳ ನಷ್ಟವನ್ನು ಅನುಭವಿಸಿದೆ..! ತನ್ನ ಸಮೀಪದ ಸ್ಪರ್ಧಿಗಳಾಗಿರೋ ಅಮೆಜಾನ್, ಸ್ನ್ಯಾಪ್ ಡೀಲ್ ಗಿಂತ ಭಾರಿ ಅಂತರದ ಮುನ್ನಡೆ ಕಾಯ್ದುಕೊಳ್ಳುವ ಸಲುವಾಗಿ ಫ್ಲಿಪ್ ಕಾರ್ಟ್ ಉತ್ಪನ್ನಗಳನ್ನು ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ ನೀಡುತ್ತಿದೆ. ಹೀಗೆ ಗ್ರಾಹಕರನ್ನು ಸೆಳೆಯಲು ಅತಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ್ದರಿಂದಲೇ ಕಂಪನಿಗೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.
ವಿವಾದಕ್ಕೀಡಾದ `ಮೋದಿ ವೈಮಾನಿಕ ವೀಕ್ಷಣೆ ಚಿತ್ರ’

ತಮಿಳುನಾಡಿನ ಪರಿಸ್ಥಿತಿಯನ್ನು ವೀಕ್ಷಿಸಲು ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಕ್ಕೆ ಸಂಬಂಧಿಸಿದ ಚಿತ್ರವೊಂದು ವಿವಾದಕ್ಕೀಡಾಗಿದೆ. ಮೋದಿಯವರ ವೈಮಾನಿಕ ಸಮೀಕ್ಷೆಯನ್ನು ಪ್ರಕಟಿಸುವಾಗ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ(ಪಿಐಬಿ) ಪ್ರಕಟಿಸಿರೋ ಚಿತ್ರವೇ ವಿವಾದದ ಕೇಂದ್ರಬಿಂದು.

ಐಸಿಯುನಲ್ಲಿದ್ದ 18 ಜನರ ಮರಣ :

ತಮಿಳುನಾಡು ರಾಜಧಾನಿ ಚೆನ್ನೈ ಜಲಪ್ರಳಯದಿಂದ ತತ್ತರಿಸಿದೆ. ಇದರೊಂದಿಗೆ ಸತತ ವಿದ್ಯುತ್ ಕಡಿತಗೊಂಡಿರುವ ಪರಿಣಾಮವಾಗಿ ಎಂಒಐಟಿ ಇಂಟರ್ ನ್ಯಾಷನಲ್ ಆಸ್ಪತ್ರೆಯ ಐಸಿಯುನಲ್ಲಿದ್ದ 18 ರೋಗಿಗಳು ಕೊನೆ ಉಸಿರೆಳೆದಿದ್ದಾರೆ. ಉಳಿದ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಮಿಳುನಾಡಿನ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಶಾಸಕರ ವೇತನ ನಾಲ್ಕು ಪಟ್ಟು ಹೆಚ್ಚಿಸಿದ ದಿಲ್ಲಿ ಸರ್ಕಾರ..!

ದಿಲ್ಲಿ ಸರ್ಕಾರ ಶಾಸಕರ ಮತ್ತು ಮಂತ್ರಿಗಳ ವೇತನವನ್ನು 4 ಪಟ್ಟು ಹೆಚ್ಚಿಸುವ ಕುರಿತಾದ ವಿಧೇಯಕವು ವಿಧಾನ ಸಭೆಯಲ್ಲಿ ಗುರುವಾರ ಮಂಡನೆಯಾಗಿದೆ. ಈ ವಿಧೇಯಕದ ಮಂಡನೆಯಿಂದ ಶಾಸಕರ ಒಟ್ಟಾರೆ ವೇತನ 88 ಸಾವಿರದಿಂದ 2.1ಲಕ್ಷಕ್ಕೆ ಏರಲಿದೆ..! ಇದರೊಂದಿಗೆ ದೇಶದಲ್ಲೇ ಹೆಚ್ಚು ವೇತನ ಪಡೆಯುವ ಶಾಸಕರೆಂಬ ಖ್ಯಾತಿ ದಿಲ್ಲಿ ಶಾಸಕರಿಗೆ ಲಭಿಸಲಿದೆ.
ದಂಡುಪಾಳ್ಯ ಹಂತಕರಿಗೆ ರಿಲೀಫ್..!

ದಂಡುಪಾಳ್ಯದ 6 ಹಂತಕರ ಖುಲಾಸೆ ಆದೇಶವನ್ನು ಪ್ರಶ್ನಿಸಿ ದೆಹಲಿರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ವನ್ನು `ಸುಪ್ರೀಂ’ ಎತ್ತಿ ಹಿಡಿಯುವುದರೊಂದಿಗೆ ದಂಡುಪಾಳ್ಯದ ಕುಖ್ಯಾತ ಹಂತಕರಿಗೆ ರಿಲೀಫ್ ಸಿಕ್ಕಂತಾಗಿದೆ.

ಉಲ್ಟಾ ಹೊಡೆದ ಬಿಹಾರ್ ಸಿಎಂ
ಬಿಹಾರದಲ್ಲಿ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧ ಮಾಡುತ್ತೇವೆಂದು ಹೇಳಿದ್ದ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಈಗ ಉಲ್ಟಾ ಹೊಡೆದಿದ್ದಾರೆ. ಈಗ ಕೇವಲ ದೇಶಿ ಮದ್ಯವನ್ನು ನಿಷೇಧಿಸಿ, ವಿದೇಶಿ ಮದ್ಯವನ್ನು ನಿಷೇಧಿಸದ ಕುರಿತು ನಿರ್ಧರಿಸಿದ್ದಾರೆಂಬುದು ವರದಿಯಾಗಿದೆ.

ರಣಜಿ : ಕರ್ನಾಟಕಕ್ಕೆ ಸೋಲು
ಕರ್ನಾಟಕದ ಕ್ವಾಟರ್ ಫೈನಲ್ ಕನಸು ನುಚ್ಚು ನೂರಾಗಿದೆ. ಮಹಾರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ 53 ರನ್ಗಳ ಅಂತರ ಸೋಲಿನೊಂದಿಗೆ ಪ್ರಸಕ್ತ ಸಾಲಿನ ರಣಜಿ ಟೂರ್ನಿಯಿಂದ ಹೊರ ಬೀಳುವುದರೊಂದಿಗೆ ಸತತ ಮೂರನೇ ವರ್ಷದ ರಣಜಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ.

ಪ್ರಳಯಾಂತಕ ಡ್ರೈವರ್…! ರಿಯಲ್ ಹೀರೋ ಆದ ಚೆನ್ನೈ ಬಸ್ ಡ್ರೈವರ್.

ಪ್ರವಾಹ ಪೀಡಿತ ಚೆನ್ನೈ ದ್ವೀಪದಂತಾಗಿದೆ..! ಸಂಚಾರ ವ್ಯವಸ್ಥೆ ಸ್ಥಗಿತವಾಗಿದೆ. ಇಂಥಾ ಅಪಾಯಕಾರಿ ಸ್ಥಿತಿಯಲ್ಲೂ ಚೆನ್ನೈ ಬಸ್ ಡ್ರೈವರ್ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರು ತಲುಪ ಬೇಕಿದ್ದ ಸ್ಥಳಕ್ಕೆ ತಲುಪಿಸಿ ಹೀರೋ ಆದರು..! ಆ ವೀಡಿಯೋ ಇಲ್ಲಿದೆ.

Video :

https://www.youtube.com/watch?v=lgHh8g87qQU

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...