ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ..!

0
77

ರಾಹುಲ್ ದ್ರಾವಿಡ್ ಒಳ್ಳೆಯ ಕ್ರಿಕೆಟಿಗ ಮಾತ್ರವಲ್ಲ. ಅವರೊಬ್ಬ ಆದರ್ಶ ವ್ಯಕ್ತಿ. ಸಹನೆಯ ಪ್ರತೀಕವಾಗಿರೋ ರಾಹುಲ್ ದ್ರಾವಿಡ್ರನ್ನು ಎಲ್ಲರೂ ಇಷ್ಟಪಡುತ್ತಾರೆ..! ಅವರನ್ನು ಇಷ್ಟ ಪಡೋಕೆ ಕಾರಣ ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗನೆಂಬ ಒಂದೇ ಒಂದು ಕಾರಣವಲ್ಲ..! ಕ್ರಿಕೆಟ್ ಅಂಗಳದಿಂದ ಆಚೆಗೂ ರಾಹುಲ್ ದ್ರಾವಿಡ್ ಸಭ್ಯ ವ್ಯಕ್ತಿ. ನಡೆ-ನುಡಿ, ಗುಣ-ಸ್ವಭಾವ ಎಲ್ಲದರಲ್ಲೂ ದ್ರಾವಿಡ್ ನಂಬರ್ ಒನ್, ಅವರು ನಿಜಕ್ಕೂ ಸಂಭಾವಿತರು, ರಿಯಲ್ಲೀ ಹಿ ಈಸ್ ಜಂಟಲ್ ಮ್ಯಾನ್..!
ಇಂಥಾ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ರ ವ್ಯಕ್ತಿತ್ವ ಎಂಥಾದ್ದು ಅಂತ ಈ ಮುಂದಿನ 11 ಸಂಗತಿಗಳು ಹೇಳುತ್ತವೆ..! ಕ್ರಿಕೆಟಿನಿಂದ ಹೊರತಾಗಿಯೂ ರಾಹುಲ್ ದ್ರಾವಿಡ್ ರಿಯಲ್ ಹೀರೋ ಅನ್ನೋದಕ್ಕೆ ಇವೇ ಸಾಕ್ಷಿ..!

1. ಅನಾಥ ಮಕ್ಕಳೊಂದಿಗೆ ಸಮಯ ಕಳೆದರು..! :

134
ಒಮ್ಮೆ ರಾಹುಲ್ ದ್ರಾವಿಡ್ ಅನಾಥ ಮಕ್ಕಳಿಗಾಗಿ ಕ್ರಿಕೆಟ್ ಬ್ಯಾಟಿಗೆ ತನ್ನ ಹಸ್ತಾಕ್ಷರವ ಬರೆದು ಕೊಡಬೇಕೆಂದು ಮಾತಾಗಿತ್ತು..! ಆದರೆ ರಾಹುಲ್ ದ್ರಾವಿಡ್ ಬ್ಯಾಟಿಗೆ ಸಹಿ ಮಾಡಿಕೊಡುವುದಿಲ್ಲ..! ಬದಲಾಗಿ, ಬಿಡುವಿಲ್ಲದ ಸಮಯದ ನಡುವೆ ಅನಾಥ ಮಕ್ಕಳಿಗಾಗಿ ಅವರೇ ಬಂದರು..! ಅನಾಥ ಮಕ್ಕಳೊಂದಿಗೆ ಸಮಯ ಕಳೆದರು..! “ಆಟವನ್ನು ಎಂಜಾಯ್ ಮಾಡಲು ಕ್ರಿಕೆಟ್ ಆಡಿ..! ಶಾಲೆಯಲ್ಲಿರುವಾಗ ಒಳ್ಳೆಯ ರೀತಿಯಲ್ಲಿ ಓದಿ, ಮೋಜು ಬೇಕೆಂದಾಗ ಕ್ರಿಕೆಟ್ ಆಡಿ” ಅಂತ ಅನಾಥಮಕ್ಕಳಿಗೆ ಹೇಳಿದರು.

2. ಎ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ :

314

ದ್ರಾವಿಡ್ ಸಾಕಷ್ಟು ಸಮಯವನ್ನು ತಮ್ಮ ತನ್ನ ಕುಟುಂಬಕ್ಕೆ ಮೀಸಲಿಡುತ್ತಾರೆ. ಸಮಯ ಸಿಕ್ಕಾಗೆಲ್ಲಾ ಮಕ್ಕಳ ಜೊತೆಯೇ ಇರುತ್ತಾರೆ..! ಇದರಲ್ಲೇನಿದೆ ಮಹಾ ಅಂತ ಕೆಲವರು ಕೇಳ ಬಹುದು..?! ಆದರೆ ದ್ರಾವಿಡ್ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ನಡುವೆಯೂ.. ದಿನ ನಿತ್ಯದ ತನ್ನ ಅಭ್ಯಾಸದ ನಡುವೆಯೂ ಮಕ್ಕಳೊಂದಿಗೆ ಇರ್ತಾ ಇದ್ರು..!

3. ಸ್ಪೂರ್ತಿಯ ಚಿಲುಮೆ ಮತ್ತು ಒಳ್ಳೆಯ ಮಾರ್ಗದರ್ಶಕರು :

413

ರಾಹುಲ್ ದ್ರಾವಿಡ್ ಅತ್ಯುತ್ತಮ ‘ಗುರು’ ಅನ್ನೋದಕ್ಕೆ ಐಪಿಎಲ್ ನಲ್ಲಿ ರಾಜಸ್ತಾನ್ ತಂಡದ ಪ್ರದರ್ಶನ ಮತ್ತು ಇವತ್ತಿನ ಭಾರತ ಕ್ರಿಕೆಟ್ ನ `ಎ’ ಮತ್ತು ಕಿರಿಯ ತಂಡದ ಪ್ರದರ್ಶನವೇ ಸಾಕ್ಷಿ. ಕ್ರಿಕೆಟ್ ಆಟಗಾರರಲ್ಲದೆ ಇತರರ ಸಾಧನೆಗೂ ದ್ರಾವಿಡ್ ಸ್ಪೂರ್ತಿಯ ಚಿಲುಮೆ..! ಶರತ್ ಗಾಯಕ್ವಾಡ್ ಕಾರಣಾಂತರದಿಂದ `ಈಜು’ ವಿನಿಂದ ನಿವೃತ್ತರಾಗಲು ಬಯಸಿದ್ದರು..! ಆಗ ರಾಹುಲ್ ದ್ರಾವಿಡ್ ಈ ಈಜುಗಾರರನ್ನು ಕರೆದು ತನ್ನ ಜೀವನದ ಉದಾಹರಣೆಯನ್ನೇ ಕೊಟ್ಟು ಅವರ ಮನ ಪರಿವರ್ತನೆ ಮಾಡ್ತಾರೆ..! ದ್ರಾವಿಡ್ರಿಂದ ಪ್ರೇರಿತರಾದ, ಸ್ಪೂರ್ತಿ ಪಡೆದ ಗಾಯಕ್ವಾಡ್ ಅವರು 2014ರ ಏಷ್ಯನ್ ಗೇಮ್ಸ್ ನಲ್ಲಿ 1ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು (ಒಟ್ಟು 6) ಗೆದ್ದರು..!

4. ಅಭಿಮಾನಿಗೆ ಕ್ಷಮೆ ಕೇಳಿದ್ದರು ದ್ರಾವಿಡ್ :

59

ದ್ರಾವಿಡ್ರ ಯುವ ಅಭಿಮಾನಿಯೊಬ್ಬರು ಕ್ಯಾನ್ಸರ್ ನಿಂದ ಬಳಲುತಿದ್ದರು. ಅವರು ರಾಹುಲ್ ದ್ರಾವಿಡ್ರನ್ನು ಭೇಟಿ ಆಗೋ ಬಯಕೆಯನ್ನು ವ್ಯಕ್ತಪಡಿಸಿದ್ದರು..! ಆಗ ಆ ಅಭಿಮಾನಿಯೊಂದಿಗೆ `ಸ್ಕೈಪ್’ನಲ್ಲಿ ಒಂದುಗಂಟೆಗೂ ಹೆಚ್ಚು ಕಾಲ ಚಾಟ್ ಮಾಡಿದರಲ್ಲದೇ ತಾನೇ ನೇರವಾಗಿ ಭೇಟಿ ಆಗದೇ ಇರುವುದಕ್ಕೆ ಅಭಿಮಾನಿಯ ಬಳಿ ಕ್ಷಮೆಯನ್ನೂ ಕೇಳಿದರು..!

5. ರಾಷ್ಟ್ರೀಯ ತಂಡದ ಕೋಚ್ ಆಗಿ ಎಂದಾಗ, ನಯವಾಗಿ ತಿರಸ್ಕರಿಸಿದರು :

69

ಅವತ್ತು ಹ್ಞೂಂ ಅಂತ ಹೇಳಿದ್ರೆ ಸಾಕಿತ್ತು, ಇವತ್ತು ದ್ರಾವಿಡ್ ಭಾರತ ಕ್ರಿಕೆಟ್ತಂಡದ ಕೋಚ್ ಆಗಿರುತ್ತಿದ್ದರು..! ಕುಟುಂಬದ ಬದ್ಧತೆಯ ಕಾರಣಗಳಿಂದ ರಾಷ್ಟ್ರೀಯ ತಂಡದ ಕೋಚ್ ಆಗುವ ಅವಾಕಾಶ ಸಿಕ್ಕಾಗ ಅದನ್ನು ನಯವಾಗಿ ಬೇಡ ಅಂದರು..!
6. ಕಿರಿಯರಿಗೆ ಗುರು ಆದರು..! :

79

ದ್ರಾವಿಡ್ರನ್ನು ಭಾರತ ಕಿರಿಯರ ತಂಡದ (19 ವರ್ಷ ವಯಸ್ಸಿನೊಳಗಿನ) ಮತ್ತು `ಎ’ ತಂಡದ ಕೋಚ್ ಆಗಿ ಎಂದಾಗ ತಕ್ಷಣವೇ ಒಪ್ಪಿಕೊಂಡರು..! ಕುಟುಂಬಕ್ಕಿಂತಲೂ ಅವರಿಗೆ ಕಿರಿಯ ಆಟಗಾರರು ಮುಖ್ಯ ಅನಿಸಿ ಬಿಟ್ಟರು..! ಸೀನಿಯರ್ ಟೀಂ ಬಗ್ಗೆ ಯಾರು ಬೇಕಾದರೂ ಕೇರ್ ತೆಗೆದುಕೊಳ್ಳುತ್ತಾರೆ..! ಆದರೆ ಕಿರಿಯರ ಕಡೆ ಹೆಚ್ಚು ಗಮನವನ್ನು ಕೊಡಬೇಕೆಂದು ಕಿರಿಯರಿಗೆ ಗುರು ಆದರು..!

7. ಸುಧಾರಣೆಗೆ ಕೊನೆಯಿಲ್ಲ ಅನ್ನೋದು ದ್ರಾವಿಡ್ರಿಗೆ ಗೊತ್ತು..!

86
” ನೀವು ಅವರನ್ನು ದೂರದೇ ಇರಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದಾರೆ..! ಏಕೆಂದರೆ ಟೀಕೆಗೆ ಕೊನೆಯೇ ಇಲ್ಲ..! ಅಂತೆಯೇ ಸುಧಾರಣೆಗೂ ಕೊನೆಯಿಲ್ಲ ಅಂತ ಅವರಿಗೆ ಗೊತ್ತಿದೆ” ಎಂದು ದ್ರಾವಿಡ್ ಅವರ ಪತ್ನಿ `ವಿಜೇತ ದ್ರಾವಿಡ್’ ಒಮ್ಮೆ ದ್ರಾವಿಡ್ ಅವರ ಬಗ್ಗೆ ಹೇಳಿದ್ದರು..!

8. ಸ್ಪಿನ್ ಗೆ ಆಡೋದು ಹೆಂಗೆ ಅಂತ ಪೀಟರ್ಸನ್ಗೆ ಪತ್ರ ಬರೆದಿದ್ದರು..!

main-qimg-8150aefc14a9fb5e4b00545aa3e7c548
ಇಂಗ್ಲೇಂಡ್ ಕ್ರಿಕೆಟಿಗ ಕೆವಿನ್ ಪೀಟರ್ಸನ್ಗೆ ಸ್ಪಿನ್ ಬೌಲಿಂಗ್ ಅನ್ನು ಎದುರಿಸುವುದು ಹೇಗೆಂದು ದ್ರಾವಿಡ್ ಪತ್ರ ಬರೆದಿದ್ದರು..! ಆ ಪತ್ರ ಈ ಕೆಳಗಿದೆ..! ಇಂಥಾ ಗುಣದಿಂದಲೇ ದ್ರಾವಿಡ್ ಎಲ್ಲರಿಗೂ ಇಷ್ಟವಾಗ್ತಾರೆ.

9. ವಿಶ್ವವೇ ‘ಐಸ್ ಬಕೆಟ್ ಚಾಲೆಂಜ್ ನಲ್ಲಿ ಬ್ಯುಸಿ ಇದ್ದಾಗ.. ದ್ರಾವಿಡ್ ಮಾತ್ರ ` ಬ್ಲಡ್ ಡೊನೇಟಿಂಗ್ ಚಾಲೆಂಜಿನಲ್ಲಿ’ ಬ್ಯುಸಿ ಇದ್ದರು..!

BwDmU_NCQAAlmBE
ಇಡೀ ವಿಶ್ವದ ಜನತೆಯೇ ಐಸ್ ಬಕೆಟ್ ಚಾಲೆಂಜಿನಲ್ಲಿ ಬ್ಯುಸಿ ಆಗಿದ್ದಾಗ. ದ್ರಾವಿಡ್, ಹೆಸರು, ಕೀರ್ತಿ, ಹಣ, ಪ್ರಚಾರದ ಕಡೆ ಯೋಚನೆ ಮಾಡದೇ ಮಾಧ್ಯಮದವರ ಮುಂದೆ ಫೋಸ್ ಕೊಡದೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ಬೆಂಗಳೂರಿನಲ್ಲಿ ರಕ್ತದ ಅವಶ್ಯಕತೆ ಇರೋ ರೋಗಿಗಳಿಗೆ ರಕ್ತ ಕೊಡುವುದನ್ನೇ ಕಾಯಕ ಮಾಡಿಕೊಂಡಿದ್ದರು..!

10. ಸಾರ್ವಜನಿಕ ಸಾರಿಗೆಯಲ್ಲೂ ಪ್ರಯಾಣ ಮಾಡ್ತಾರೆ :

1211

ಎಲ್ಲಾ ಆಟಗಾರರಿಗಿಂತ, ಪ್ರಸಿದ್ಧ ವ್ಯಕ್ತಿಗಳಿಗಿಂತ ರಾಹುಲ್ ದ್ರಾವಿಡ್ ತುಂಬಾನೇ ಸಿಂಪಲ್..! ಅಹಂ ಇಲ್ಲವೇ ಇಲ್ಲ..! ಎಷ್ಟೋ ಸಲ ಆಟೋ ಮೊದಲಾದ ಸಾರ್ವಜನಿಕ ಸಾರಿಗೆಗಳಲ್ಲೇ ಪ್ರಯಾಣ ಮಾಡಿದ್ದಾರೆ..! ಇವರ ಜೀವನ ಶೈಲಿ ಸಾಮಾನ್ಯರಂತೆ..! ಇವರನ್ನು ನೋಡಿ ಎಲ್ಲರೂ ಕಲಿಬೇಕು..!

11. ನಿವೃತ್ತಿ ನಂತರವೂ ತನ್ನ ಬಾಲ್ಯದ ಕ್ಲಬ್ ಅನ್ನು ಗೆಲ್ಲಿಸಿ ಕೊಟ್ಟರು..!

143
ದ್ರಾವಿಡ್ ಬಾಲ್ಯದಲ್ಲಿ ಆಡಿದ್ದ ಕ್ಲಬ್ ನಿರಂತರ ಸೋಲಿನಿಂದ ಅಸ್ಥಿತ್ವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ನಿಮರ್ಾಣವಾಗಿತ್ತು. ಆಗ ಆ ಕ್ಲಬ್ನ ಕೋಚ್ ದ್ರಾವಿಡ್ರನ್ನು ಕ್ಲಬ್ ಪರ ಆಡುವಂತೆ ಕೇಳಿಕೊಂಡರು..! ದ್ರಾವಿಡ್ ಆಡಿದರು..! ಶತಕವನ್ನೂ ಬಾರಿಸಿದರು..! ಆ ತಂಡ ಗೆದ್ದೇ ಬಿಟ್ಟಿತು..! ಆಗೆಲುವಿನೊಂದಿಗೆ ಅದರ ಅಸ್ಥಿತ್ವ ಉಳಿಯಿತು..! ದ್ರಾವಿಡ್ ಆ ಕ್ಲಬ್ ಬಾಲ್ಯದ ಕ್ಲಬ್ ಪರ ಆಡಿ ಗೆಲ್ಲಿಸಿದ್ದು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಆದಮೇಲೆ..! ಅಂತರಾಷ್ಟ್ರೀಯ ಮಟ್ಟದ ಶ್ರೇಷ್ಠ ಆಟಗಾರರಾಗಿ, ನಿವೃತ್ತರಾದ ಬಳಿಕವೂ ಕ್ಲಬ್ವೊಂದರ ಅಸ್ಥಿತ್ವಕ್ಕಾಗಿ ಆಡಿದ ದ್ರಾವಿಡ್ ಹೃದಯವಂತರು. ಡೌನ್ ಟು ಅರ್ತ್ ಪರ್ಸನಾಲಿಟಿ ದ್ರಾವಿಡ್ರದ್ದು..!

ದ್ರಾವಿಡ್ ವ್ಯಕ್ತಿತ್ವ ಎಂಥಾದ್ದು ಅನ್ನೋದಕ್ಕೆ ಈ ಎಲ್ಲಾ ಅಂಶಗಳೇ ಸಾಕ್ಷಿ..
ಸಚಿನ್ ಕ್ರಿಕೆಟ್ ದೇವರು..
ಸೌರವ್ ಆಫ್ ಸೈಡ್ನ ದೇವರು..!
ಲಕ್ಷ್ಮಣ್ ನಾಲ್ಕನೇ ಇನ್ನಿಂಗ್ಸ್ನ ದೇವರು..!
ಆದರೆ, ದೇವಾಲಯದ ಎಲ್ಲಾ ಬಾಗಿಲುಗಳು ಮುಚ್ಚಿದ್ದರೂ ದೇವರು “ಗೋಡೆ”ಯ ಹಿಂದೆ ಇರುತ್ತಾನೆ..! ಅಲ್ವಾ..?

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

`ಗ್ರಾಮೀಣ ಜನರಿಗಾಗಿ’ ಕೆಲಸ ಬಿಟ್ಟುಬಂದ ಇಂಜಿನಿಯರ್ಸ್..!

`ಕೊಹಿನೂರು ವಜ್ರ’ ಪಾಕಿಸ್ತಾನದ್ದಂತೆ..! `ಕೊಹಿನೂರು ವಜ್ರ’ದ ಮೇಲೂ ಬಿತ್ತು ಪಾಕ್ ಕಣ್ಣು..!

ಇವರು ನಮ್ಮ ಬೆಂಗಳೂರಿನ ತ್ಯಾಜ್ಯೋಧ್ಯಮಿ..! ಕಸ ಆಯುವಾತನಿಗೆ ವಿಶ್ವಸಂಸ್ಥೆಯಿಂದ ಕರೆ..!

LEAVE A REPLY

Please enter your comment!
Please enter your name here