ರೈಲು ಪ್ರಯಾಣಿಕರಿಗೆ ಜಾಗೃತಿ ಮೂಡಿಸುವ ವಿಶೇಷ ಪ್ರಯತ್ನ !

0
679

ಚಲಿಸುವ ರೈಲಿಗೆ ಕಲ್ಲು ತೂರಾಟ ನಡೆಸುವುದು ಮತ್ತು ದಹಿಸುವ ವಸ್ತುಗಳನ್ನು ರೈಲಿನಲ್ಲಿ ಒಯ್ಯುವುದು ಹೀಗೆ ಹಲವಾರು ಬಾರಿ ನಡೆದಿದೆ ಮತ್ತು ನಡೆಯುತ್ತಿರುತ್ತೆ. ಹೀಗಾಗಿ ಅಂತವರ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಕಾರ್ಯಾಚರಣೆ ನಡೆಸುವ ಒಂದು ತಿಂಗಳ ಕಾರ್ಯಕ್ರಮಕ್ಕೆ ವೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ವಿಶೇಷ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬೆಂಗಳೂರು ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ರೈಲ್ವೆ ಸಂರಕ್ಷಣಾ ಪಡೆ ಅಂದ್ರೆ ಆರ್‌ಪಿಎಫ್ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾರೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದ್ದು, ದಂಡ, ಐದು ವರ್ಷಗಳವರೆಗೆ ಜೈಲು ಶಿಕ್ಷೆ, ದಹನಕಾರಿ ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಇನ್ನೂ ಈ ವಿಶೇಷ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಶ್ರೀ ದೇವಾಂಶ ಶುಕ್ಲಾ ಹಿರಿಯ ವಿಭಾಗೀಯ ಸುರಕ್ಷಾ ಆಯುಕ್ತರು ಇವರ ಮಾರ್ಗದರ್ಶನದಲ್ಲಿ Shree Beerappa,OS/RPF, ಶ್ರೀ ಗೋವಿಂದ ಸ್ವಾಮಿ ASI RPF ಮತ್ತು ತಂಡದವರಿಂದ ಚಲಿಸುವ ರೈಲಿನ ಮೇಲೆ ಕಲ್ಲು ಹೊಡೆಯುವುದರ ವಿರುದ್ಧ ಹಾಗೂ ಉರಿಯುವ ವಸ್ತು ಗಳನ್ನು ರೈಲಿನಲ್ಲಿ ಸಾಗಿಸುವುದರ ವಿರುದ್ಧದ ಜಾಗೃತಿ ಗೀತೆ ಮತ್ತು ಪ್ರಹಸನ ವನ್ನು ಮಲ್ಲೇಶ್ವರಂ ನಿಲ್ದಾಣದಲ್ಲಿ ಪ್ರದರ್ಶಿಸಲಾಯಿತು. ಅಷ್ಟೇ ಅಲ್ಲ ಒಟ್ಟು 7 ಕಡೆ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.