ಕನ್ನಡ ಸಿನಿಮಾಗಳನ್ನು ಕನ್ನಡಿಗರು ಗೆಲ್ಲಿಸುತ್ತಿದ್ದಾರೆ. ಹೊಸ ಹೊಸ ರೀತಿಯ ಸಿನಿಮಾಗಳು ಕನ್ನಡದಲ್ಲಿ ಬರುತ್ತಿವೆ. ಸ್ಟಾರ್ ನಟರ ಸಿನಿಮಾಗಳಲ್ಲದೆ ಹೊಸ ಪ್ರತಿಭೆಗಳ ಸಿನಿಮಾಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ.
ಆದರೆ, ಹೊಸಬರ ಸಿನಿಮಾಗಳು ಪರಭಾಷೆಯಲ್ಲಿ ಡಬ್ ಆಗುವುದು ಅಪರೂಪ. ಹೀಗಿರುವಾಗ ಹೊಸಬರಿಂದ ನಿರ್ಮಾಣವಾಗುತ್ತಿರೋ ‘ತ್ರಿಬಾಹು’ ಸಿನಿಮಾ ಚಿತ್ರೀಕರಣಕ್ಕು ಮುನ್ನವೇ ಬಾಲಿವುಡ್ ನಿಂದ ಬೇಡಿಕೆ ಗಿಟ್ಟಿಸಿಕೊಂಡಿದೆ.
ತ್ರಿಬಾಹು ಪೋಸ್ಟರ್ ಹಾಗೂ ಟೀಸರ್ ನೋಡಿ ಫಿದಾ ಆಗಿರೋ ಹಿಂದಿ ಚಿತ್ರರಂಗದಿಂದ ಡಬ್ಬಿಂಗ್ ಗಾಗಿ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಡಬ್ಬಿಂಗ್ ರೈಟ್ಸ್ ಕೇಳುತ್ತಿರುವವರೆಲ್ಲಾ ಒಳ್ಳೆಯ ಬೆಲೆ ಕಟ್ಟಿದ್ದಾರೆ. ಇನ್ನೂ ಹೆಚ್ಚಿನ ನಿರೀಕ್ಷೆ ತ್ರಿಬಾಹು ತಂಡದ್ದಾಗಿದೆ.
ಇನ್ನೂ ಸಾಕಷ್ಟು ಚಿತ್ರೀಕರಣ ಬಾಕಿ ಇದೆ. ಇಷ್ಟರಲ್ಲೇ ಡಬ್ಬಿಂಗ್ ಹಕ್ಕಿಗೆ ಬಾಲಿವುಡ್ ನಿಂದ ಡಿಮ್ಯಾಂಡ್ ಬರ್ತಿರೋದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ವಿಶ್ವ ‘ತ್ರಿಬಾಹು’ವಾಗಿ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ನಾಯಕ ನಟನಾಗಿ, ನಿರ್ದೇಶಕನಾಗಿ ಸಿನಿಮಾದ ಹೊಣೆ ಹೊತ್ತಿರುವ ವಿಶ್ವ ಅವರೇ ಚಿತ್ರಕಥೆಯನ್ನೂ ಬರೆದಿದ್ದಾರೆ. ತ್ರಿಬಾಹು ಪಾತ್ರಕ್ಕಾಗಿ ಸಿಕ್ಕಾಪಟ್ಟೆ ವರ್ಕ್ ಔಟ್ ಮಾಡಿರೋದು, ಕುಸ್ತಿ ಕಲೆ ಕಲಿತಿರೋದು ಟೀಸರ್ ನಲ್ಲೇ ಗೊತ್ತಾಗುತ್ತೆ.
ಕಬಾಲಿಯ ಗಿಟಾರಿಸ್ಟ್ ವಿಜಯ್ ಜೋಸೆಫ್ ಅವರು ತ್ರಿಬಾಹುಗೆ ಮ್ಯೂಸಿಕ್ ನೀಡಿದ್ದಾರೆ. ರುಶಿಕೇಶ್ ಸಿನಿಮಾಟೋಗ್ರಫಿ ಇದ್ದು, ಉಮೇಶ್ ಬಣಕರ್ ಅವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಕೆಂಪಮ್ಮ ಅವರು ಸಿನಿಮಾವನ್ನು ನಿರ್ಮಿಸುತ್ತಿದ್ದು, ಇದು ಇವರ ನಿರ್ಮಾಣದ ಚೊಚ್ಚಲ ಸಿನಿಮಾ.