ಪಾಸಿಟಿವ್ ಎನರ್ಜಿಯ ಶಕುಂತಲ…!

1
841

ಹೆಚ್ಚು ಕಡಿಮೆ ಒಂದು ಗಂಟೆಗಳ ಕಾಲ ಮಾತಾಡ್ದೆ…! ಹಾಯ್ ಎಂದು ಪರಿಚಯಿಸಿಕೊಂಡು, ಥ್ಯಾಂಕ್ಯು ಎಂದು ಹೇಳಿ ಕರೆ ಕಟ್ ಮಾಡುವವರೆಗೂ ಇವರಿಂದ ಬಂದಿದ್ದು ಬರೀ ಸಕರಾತ್ಮಕ ಮಾತುಗಳು. ಕಷ್ಟಗಳು ಬಂದೇ ಬರುತ್ತವೆ… ಆಗಿದ್ದು ಆಗಲಿ, ಮುಂದೆ ಸಾಗಬೇಕು, ಮುಂದೇನು ಅಂತ ಯೋಚಿಸಿ ಮುನ್ನುಗ್ಗಬೇಕು ಎಂಬ ಸ್ಪೂರ್ತಿದಾಯಕ ಮಾತುಗಳನ್ನೇ ಸಂಭಾಷಣೆಯುದ್ದಕ್ಕೂ ಹೇಳಿದ್ರು. ಇವರು ಪಾಸಿಟಿವ್ ಎನರ್ಜಿಯ ನಿರೂಪಕಿ ಶಕುಂತಲ.


ಅವಮಾನಗುಳು, ಕಷ್ಟಗಳು ಬಂದೇ ಬರುತ್ತವೆ ಅವುಗಳನ್ನೇ ನೆನೆಯುತ್ತ. ಈ ದಿನ, ಈ ಕ್ಷಣವನ್ನು ಹಾಳು ಮಾಡಿಕೊಳ್ಳಬಾರದು. ಎಲ್ಲಾ ಒಳ್ಳೆಯದಾಗುತ್ತೆ ಎನ್ನುವುದು ಶಕುಂತಲ ಅವರು ಕಂಡು ಕೊಂಡ ಸತ್ಯ.


ಶ್ರೀರಂಗಪಟ್ಟಣದವರಾದ ಇವರ ತಂದೆ ದಿ. ವಿಜಯ್ ಕುಮಾರ್, ತಾಯಿ ಭವಾನಿ, ತಂಗಿ ಪಲ್ಲವಿ, ಪತಿ ನಾಗಭೂಷಣ್, ಮಗಳು ಹನ್ಸಿಕ.
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರು ಶ್ರೀರಂಗಪಟ್ಟಣದಲ್ಲಿ, ನಂತರ ಮೈಸೂರಿನ ಕ್ವೀನ್ಸ್ ಕಾಲೇಜಿನಲ್ಲಿ ಫ್ಯಾಷನ್ ಡಿಸೈನಿಂಗ್ ನಲ್ಲಿ ಡಿಪ್ಲೋಮ ಪದವಿಯನ್ನು ಪಡೆದಿದ್ದಾರೆ.


ಶಕುಂತಲ 11ನೇ ವಯಸ್ಸಲ್ಲಿರುವಾಗಲೇ ತಂದೆ ತೀರಿಕೊಳ್ತಾರೆ. ತಾತನ ಆಶ್ರಯದಲ್ಲಿ ಶಕುಂತಲ ಬೆಳೆಯಬೇಕಾಗುತ್ತೆ. ಇಬ್ಬರೂ ಹೆಣ್ಣು ಮಕ್ಕಳಾಗಿದ್ದರಿಂದ ಮುಂದೆ ಒಟ್ಟೊಟ್ಟಿಗೆ ಮದುವೆ ಮಾಡೋಕೆ ಕಷ್ಟವಾಗುತ್ತೆ ಅಂತೇಳಿ ಅಮ್ಮ ಶಕುಂತಲ ಅವರಿಗೆ ಮದುವೆ ಮಾಡಲು ಡಿಸೈಡ್ ಮಾಡ್ತಾರೆ. ಅಮ್ಮನ ಮಾತಿಗೆ ತಲೆಬಾಗಿ ಚಿಕ್ಕ ವಯಸ್ಸಲ್ಲೇ ಶಕುಂತಲ ದಾಪಂತ್ಯಕ್ಕೆ ಕಾಲಿಡ್ತಾರೆ.


ಮದುವೆ, ಮಕ್ಕಳು ಆದ್ಮೇಲೆ ಇಷ್ಟೇ ಕಥೆ. ಇವಳು ಇನ್ನೇನು ಮಾಡಲ್ಲ ಅಂತ ಸಂಬಂಧಿಕರು, ನೆರೆಹೊರೆಯವರು ಹಿಂದಿಂದ ಮಾತಾಡೋಕೆ ಶುರುಮಾಡ್ತಾರೆ. ಯಾರ್ ಏನ್ ಮಾತಾಡ್ಕೊಂಡ್ರು ಶಕುಂತಲ ಆ ಬಗ್ಗೆ ತಲೆ ಕೆಡಿಸಿಕೊಳ್ಳೋಕೆ ಹೋಗ್ಲೇ ಇಲ್ಲ.
ಮದುವೆ ನಂತರ ವಿದ್ಯಾಭ್ಯಾಸ, ಸಾಧನೆ ಅಸಾಧ್ಯ ಎನ್ನುವವರಿಗೆ ಇವರೀಗ ಮಾದರಿ. ಮಾಧ್ಯಮ ವೃತ್ತಿ ಬದುಕು ಆರಂಭಿಸಿದ್ದು ವಿವಾಹದ ಬಳಿಕವೇ.


ಭಕ್ತಿಪ್ರಧಾನ ಕಾರ್ಯಕ್ರಮಗಳ ನಿರೂಪಣೆ ಮಾಡಬೇಕು ಎಂಬುದು ಶಕುಂತಲ ಅವರಾಸೆ ಆಗಿತ್ತು. ಆದರೂ ತಾನು ಮೀಡಿಯಾಕ್ಕೆ ಬರ್ತೀನಿ ಅಂತ ಅನ್ಕೊಂಡಿರ್ಲಿಲ್ಲ. ಫ್ರೆಂಡ್ ಒಬ್ಬರ ರೆಫರೆನ್ಸ್ ಮೇರೆಗೆ 2013ರಲ್ಲಿ ‘ಚಿಂಟು’ ಟಿವಿ ಮುಖೇನ ಮೀಡಿಯಾಕ್ಕೆ ಬಂದ್ರು. ಅಲ್ಲಿ ವಾಯ್ಸ್ ವೋವರ್ ಆರ್ಟಿಸ್ಟ್ ಆಗಿ ಕೆಲಸ ಸ್ವಲ್ಪ ಸಮಯ ಪಾರ್ಟ್ ಟೈಮ್ ಕೆಲಸ ಮಾಡಿದ್ರು. ಜೊತೆಗೆ ‘ಟೈಮ್ಸ್ ಮೊಬೈಲ್ ಟಿವಿ’ಯಲ್ಲೂ ಪ್ರಾಕ್ಟಿಸ್ ಆರಂಭಿಸಿದ್ದರು.


ಪತ್ರಕರ್ತ ನಂದಕುಮಾರ್ ಅವರು ಶಕುಂತಲ ಅವರ ಅತ್ತೆ, ಪತಿಯನ್ನು ಕನ್ವೆನ್ಸ್ ಮಾಡಿ ಇಷ್ಟದ ಮಾಧ್ಯಮ ಲೋಕಕ್ಕೆ ಪರಿಚಯಿಸಿದ್ರು. ತಮ್ಮ ಟೈಮ್ಸ್ ಮೊಬೈಲ್ ಟಿವಿ ಮೂಲಕ ಶಕುಂತಲ ಅವರಿಗೆ ಮೊದಲು ಅವಕಾಶ ಕಲ್ಪಿಸಿದ್ರು.


2014ರಲ್ಲಿ ಶಂಕರ ಟಿವಿ ಸೇರಿದ್ರು. ಇಷ್ಟದ ಡಿವೋಶನಲ್ ಪ್ರೋಗ್ರಾಂಗಳನ್ನು ನಡೆಸಿಕೊಟ್ಟರು. ‘ಸೀನಿಯರ್ ಸಿಟಿಜನ್’ ಎಂಬ ಕಾರ್ಯಕ್ರಮದ ಮೂಲಕ ಮನೆಮಾತಾದರು. ದೇವಸ್ಥಾನ, ಪಾರ್ಕ್‍ಗಳಲ್ಲಿ ಹಿರಿಯ ನಾಗರಿಕರು ಇವರನ್ನು ಗುರುತು ಹಿಡಿದು ಪ್ರೀತಿಯಿಂದ ಮಾತಾಡಿಸಲಾರಂಭಿಸಿದ್ರು.


ಶಂಕರ ಟಿವಿ ಏರ್ಪಡಿಸಿದ್ದ ‘ಆರ್ಟ್ಸ್ ಫಾರ್ ಹ್ಯುಮ್ಯಾನಿಟಿ’ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆ ಪುಸ್ತಕ ಸೇರಿದೆ. ಈ ಕಾರ್ಯಕ್ರಮದಲ್ಲಿ ಸತತ 5 ದಿನ ನಿರೂಪಣೆ ಮಾಡಿದ್ದ ಕೀರ್ತಿ ಶಕುಂತಲ ಅವರದ್ದು. ಇಲ್ಲಿ ಇವರಿಂದ ನಿರೂಪಣೆ ಸಾಧ್ಯವಿಲ್ಲ ಎಂದು ಕೆಲವರು ಹೇಳಿದಾಗ, ಯಾಕಗಲ್ಲಾ ಮಾಡ್ತಾರೆ ಅಂತ ಚಕ್ರವರ್ತಿ ರಾಜಗೋಪಾಲ್ ಅವರು ಪ್ರೋತ್ಸಾಹ ನೀಡಿ ನಿರೂಪಣೆ ಮಾಡಿಸಿದ್ರು. ಇವರು ಮಾಡಿದ ಸಪೋರ್ಟ್‍ಗೆ ಶಕುಂತಲ ಕೃತಜ್ಞತೆ ಸಲ್ಲಿಸ್ತಾರೆ.


2015ರಲ್ಲಿ ‘ಸರಳ ಜೀವನ’ ದ ಬಾಗಿಲು ತೆರೆಯಿತು. ಇಲ್ಲಿ ‘ಮಣ್ಣಿನ ಮಗ’, ‘ಆಚಾರವಿಚಾರ’, ‘ಮಹಾಪಯಣ’ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮಣ್ಣಿನ ಮಗ ಕಾರ್ಯಕ್ರಮದಿಂದ ಇವರನ್ನು ಮಣ್ಣಿನ ಮಗಳು ಎಂದು ಜನ, ಸ್ನೇಹಿತರು ಕರೆಯಲಾರಂಭಿಸಿದ್ರು. ಮಹಾಪಯಣದಿಂದ ರಾಮಾಯಣದ ಸೀತೆ ಪಟ್ಟವನ್ನು ಸ್ನೇಹಿತ್ರು, ವೀಕ್ಷಕರು ನೀಡಿದ್ರು. ಈ ಎರಡು ಕಾರ್ಯಕ್ರಮಗಳು ಅತ್ಯಂತ ಹೆಚ್ಚು ಜನಪ್ರಿಯತೆ ತಂದುಕೊಟ್ಟವು.


ನಿರೂಪಕಿ ದಿವ್ಯಶ್ರೀ, ಶ್ರೀನಿವಾಸ್ ಅವರು ಸಾಕಷ್ಟು ಪ್ರೋತ್ಸಾಹ ನೀಡಿದ್ದು, ಕಲಿಸಿಕೊಟ್ಟಿದ್ದರು ನೆನಪು ಮಾಡಿಕೊಳ್ಳುವುದನ್ನು ಶಕುಂತಲ ಅವರು ಮರೆಯಲ್ಲ.


2016ರ ಕೊನೆಯಲ್ಲಿ ಅಂದು ದಿಗ್ವಿಜಯದ ಮುಖ್ಯಸ್ಥರಾಗಿದ್ದ ಹರಿಪ್ರಕಾಶ್ ಕೋಣೆಮನೆ ಹಾಗೂ ಶರತ್ ಅವರು ದಿಗ್ವಿಜಯದಲ್ಲಿ ಉದ್ಯೋಗ ಕಲ್ಪಿಸಿದ್ರು. ಡಿವೋಶನಲ್ ಪ್ರೋಗ್ರಾಂ ಅಂತ ಏಕೆ ಮಾಡ್ತೀಯ, ನ್ಯೂಸ್ ಕೂಡ ಟ್ರೈ ಮಾಡು ಅಂದ್ರು. ನ್ಯೂಸ್ ಆ್ಯಂಕರಿಂಗ್ ಅನ್ನೂ ಮಾಡಲಾರಂಭಿಸಿದ್ರು. ವಿಶೇಷವಾಗಿ ಇಲ್ಲಿ ‘ವಿದ್ವತ್ ಭಾರತ’ ಇವರ ಸಿಗ್ನೇಚರ್ ಪ್ರೋಗ್ರಾಂ.


ಒಮ್ಮೆ ಆಫೀಸಲ್ಲಿ ನಡೆದ ಸಣ್ಣ ಜಗಳವೊಂದರಿಂದ ನೊಂದು ಈ ಮೀಡಿಯಾ ಸಹವಾಸವೇ ಬೇಡ ಅಂತ ಕೆಲಸ ಬಿಡಲು ಮುಂದಾಗಿದ್ರು. ನಾಲ್ಕೈದು ದಿನ ಕೆಲಸಕ್ಕೇ ಹೋಗಿರ್ಲಿಲ್ಲ. ಆಗ ಹರಿಪ್ರಕಾಶ್ ಕೋಣೆಮನೆ ಮತ್ತು ಶರತ್ ಅವರು ಕರೆಸಿ, ‘ಮನೆಯಲ್ಲಿರೋ ನಾಲ್ಕು ಜನರ ನಡುವೆಯೇ ಭಿನ್ನಾಭಿಪ್ರಾಯಗಳು ಇರುವಾಗ ಇಷ್ಟು ದೊಡ್ಡ ಕಚೇರಿಯಲ್ಲಿ ಭಿನ್ನಾಭಿಪ್ರಾಯ ಇಲ್ಲದೇ ಇರುತ್ತದೆಯೇ..’? ಎಂದು ಬುದ್ಧಿಮಾತು ಹೇಳಿ, ಮನಪರಿವರ್ತಿಸಿ ಕೆಲಸ ಬರುವಂತೆ ಮಾಡಿದ್ದರು. ದಿಗ್ವಿಜಯದಲ್ಲಿ ಇವರಿಬ್ಬರು ನೀಡುತ್ತಿದ್ದ ಪ್ರೋತ್ಸಾಹವನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುತ್ತಾರೆ ಶಕುಂತಲ.


ಪಬ್ಲಿಕ್ ಟಿವಿಯಲ್ಲಿ ಕೆಲಸ ಮಾಡೋದು ಕಷ್ಟ, ವರ್ಕ್ ಲೋಡ್ ಸಿಕ್ಕಾಪಟ್ಟೆ ಇರುತ್ತೆ. ರಂಗನಾಥ್ ಅವರ ಜೊತೆ ಕೆಲಸ ಮಾಡೋದು ಕಷ್ಟ ಅಂತ ಕೆಲವರು ತಲೆಗೆ ತುಂಬಿದ್ದರು. ಆದ್ದರಿಂದ ಅಲ್ಲಿಗೆ ಹೋಗಿರಲಿಲ್ಲ. ಹರೀಶ್ ನಾಗರಾಜ್ ಅವರು ಮಾತಾಡಿ ಹಾಗೇನು ಇಲ್ಲ ಅಂತ ಅರ್ಥ ಮಾಡಿಸಿದ್ರು.


ಇತ್ತೀಚೆಗೆ ಸ್ವತಃ ಎಚ್.ಆರ್ ರಂಗನಾಥ್ ಅವರೇ ಫೋನ್ ಮಾಡಿ ಬರ್ತಿಯಾ, ಬರಲ್ವಾ..? ಅಂತ ಕೇಳಿದಾಗ ಸರಿ ಬರ್ತೀನಿ ಅಂದ್ರು. ಅಷ್ಟು ದೊಡ್ಡವರು ಕರೆದಾಗ ಇಲ್ಲ ಎನ್ನಲಾಗದೆ ಪ್ರೀತಿ, ಹೆಮ್ಮೆಯಿಂದ ಪಬ್ಲಿಕ್ ಟಿವಿ ಬಳಗ ಸೇರಿದ್ದಾರೆ. ಮೊನ್ನೆ 15ರಿಂದ (ಜನವರಿ 2018) ಪಬ್ಲಿಕ್ ಟಿವಿ ಪರದೆ ಮೇಲೆ ಕಾಣಿಸಿಕೊಳ್ತಿದ್ದಾರೆ.


ಇದಕ್ಕು ಮೊದಲು ಮೂರು ವರ್ಷದ ಹಿಂದೆ ಮಾಧ್ಯಮಕ್ಕೆ ಬರೋ ಮುನ್ನವೇ ಪಬ್ಲಿಕ್ ಟಿವಿಯಲ್ಲಿ ಶಕುಂತಲ ಆನ್ ಏರ್ ಆಗಿದ್ರು. ಒಮ್ಮೆ ಜೋರು ಮಳೆ ಬರ್ತಿದ್ದಾಗ ವಯಸ್ಸಾದ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದರು. ಅವರ ಸಹಾಯಕ್ಕೆ ಯಾರೂ ಹೋಗಿರಲ್ಲಿಲ್ಲ. ಮಳೆ ನೀರು ಬಾಯಿ, ಮೂಗಿನೊಳಗೆ ಹೋಗ್ತಿತ್ತು. ಇದನ್ನು ಕಂಡು ಎಲ್ಲಾ ಮೀಡಿಯಾದವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ರು. ಜನಪರ ಅಂತ ಬೊಂಬಡೆ ಹೊಡ್ಕೊಳ್ಳೋ ಯಾರೂ ಹೆಲ್ಪ್ ಗೆ ಬರಲಿಲ್ಲ…! ಕೆಲವರು ನೀವೇ ಪ್ಯಾಕೇಜ್ ಮಾಡಿ ಕಳುಹಿಸಿ ಅಂತ ಹೇಳಿದ್ರಂತೆ..!

ಕೊನೆಯದಾಗಿ ನೇರವಾಗಿ ಪಬ್ಲಿಕ್ ಟಿವಿ ರಂಗನಾಥ್ ಅವರಿಗೆ ಕರೆ ಮಾಡಿ, ಹೀಗಾಗಿದೆ ಚಾನಲ್ ಅವರೆಲ್ಲಾ ಹೀಗೆಲ್ಲಾ ಮಾತಾಡ್ತಿದ್ದಾರೆ. ನಿಮ್ಮವರನ್ನಾದರೂ ಕಳುಹಿಸುತ್ತೀರ ಅಂತ ಕೇಳಿದ್ರು…! ಕೂಡಲೇ ರಂಗನಾಥ್ ಅವರು ಸ್ಪಂದಿಸಿ ಅವರ ವರದಿಗಾರರನ್ನು ಕಳುಹಿಸಿ ಕೊಟ್ಟಿದ್ರು. ಇವರು ಮಾಡಿದ ಸಹಾಯದಿಂದ ಆ ತಾತ ಸ್ವಲ್ಪ ದಿನ ಬದುಕುಳಿದಿದ್ರು.


ಸಾಕಷ್ಟು ಸ್ಟೇಜ್ ಪ್ರೋಗ್ರಾಂಗಳನ್ನು ನಡೆಸಿಕೊಟ್ಟ ಅನುಭವ ಶಕುಂತಲ ಅವರ ಜೊತೆಗಿದೆ. ನೃತ್ಯ, ಸಂಗೀತ, ಓದು ಇವರ ಹವ್ಯಾಸ. ಆರಂಭದ ದಿನಗಳಲ್ಲಿ ಕೆಲವರು, ಈಕೆಯಿಂದ ಆ್ಯಂಕರಿಂಗ್ ಸಾಧ್ಯವಿಲ್ಲ. ಕಂಡಾಪಟ್ಟೆ ರೀ ಟೇಕ್ ತೆಗೆದುಕೊಳ್ತಾರೆ ಅಂತೆಲ್ಲಾ ಹಿಂದಿಂದ ಮಾತಾಡಿದ್ದು ಉಂಟು. ಮೀಡಿಯಾ ಬಗ್ಗೆ ಏನೂ ಗೊತ್ತಿರದೆ ಇರುವಾಗ ಕಲಿಸಿಕೊಡಬೇಕೇ ವಿನಃ ಚುಚ್ಚಿ ಮಾತಾಡಿದ್ದು ಸರಿಯಲ್ಲ. ಅದಕ್ಕೆ ಶಕುಂತಲ ಅವರೆಂದು ತಲೆ ಕೆಡಿಸಿಕೊಳ್ಳಲಿಲ್ಲ. ಪಾಸಿಟಿವ್ ಥಿಂಕಿಂಗ್ ಮೂಲಕ ಗೆದ್ದು ತೋರಿಸಿದ್ದಾರೆ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

39)18ಡಿಸೆಂಬರ್ 2017 :  ನಾಝಿಯಾ ಕೌಸರ್

40) 19ಡಿಸೆಂಬರ್ 2017 :  ಶ್ರುತಿಗೌಡ

41) 20ಡಿಸೆಂಬರ್ 2017 :  ಎಂ.ಆರ್ ಶಿವಪ್ರಸಾದ್

42) 21ಡಿಸೆಂಬರ್ 2017 :  ವೆಂಕಟೇಶ್ ಉಳ್ತೂರು (ವೆಂಕಟೇಶ್ ಅಡಿಗ)

43) 22ಡಿಸೆಂಬರ್ 2017 :  ಶರ್ಮಿತಾ ಶೆಟ್ಟಿ

44) 23ಡಿಸೆಂಬರ್ 2017 :  ಕಾವ್ಯ

45) 24ಡಿಸೆಂಬರ್ 2017 :  ಹರ್ಷವರ್ಧನ್ ಬ್ಯಾಡನೂರು

46) 25ಡಿಸೆಂಬರ್ 2017 : ಸುಧನ್ವ ಖರೆ

47) 26ಡಿಸೆಂಬರ್ 2017 : ಸೌಜನ್ಯ ಕೀರ್ತಿ

48) 27ಡಿಸೆಂಬರ್ 2017 :ವಾಣಿ ಕೌಶಿಕ್

49) 28ಡಿಸೆಂಬರ್ 2017 : ಸುಗುಣ

50) 29ಡಿಸೆಂಬರ್ 2017 : ಜಯಪ್ರಕಾಶ್ ಶೆಟ್ಟಿ

ಡಿಸೆಂಬರ್ ೩೦ ಮತ್ತು ೩೧ ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ.

51) 01ಜನವರಿ 2018 :ಐಶ್ವರ್ಯ ಎ.ಎನ್

52) 02ಜನವರಿ 2018 :ಶ್ರೀಧರ್ ಆರ್

53) 03ಜನವರಿ 2018 : ದಿವ್ಯಶ್ರೀ

54) 04ಜನವರಿ 2018 : ಮಂಜುಳ ಮೂರ್ತಿ

55) 05ಜನವರಿ 2018 : ಅಭಿಷೇಕ್ ರಾಮಪ್ಪ

56) 06ಜನವರಿ 2018 : ರೋಹಿಣಿ ಅಡಿಗ

57) 07ಜನವರಿ 2018 :ಮಾದೇಶ್ ಆನೇಕಲ್

58) 08ಜನವರಿ 2018 :ಶ್ರುತಿ ಕಿತ್ತೂರು

59) 09ಜನವರಿ 2018 : ಕೆ.ಸಿ ಶಿವರಾಂ

ಜನವರಿ 10 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

60)  11ಜನವರಿ 2018 : ಮಾರುತೇಶ್

61)  12ಜನವರಿ 2018 :ನೀತಿ ಶ್ರೀನಿವಾಸ್

62) 13ಜನವರಿ 2018 :ರಕ್ಷಾ ವಿ

ಜನವರಿ 15 ರಂದು ಈ ಸರಣಿ ಲೇಖನ ಪ್ರಕಟವಾಗಿಲ್ಲ

63) 15ಜನವರಿ 2018  :  ಸುಮ ಸಾಲಿಯಾನ್

64) 16ಜನವರಿ 2018  : ಶಕುಂತಲ

 

1 COMMENT

LEAVE A REPLY

Please enter your comment!
Please enter your name here