ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

Date:

ಗಂಡನನ್ನೇ ಸರ್ವಸ್ವವೆಂದು ಗಂಡನಿಗಾಗಿ ಇಡೀ ಜೀವನವನ್ನೇ ಸವೆಸಿದ ಮಹಿಳೆಯರನ್ನು ನೀವು ನೋಡಿದ್ದೀರಿ..! ಗಂಡನ ಸೇವೆಯನ್ನು ಭಕ್ತಿಯಿಂದ ಮಾಡೋ ಹೆಂಡತಿಯರನ್ನು ನೀವು ಕಂಡಿದ್ದೀರಿ..! ಹಾಸಿಗೆ ಹಿಡಿದಿರೋ ಗಂಡನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿರೋ ಪತ್ನಿಯರನ್ನೂ ನೀವು ನೋಡಿರ್ತೀರಿ..! ಆದರೆ ಹೆಂಡತಿಯ ಸೇವೆಯನ್ನು ಮಾಡೋ ಗಂಡನನ್ನು ನೋಡಿದ್ದೀರಾ..?! ಹೆಂಡತಿಯೇ ನನ್ನ ಸರ್ವಸ್ವವೆಂದು ಆಕೆಯ ಸೇವೆ ಮಾಡುವ ಗಂಡಸರು ತುಂಬಾ ಕಡಿಮೆ..! ಚೀನಾದಲ್ಲೊಬ್ಬರು 59 ವರ್ಷಗಳಿಂದ ತನ್ನ ಹೆಂಡತಿಯ ಸೇವೆಯನ್ನು ಮಾಡ್ತಾ ಬಂದಿದ್ದಾರೆ..! ಜೀವನದಲ್ಲಿ ತನ್ನೆಲ್ಲಾ ಸುಖವನ್ನೂ ಬದಿಗೊತ್ತಿ ಹೆಂಡತಿಗಾಗಿಯೇ ಜೀವನವನ್ನು ಕಳೀತಾ ಇದ್ದಾರೆ..!
ಹೌದು, ಅವರು ಪೂರ್ವ ಚೀನಾದ ಷಾನ್ಡಾಂಗ್ ಪ್ರಾಂತ್ಯದ ಶುನ್ಜಾಯು ಎಂಬಲ್ಲಿಯವರು. ಹೆಸರು `ಡು ಯುಫಾ’. ಕಲ್ಲಿದ್ದಲು ಗಣಿಯಲ್ಲೊಂದು ಕೆಲಸವಿತ್ತು. ಆ ಕೆಲಸವೇ ಇವರ ಜೀವನಾಧಾರವಾಗಿತ್ತು..! ಕೆಲಸಕ್ಕೆ ಸೇರಿ ಕೆಲವು ವರ್ಷಗಳಾದ್ಮೇಲೆ ಮದುವೆಯೂ ಆದ್ರೂ. ಅವರ ಹೆಂಡತಿ `ಝೋ ಯು ಐ’. ನವ ದಂಪತಿಗಳಿಬ್ಬರೂ ಸಂತಸ ಜೀವನವನ್ನು ನಡೆಸ್ತಾ ಇದ್ರು. ಹೀಗಿರುವಾಗಲೇ ಇದ್ದಕ್ಕಿದ್ದಂತೆ ಝೋ ಅವರ ಆರೋಗ್ಯ ಕೆಡುತ್ತೆ..! ಔಷಧ ಕೊಡಿಸಿದರೂ ಗುಣಮುಖರಾಗುವುದೇ ಇಲ್ಲ..! ಮದುವೆ ಆದ ಐದೇ ಐದು ತಿಂಗಳೊಳಗೆ ಹಾಸಿಗೆ ಹಿಡಿದ ಝೊ ಇವತ್ತಿಗೂ ಹಾಸಿಗೆ ಇಂದ ಎದ್ದೇ ಇಲ್ಲ..!
ಝೋ ಹಾಸಿಗೆ ಹಿಡಿದಿದ್ದರಿಂದ ಡು 1959 ರಲ್ಲೇ ತನ್ನ ಕೆಲಸವನ್ನೂ ಬಿಟ್ಟರು..! ಝೋ ಹಾಸಿಗೆ ಹಿಡಿದಿದ್ದು ತನ್ನ 20 ನೇ ವರ್ಷದಲ್ಲಿ..! ಅಷ್ಟೊಂದು ಚಿಕ್ಕ ವಯಸ್ಸಲ್ಲೇ ಹಾಸಿಗೆ ಹಿಡಿದ ಝೋರನ್ನು ನೋಡಿಕೊಳ್ಳೋಕೆ ಯಾರೂ ಇರ್ಲಿಲ್ಲ..! ಆಕೆಯನ್ನು ನೋಡಿಕೊಳ್ಳೋಕೆ ಬೇರೆ ಯಾರೂ ಬೇಡ ನಾನಿದ್ದೇನೆ ಅಂತ `ಡು ಯುಫಾ’ ಹೆಂಡತಿ ಸೇವೆಗಾಗಿ ಮನೆಯಲ್ಲೇ ಉಳಿದುಕೊಂಡು ಬಿಟ್ಟರು. ಕೆಲಸ ಇಲ್ಲ..?! ಹೆಂಡತಿಯೇ ಸೇವೆಯೇ ಅವರಿಗೆ ಮುಖ್ಯವೆನಿಸಿತು..!

ಕೆಲಸ ಬಿಟ್ಟು ಹೆಂಡತಿಯನ್ನೇನೋ ನೋಡಿಕೊಳ್ಳೋದು ದೊಡ್ಡ ವಿಷಯವಲ್ಲ..! ಅದು ಕರ್ತವ್ಯವೂ ಹೌದು. ಆದರೆ ಕೆಲಸ ಇಲ್ಲದೇ ಇದ್ದರೆ ಹೊಟ್ಟೆಗೇನು ಗತಿ..?! ಆಹಾರ ಬೇಕಲ್ಲಾ..?! ಅದಕ್ಕಾಗಿ ಡು ಆರಿಸಿಕೊಂಡಿದ್ದು ಕೃಷಿಯನ್ನು..! ತಮಗೆ ಬೇಕಾದಷ್ಟು ಕೃಷಿಯನ್ನು ಮಾಡ್ತಾ ಮಾಡ್ತಾನೇ ಕಾಲ ಕಳೆಯುತ್ತಿರೋ ಡು, ಸಂವೇದನೆ ಕಳೆದುಕೊಂಡಿರೋ ಹೆಂಡತಿಯನ್ನೂ ನೋಡಿಕೊಳ್ತಾ ಇದ್ದಾರೆ..! ಅವರ ಹೆಂಡತಿ ಮಾತೂ ಆಡಲ್ಲ..! ಅವರಿಗೆ ಏನೂ ಗೊತ್ತಾಗಲ್ಲ..! ಪಾಪ ಒಂದರ್ಥದಲ್ಲಿ ಅವರು ಜೀವಂತ ಶವ..! ಹೆಂಡತಿ ಸ್ಥಿತಿ ಹೀಗಿರುವಾಗ ಲೂ ಬೇರೆ ಯಾರ ಹಂಗಲ್ಲೂ ಇರದೇ ತಾನೇ ಆಕೆಯನ್ನು ನೋಡಿಕೊಳ್ತಾ ಇದ್ದಾರೆ..! ಊಟವನ್ನೂ ಮಾಡಿಸುತ್ತಾ ಇದ್ದಾರೆ..! ಎಲ್ಲಾ ಕೆಲಸವನ್ನೂ ಇವರೇ ಮಾಡಿಸೋದು..?! ಅವರಿಗೆ ಏನೇನೂ ಗೊತ್ತಾಗಲ್ಲ..!

ಚೀನಾದ ಗಿಡಮೂಲಿಕೆಗಳನ್ನು ಇವರಿಗೆ ನೀಡಲಾಗ್ತಾ ಇದೆ..! ಈ ಗಿಡಮೂಲಿಕೆಗಳಿಂದ ಖಂಡಿತಾ ತನ್ನ ಹೆಂಡತಿ ಗುಣಮುಖರಾಗ್ತಾರೆ.. ಅನ್ನೋ ನಂಬಿಕೆ ಇವರಿಗಿದೆ..! ಗಿಡಮೂಲಿಕೆಯನ್ನೇ ಬಳಸಿದ ಆಹಾರ ಪದಾರ್ಥಗಳನ್ನು ನೀಡ್ತಾ ಇರುವುದರಿಂದ ಅವು ವಿಷಕಾರಿಯೇ ಅಲ್ಲವೇ ಎಂದು ಪರೀಕ್ಷಿಸುವ ಸಲುವಾಗಿ ಆಕೆಗೆ ಕೊಡುವ ಮೊದಲು ತಾನೇ ತಿಂದು ನೋಡ್ತಾರೆ..! ತಾನು ತಿಂದು ಓಕೆ, ಕೊಡಬಹುದು ಅಂತ ಅನಿಸಿದ ಮೇಲೆಯೇ ಹೆಂಡತಿಗೆ ಕೊಡೋದು..!
ಡು ಗೆ ಈಗ 84 ವರ್ಷ..! ಕಳೆದ 59 ವರ್ಷದಿಂದ ಸಂವೇದನೆಯನ್ನೇ ಕಳೆದುಕೊಂಡಿರೋ ಹೆಂಡತಿ ಸೇವೆಯನ್ನು ಮಾಡ್ತಾ ಇದ್ದಾರೆ..! ಹೆಚ್ಚು ಕಡಿಮೆ ಮದುವೆಯಾಗುವಾಗ ಇವರಿಗೆ 25 ವರ್ಷ..! ಆಗಲೇ ಸ್ನೆಹಿತರು ಮತ್ತೊಂದು ಮದುವೆ ಆಗೆಂದು ಹೇಳಿದರೂ ಡು ಆಗಲಿಲ್ಲ..! ನನ್ನ ಸ್ವಾರ್ಥಕ್ಕಾಗಿ ಬೇರೆ ಹುಡುಗಿಯನ್ನು ಮದುವೆ ಆದರೆ ಇವಳ ಕಥೆ..?! ನಾನಲ್ಲದೇ ಬೇರ್ಯಾರು ನೋಡಿಕೊಳ್ತಾರೆ ಅಂತ ಹೆಂಡತಿ ಝೋಳ ಸೇವೆಯಲ್ಲೇ ಸುಖ ಕಾಣ್ತಾ ಬಂದಿದ್ದಾರೆ..! ಆ ಯೌವನದ ಯಾವುದೇ ಸುಖವನ್ನೂ ಕಾಣದೇ.. ಸಂತಸವನ್ನೂ ಅನುಭವಿಸಿದೆ.. ಹೆಂಡತಿಗಾಗಿಯೇ ಸರ್ವಸ್ವವನ್ನು ತ್ಯಾಗ ಮಾಡಿರೋ ಈ ಡು ರಂಥವರು ತುಂಬಾ ಅಪರೂಪ..! ಬದುಕಿನ ಕೊನೆಯಲ್ಲಾದರೂ ಸ್ವಲ್ಪ ಮಟ್ಟಿಗಾದರೂ ಅವರ ಹೆಂಡತಿ ಸುಧಾರಿಸಿಕೊಳ್ಳಲಿ..! ಅವರ ಮುಖದಲ್ಲೊಂದು ಸಣ್ಣ ನಗು ಮೂಡಲಿ..! ಕೊನೆಗಾಲದಲ್ಲಾದರೂ ಮನಸ್ಸಿಗೆ ನೆಮ್ಮದಿ ಸಿಗಲಿ..! ಎಲ್ಲವೂ ದೇವರ ದಯೆ ಅಷ್ಟೇ….?!

  • ಶಶಿಧರ ಡಿ ಎಸ್ ದೋಣಿಹಕ್ಲು.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...