ಆರು ಎಕರೆ ಭೂಮಿ ಖರೀದಿಸಿ ಕ್ರಿಕೆಟ್ ಕೃಷಿ ಮಾಡುತ್ತಿರೋ ಪೂಜಾರ..!

1
63

ತಾನೊಬ್ಬ ಬೆಳೆದರೆ ಸಾಲದು.. ನನ್ನವರೂ ಬೆಳೆಯಬೇಕು..! ತಾನು ಸೇವೆ ಸಲ್ಲಿಸುತ್ತಿರೋ ಕ್ಷೇತ್ರವೂ ಬೆಳೆಯಬೇಕು..! ನನಗೆ ಅನ್ನ ನೀಡ್ತಾ ಇರೋ ಕ್ಷೇತ್ರ ಬೆಳಗಬೇಕು..! ಅದು ವಿರಾಜಿಸಲು ಯುವಕರು ಹೆಚ್ಚು ಹೆಚ್ಚು ಬರಲೇ ಬೇಕು..! ಅದಕ್ಕಾಗಿ ನಾನು ಯುವಕರಿಗೆ ಪ್ರೋತ್ಸಾಹ ನೀಡಬೇಕು..! ಈ ರೀತಿ ಯೋಚನೆ ಮಾಡೀರ ಸಂಖ್ಯೆ ತುಂಬಾ ಕಡಿಮೆ..! ಇಂಥವರು ತುಂಬಾ ಅಪರೂಪ..! ಇಂಥಾ ಅಪರೂಪದ ವ್ಯಕ್ತಿಗಳ ಸಾಲಿಗೆ ಸೇರಿದ್ದಾರೆ ಪೂಜಾರ..! ಹೌದು ನೀವು ಅಂದು ಕೊಂಡಿರೋದು ಸರಿಯೇ ಇದೆ.. ನಮ್ಮ ಕ್ರಿಕೆಟಿಗ `ಚೇತೇಶ್ವರ್ ಪೂಜಾರ’..!
ಒಬ್ಬ ಕ್ರಿಕೆಟಿಗನಾಗಿ ಒಳ್ಳೆಯ ಹೆಸರನ್ನು, ಕೀರ್ತಿಯನ್ನೂ ಸಂಪಾದಿಸಿರೋ ಚೇತೇಶ್ವರ್ ಪೂಜಾರರ ಬಳಿ ಇವತ್ತು ಬೇಜಾನ್ ದುಡ್ಡಿದೆ..! ಬೇಕೆನಿಸಿದರೆ ಬೇರೆಯವರಂತೆ ವಿದೇಶಿ ಐಷಾರಾಮಿ ಕಾರುಗಳನ್ನು ಕೊಂಡು ಕೊಳ್ಳ ಬಹುದು, ಬೇಕಾದಂಗೆ ಐಷಾರಾಮಿ ಜೀವನವನ್ನು ನಡೆಸಬಹುದು..! ಆದರೆ ಪೂಜಾರ ಐಷರಾಮಿ ಬಂಗಲೆಯನ್ನಾಗಲೀ, ಕಾರನ್ನಾಗಲೀ ಖರೀದಿಸಿಲ್ಲ..! ಬದಲಾಗಿ ಆರು ಎಕರೆ ಭೂಮಿಯನ್ನು ಖರೀದಿಸಿದ್ದಾರೆ..! ಆ ಭೂಮಿಯಲ್ಲಿ ಫಸಲು ತೆಗೆಯಲು ಹೊರಟಿದ್ದಾರೆ..!
ಏನ್ ಗುರೂ, ಪೂಜಾರ ಭೂಮಿ ತಗೊಂಡು ಕೃಷಿ ಮಾಡೋಕೆ ಹೊರಟಿದ್ದಾರ ಅಂತ ಕೇಳ್ತಾ ಇದ್ದೀರಾ..?! ಹೌದು ಸ್ವಾಮಿ ನಮ್ಮ ಚೇತೇಶ್ವರ ಪೂಜಾರ ಆರು ಎಕರೆ ಭೂಮಿ ತಗೊಂಡು ಕೃಷಿ ಮಾಡೋಕೆ ಹೊರಟಿದ್ದಾರೆ..! ಆದರೆ ನೀವೊಂದು ಕೊಂಡಿರೋ ಕೃಷಿ ಅಲ್ಲ.. ಅವರು ಮಾಡ ಹೊರಟಿರೋದು ಕ್ರಿಕೆಟ್ ಕೃಷಿ..!
ಹ್ಞಾಂ, ರಾಜ್ ಕೋಟ್ನಲ್ಲಿ ಆರು ಎಕರೆ ಭೂಮಿಯನ್ನು ಕೊಂಡು ಕೊಂಡಿರೋ ಪೂಜಾರ ಯುವ ಕ್ರಿಕೆಟಿಗರಿಗಾಗಿ ತರಬೇತಿ ಆರಂಭಿಸಿದ್ದಾರೆ..! ತರಬೇತಿ ಕೇಂದ್ರವನ್ನು ನಿರ್ಮಿಸಿ ಕ್ರಿಕೆಟ್ ನಲ್ಲಿ ಜೀವನ ಕಂಡುಕೊಳ್ಳಬೇಕೆಂದು ಆಸೆ ಇರೋ ಹುಡುಗರಿಗೆ ತರಬೇತಿ ನೀಡ್ತಾ ಇದ್ದಾರೆ..! ಈಗಾಗಲೇ ಪೂಜಾರರ ಬಳಿಯಲ್ಲಿ 30 ವಿದ್ಯಾರ್ಥಿಗಳು ಕ್ರಿಕೆಟ್ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ..! ಪೂಜಾರ ತನ್ನ ವಿದ್ಯಾರ್ಥಿಗಳಿಂದ ಒಂದೇ ಒಂದು ಪೈಸೆ ಹಣವನ್ನೂ ಪಡೆಯುತ್ತಿಲ್ಲ..! ಸಂಪೂರ್ಣ ಉಚಿತವಾಗಿ ಕ್ರಿಕೆಟ್ ಪಾಠವನ್ನು ಮಾಡ್ತಾ ಇದ್ದಾರೆ..!
ದಿನನಿತ್ಯ ಅಭ್ಯಾಸ ಮಾಡಲು ರಾಜ್ಕೋಟ್ ನಲ್ಲಿ ಮೈದಾನವಿಲ್ಲ. ಅಭ್ಯಾಸಕ್ಕಾಗಿ ಒಳ್ಳೆಯ ನೆಟ್ ಪ್ರಾಕ್ಟಿಸ್ ಗೆ ಅನುಕೂಲವಾಗುವ ಮುಂಬೈನ ಶಿವಾಜಿ ಪಾರ್ಕ್ ಗೋ, ಹೋಗ್ಬೇಕಾಗುತ್ತೆ..! ನನಗೇನೋ ಅದೃಷ್ಟವಿತ್ತು ರೈಲ್ವೆ ನಮಗೆ ಅಭ್ಯಾಸಕ್ಕಾಗಿ ಪಿಚ್ ಅನ್ನು ಒದಗಿಸಿತು..! ಆದರೆ ಇವತ್ತಿನ ಮಕ್ಕಳಿಗೆ ಇಂಥಾ ಅವಕಾಶವಿಲ್ಲ. ಅವರು ಮುಂಬೈಗೆ ಹೋಗಲೇ ಬೇಕಾಗುತ್ತೆ..!ಆದ್ದರಿಂದ ಕ್ರಿಕೆಟ್ ಬಗ್ಗೆ ಆಸಕ್ತಿ ಇರೋ ಮಕ್ಕಳಿಗೆ ಕ್ರಿಕೆಟ್ ಹೇಳಿಕೊಡೋಣ ಅಂತ ಈ ಭೂಮಿಯನ್ನು ಕೊಂಡುಕೊಂಡು ಉಚಿತ ತರಬೇತಿ ನೀಡುತ್ತಿದ್ದೇನೆಂದು ಪೂಜಾರ ಹೇಳುತ್ತಾರೆ..!
ಪೂಜಾರರ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಕ್ರಿಕೆಟ್ ಕಿಟ್ ಇಲ್ಲ..! ಅದನ್ನೂ ಪೂಜಾರರೇ ಒದಗಿಸಿದ್ದಾರೆ..!
ಇವರ ತರಬೇತಿ ಸಂಸ್ಥೆಯಲ್ಲಿ ಇರುವ ಸೌಕರ್ಯಗಳು
* ಸಣ್ಣದಾದ ಜಿಮ್
* ಡ್ರೆಸ್ಸಿಂಗ್ ರೂಂ
* ಬ್ಯಾಟರಿ ಚಾಲಿತ ಬೌಲಿಂಗ್ ಯಂತ್ರ
* ಒಂದು ತಿಂಗಳ ಹಿಂದಷ್ಟೇ ಕೊಂಡುಕೊಂಡ ರೋಲರ್ ಮೆಶಿನ್
* ಸ್ನಾನಗೃಹ (ನಿರ್ಮಾಣ ಹಂತದಲ್ಲಿದೆ)
* ಚಿಕ್ಕದಾದ ವಿರಾಮ ಕೊಠಡಿ (ನಿರ್ಮಾಣ ಹಂತದಲ್ಲಿದೆ)
ಬಿಡುವು ಮಾಡಿಕೊಂಡು ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿಕೊಡುತ್ತಿರುವ ಚೇತೇಶ್ವರ್ ಪೂಜಾರ “ನನಗೆ ಇವತ್ತು ಯಾವುದಕ್ಕೂ ಕಡಿಮೆ ಆಗಿಲ್ಲ…! ದುಡ್ಡನ್ನು ಅನಗತ್ಯ ಖರ್ಚು ಮಾಡುವುದಕ್ಕಿಂತ ಹೀಗೆ ಮಕ್ಕಳಿಗೆ ಖರ್ಚು ಮಾಡೋಣ ಅಂತ ಭೂಮಿಯನ್ನು ಖರೀದಿಸಿ ತರಬೇತಿ ನೀಡ್ತಾ ಇದ್ದೇನೆ” ಎಂದು ಹೇಳುತ್ತಾರೆ..!
ಪೂಜಾರ ಅವರೂ ವಿಶ್ವ ಕ್ರಿಕೆಟನಿಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ..! ಸ್ವಾರ್ಥವಿಲ್ಲದೇ ಉಚಿತವಾಗಿ ಯುವ ಕ್ರಿಕೆಟ್ ನ್ನು ಬೆಳೆಸುತ್ತಿರೋ ಪೂಜಾರರವಿಗೆ ಶುಭವಾಗಲಿ..! ಇನ್ನೂ ಅನೇಕ ಮರಿ ಪೂಜಾರರು ಭಾರತ ಕ್ರಿಕೆಟ್ ಗೆ ಕೊಡುಗೆ ನೀಡುವಂತಾಗಲಿ..! ಚೇತೇಶ್ವರ್ ಪೂಜಾರ ನಿಮಗೆ ಒಳ್ಳೆಯದಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

1 COMMENT

LEAVE A REPLY

Please enter your comment!
Please enter your name here