ಚುನಾವಣೆ ವೇಳೆ ರಷ್ಯಾ ಅಸ್ತಕ್ಷೇಪ ಆರೋಪ: ಸೈಬರ್ ಅಕ್ರಮಗಳ ತನಿಖೆಗೆ ಒಬಾಮಾ ಆದೇಶ..!

Date:

ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವೇಳೆ ದ್ವೇಷಪೂರಿತ ದಾಳಿಗಳು ಮತ್ತು ಚಟುವಟಿಕೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಗುಪ್ತಚರ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷೀಯ ಚುನಾವಣೆಯ ವೇಳೆ ರಷ್ಯಾ ಹಸ್ತಕ್ಷೇಪ ಮಾಡಿದೆ ಹಾಗೂ ರಾಜಕೀಯ ವಲಯಗಳಲ್ಲಿ ಹೆಚ್ಚುತ್ತಿರುವ ಕಳವಳದ ಹಿನ್ನಲೆಯಲ್ಲಿ ಅಧ್ಯಕ್ಷರು ಈ ಆದೇಶ ನೀಡಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ. ಇನ್ನು ಅಧ್ಯಕ್ಷೀಯ ಚುನಾವಣೆಯ ವೇಳೆ ಹಗೆತನದಿಂದ ನಡೆದಿರುವ ಸೈಬರ್ ದಾಳಿ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಬೇಹುಗಾರಿಕೆ ದಳದ ಸಿಬ್ಬಂದಿಗೆ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಧಿಕಾರವಧಿ ಕೊನೆಗೊಳ್ಳುವುದರೊಳಗೆ ಈ ವರದಿಯನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ. ಚುನಾವಣಾ ವೇಳೆ ಸೈಬರ್ ದಾಳಿಯನ್ನು ನಡೆಸುವ ಮೂಲಕ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ವರದಿಗಳು ವಿವಾದದ ಸ್ವರೂಪ ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಅಧ್ಯಕ್ಷರು ತನಿಖೆಗೆ ಆದೇಶ ನೀಡಿದ್ದಾರೆ ಎಂದು ವೈಟ್ ಹೌಸ್‍ನ ಉಪ ಪತ್ರಿಕಾ ಕಾರ್ಯದರ್ಶಿ ಎರಿಕ್ ಶೂಲ್ಟ್ಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...