ಯಾರನ್ನೂ ನಂಬಲು ಆಗಲ್ಲ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ಏನನ್ನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದೇ ರೀತಿ ಇಲ್ಲಿ ಪತ್ನಿಯೊಬ್ಬಳು ಆಸ್ತಿಗಾಗಿ ಪತಿಯ ಕೊಲೆಗೆ ಸುಪಾರಿ ಕೊಟ್ಟಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕುಲವನಹಳ್ಳಿಯ ನೇತ್ರಾವತಿ ಎಂಬಾಕೆ ಆರೋಪಿ. ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವಿಯ ರಂಗಸ್ವಾಮಿ ಎಂಬುವವರು ನತದೃಷ್ಟ ಪತಿ.
ಆಸ್ತಿಗಾಗಿ ಪತ್ನಿ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಎಂದು ರಂಗಸ್ವಾಮಿ ಆರೋಪಿಸಿದ್ದಾರೆ.
ನೇತ್ರಾವತಿ ತನ್ನ ಮೈದುನನ ಜೊತೆ ಸೇರಿ ರಂಗಸ್ವಾಮಿ ಕೊಲೆಗೆ ಸುಪಾರಿ ಕೊಟ್ಟಿದ್ದಾಳೆ ಅನ್ನೋದು ಆರೋಪ.
ಜೀವ ಭಯದಿಂದ ರಂಗಸ್ವಾಮಿ ಈಗಾಗಲೇ ಊರು ಸೇರಿದ್ದಾರೆ.
ಹೆಂಡತಿ ಹಾಗೂ ಸಹೋದರ ಮತ್ತಿತರ ಸಂಬಂಧಿಗಳಿಂದ ನೊಂದು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆಂದು ವರದಿಯಾಗಿದೆ. ಪೊಲೀಸರ ನೆರವು ಸಿಕ್ಕಿಲ್ಲ ಎನ್ನಲಾಗಿದೆ.