ಯೂಟ್ಯೂಬ್ ನಲ್ಲಿ ಕಾಣಿಸಿದವಳೇ ಸೋದರಿಯಾಗಿದ್ದಳು..! ಇದು ಅವಳಿ-ಜವಳಿ ಸೋದರಿಯರ ಬ್ಯೂಟಿಫುಲ್ ಸ್ಟೋರಿ…!

Date:

ಇಬ್ಬರು ಹುಡುಗಿಯರು ನೋಡೋಕೆ ಸೇಮ್ ಟು ಸೇಮ್. ಒಬ್ಬಳು ಫ್ರಾನ್ಸ್ ನವಳಾದರೆ ಮತ್ತೊಬ್ಬಳು ಸುಮಾರು 4,000 ಮೈಲಿ ದೂರದಲ್ಲಿರುವ ನ್ಯೂಜೆರ್ಸಿಯವಳು. ಇವರಿಬ್ಬರ ವೃತ್ತಿ ಬೇರೆ ಬೇರೆ. ಒಬ್ಬಳು ನಟಿಯಾದರೆ, ಮತ್ತೊಬ್ಬಾಕೆ ಫ್ಯಾಶನ್ ಡಿಸೈನರ್. ನಟಿಯಾದವಳ ಹೆಸರು ಸಮಂತಾ ಫ್ಯೂಟರ್ ಮ್ಯಾನ್, ಮತ್ತೊಬ್ಬಳ ಹೆಸರು ಅನಾಯಿಸ್ ಬಾರ್ಡಿಯರ್. ಒಮ್ಮೆ ಅನಾಯಿಸ್ ಆಕಸ್ಮಿಕವಾಗಿ ಯ್ಯೂಟ್ಯೂಬ್ ನಲ್ಲಿ ವಿಡಿಯೋ ನೋಡುವಾಗ ತನ್ನಂತೆಯೇ ಇರುವಳನ್ನು ನೋಡಿ ಶಾಕ್. ಕುತೂಹಲ ತಾಳಲಾರದೆ ಅನಾಯಿಸ್ ಅವಳ ತದ್ರೂಪಿಯ ಮಾಹಿತಿಯನ್ನು ಪತ್ತೆಹಚ್ಚಿದಳು. ಫೇಸ್ ಬುಕ್ ನಲ್ಲಿ ರಿಕ್ವೆಸ್ಟ್ ಹಾಕಿ ಗೆಳೆತನ ಮಾಡಿ ವಿಚಾರ ವಿನಿಮಯ ಮಾಡಿಕೊಂಡಾದ ಮೇಲೆ ಅನಾಯಿಸ್ ಗೆ ಇದನ್ನು ನಂಬಬೇಕೋ ಬಿಡಬೇಕೋ ಗೊತ್ತಾಗ್ಲಿಲ್ಲ. ಯಾಕ್ ಗೊತ್ತಾ? ಇವರಿಬ್ಬರ ಡೇಟ್ ಆಫ್ ಬರ್ತ್ ಒಂದೇ ದಿನ ಮತ್ತು ಒಂದೇ ಪ್ಲೇಸ್. ಅವಳಿಗಳಾ ಅಂತಾನೂ ಕನ್ ಫರ್ಮ್ ಇಲ್ಲ, ಯಾಕಂದ್ರೆ ಇವರಿಬ್ಬರು ಬೆಳೆದಿದ್ದು ಬೇರೆ ಬೇರೆ ದೇಶದಲ್ಲಿ ಹಾಗೂ ಪೋಷಕರೂ ಬೇರೆ ಬೇರೆ. ಫುಲ್ ಕನ್ ಫ್ಯೂಶನ್ ಗೊಳಗಾಗಿ ಡಿ.ಎನ್.ಎ. ಟೆಸ್ಟ್ ಮಾಡಿಸಿದಾಗಾಲೇ ಗೊತ್ತಾಗಿದ್ದು ಇವರಿಬ್ಬರು ನಿಜವಾದ ಅವಳಿ-ಜವಳಿಗಳು. ಹುಟ್ಟಿದಾಗಲೇ ಅನಾಯಿಸ್ ನ ತಾಯಿ ಅವರಲ್ಲಿ ಒಬ್ಬಳನ್ನು ಬೇರೆಯೊಬ್ಬರಿಗೆ ಮಾರಿದ್ದಳು. ಆದರೆ ವಿಧಿ ಇವರಿಬ್ಬರನ್ನು ಒಂದಾಗಿಸಬೇಕೆಂಬ ಆಸೆಯಿತ್ತೇನೋ..!? ಈಗ ಕೊನೆಗೆ ಇವರಿಬ್ಬರು ಸಿಕ್ಕಿದ್ದಾರೆ. ಅದೃಷ್ಟ ಅಂದರೆ ಇದೇನಾ? ಈ ಸ್ಟೋರಿ ನಿಮಗೆ ಒಂಥರಾ ಫಿಲ್ಮಿ ಅನ್ನಿಸಿದ್ದರೂ ನಡೆದಿದ್ದು ಮಾತ್ರ ನಿಜವಾಗಲೂ ಸತ್ಯ.   ಇವರ ಕಥೆ ಡಾಕ್ಯುಮೆಂಟರಿಯಾಗಿ  ತೆರೆಕಂಡಿದೆ.

  • ವಿಶ್ವನಾಥ್

If you Like this Story , Like us on Facebook  The New India Times

POPULAR  STORIES :

ವಿಚಿತ್ರ ಬೌಲಿಂಗ್ ಶೈಲಿ..! ತಬ್ಬಿಬ್ಬಾಗ್ತಾರೆ ಬ್ಯಾಟ್ಸ್ ಮೆನ್ ಗಳು..!

ಪತ್ನಿಯ ಮೊಬೈಲ್ ನಲ್ಲಿ ಅಶ್ಲೀಲ ಸಂದೇಶ..! ಓದಿಕೊಂಡ ಹೆಂಡ್ತೀನಾ ಪ್ರಶ್ನಿಸಬಾರದಾ..!?

ಬಹುನಿರೀಕ್ಷಿತ 3 ಪೆಗ್ ಕನ್ನಡ ರ್ಯಾಪ್ ಸಾಂಗ್ ..!

70 ವರ್ಷದ ಕುರುಡು ಅಜ್ಜಿಗೆ ಕಣ್ಣುಬಂತು..!? ವಿಜ್ಞಾನವನ್ನೇ ಬೆಚ್ಚಿಬೀಳಿಸಿದ ಘಟನೆ..!

ಹಾಸನ ಸೂಸೈಡ್ ಕೇಸ್ಗೆ ಟ್ವಿಸ್ಟ್..! ಅವನ ಸಾವಿಗೆ ಕಾರಣವಾಗಿದ್ದು `ಪ್ರೇಯಸಿ’ ರೂಪದ ಅತ್ತಿಗೆ..!

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...