ವಿಚಿತ್ರ, ವಿಭಿನ್ನ, ವಿಲಕ್ಷಣ ಮೂಢನಂಬಿಕೆಗಳು..!

0
78

ಭಾರತದಲ್ಲಿ ಹತ್ತು ಹಲವಾರು ರೂಢಿ, ಸಂಪ್ರದಾಯ, ಆಚರಣೆಗಳಿವೆ..! ಈ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಪ್ರದಾಯ, ಆಚಾರ-ವಿಚಾರಗಳನ್ನು ಇಡೀ ವಿಶ್ವವೇ ಮೆಚ್ಚಿದೆ..! ಆದ್ರೆ ಈ ನಮ್ಮ ಇಂಡಿಯಾದ ಎಲ್ಲಾ ಸಂಪ್ರದಾಯ-ಆಚರಣೆಗಳು ಸಾಂಪ್ರದಾಯಿಕವೇ..?! ಎಲ್ಲರೂ.. ಎಲ್ಲಾಕಾಲದಲ್ಲಿಯೂ ಒಪ್ಪುವಂತಹದ್ದೇ..?! ಖಂಡಿತಾ ಇಲ್ಲ..! ನಮ್ ಅಸಂಪ್ರದಾಯವನ್ನು ಸಂಪ್ರದಾಯವೆಂದೂ, ಮಾನವೀಯತೆಗೆ ಬೆಲೆ ನೀಡದ ಆಚರಣೆ, ರೂಢಿ, ರೀತಿ-ನೀತಿ, ರಿವಾಜುಗಳನ್ನು ಸಂಪ್ರದಾಯ ಅಂತ ಕರೆಯುವ ಪುಣ್ಯಾತ್ಮರು ನಾವು..! ಸಂಪ್ರದಾಯಕ್ಕೂ ಅಸಂಪ್ರದಾಯಕ್ಕೂ ವ್ಯತ್ಯಾಸ ಗೊತ್ತಿಲ್ಲದ ಗ್ರೇಟ್ ಇಂಡಿಯನ್ಸ್.. ಮಾನವೀಯತೆಯನ್ನೂ ಮರೆತಿರುವ ಕ್ರೂರಿಗಳು..! ಸಾರ್ ನನಗಂತೂ ನಮ್ಮ ಕೆಲವೊಂದು ಸಂಪ್ರದಾಯಗಳನ್ನು, ನಮ್ಮಲ್ಲಿನ ನಂಬಿಕೆಗಳನ್ನು ನೋಡಿದ್ರೆ ನಖಶಿಖಾಂತ ಉರಿಯುತ್ತೆ…! ನಮ್ ಇಂಡಿಯಾದ ಆಚರಣೆ, ಸಂಪ್ರದಾಯಗಳಲ್ಲಿ ಮಾನವೀಯತೆಗೂ ಬೆಲೆ ಇಲ್ಲ..! ನಂಬಿಕೆಗಳಲ್ಲಿ ಕಾಮನ್ ಸೆನ್ಸೇ ಇಲ್ಲ..!
ಅಂತಹ ಅರ್ಥಹೀನ ಅಸಂಪ್ರದಾಯಿಕ ನಂಬಿಕೆಗಳಲ್ಲಿ ಕೆಲವೊಂದನ್ನು ನಿಮ್ಮ ಕಣ್ಣಮುಂದೆ ತರ್ತಾ ಇದ್ದೀವಿ..! ಇದನ್ನು ತಿಳಿದ ಮೇಲೆ ಏನ್ ಅನಿಸುತ್ತೋ ಹೇಳಿ..!
1. ಪ್ರಾಣಿಗಳ ಜೊತೆ ಮದುವೆ..! :
ಹೆಣ್ಣು ಮಕ್ಕಳು ಕುರೂಪಿ ಆಗಿ ಹುಟ್ಟಿದ್ರೆ ಅಥವಾ ಅವರ ಜನ್ಮ ಜಾತಕ ಸರಿಯಿಲ್ಲ ಅಂತಾದ್ರೆ.. ಅವರು ಹುಟ್ಟಿದ ಗಳಿಗೆಯೇ ಸರಿಯಿಲ್ಲ ಅಂತ ಯಾವಾನಾದ್ರೂ ಹೇಳಿದ್ರೆ ಆ ಹೆಣ್ಣು ಮಗಳ ಮೊದಲ ಮದುವೆ ಆಗೋದು ಪ್ರಾಣಿಗಳ ಜೊತೆ..! ನಮ್ ದೇಶದ ನಾನಾಕಡೆಗಳಲ್ಲಿ ಈ ಅಸಂಪ್ರದಾಯವನ್ನು ಸಂಪ್ರದಾಯ ಅಂತ ಆಚರಿಸೋ ಅವಿವೇಕಿಗಳೂ ಇದ್ದಾರೆ..! ನಾಯಿಗೆ ಹೆಣ್ಣನ್ನು ಮದುವೆ ಮಾಡೊ ಗೊಡ್ಡು ನಂಬಿಕೆಯೂ ಇದೆ..! ಅಲ್ಲಾ.. ರೀ ನಾಯಿಯನ್ನು ಒಬ್ಬಳು ಹುಡುಗಿಗೆ ಕಟ್ಟೋ ಮೊದಲು, ಗಂಡಸರೇಕೆ ಹೆಣ್ಣು ನಾಯಿಯನ್ನು ಮದುವೆ ಆಗಲ್ಲ..! ಇಂತಹ ನೀಚ ಸಂಪ್ರದಾಯ ನಮ್ ಹೆಣ್ಮಕ್ಕಳಿಗೆ ಮಾತ್ರವೇಕೆ…? ಹೆಣ್ಣು ಆಟದ ಬೊಂಬೆಯೇ..? ಹಳ್ಳಿಯಲ್ಲಿ ಈರೀತಿ ಮೌಡ್ಯಗಳನ್ನು ನಂಬಿದ್ರೆ ಶಿಕ್ಷಣ ಇಲ್ಲ ಅಂತ ಹೇಳ್ಬಹುದು..! ಆದ್ರೆ ವಿದ್ಯಾವಂತರೇ ಇಂತಹದ್ದನ್ನು ನಂಬ್ತಾರಲ್ಲಾ..?! ಬಾಲಿವುಡ್ ನಟಿ, ವಿಶ್ವಸುಂದರಿ ಐಶ್ವರ್ಯ ರೈ ಗೂ “ಮರದ” ಜೊತೆ ಮದುವೆ ಮಾಡಿದ್ರಂತೆ.,,! ಅಂತೆ ಕಂತೆ ಆದ್ರೂ ನಮ್ಮಲ್ಲಿ ಇಂತ ಬುದ್ಧಿವಂತ ಮೂರ್ಖರು ಇದ್ದಾರೆ..!

2. ಕೆಂಡದ ಮೇಲೆ ನಡುಗೆ :
ಇದು ನಮ್ಮ ದೇಶದ ಹಲವಾರು ಕಡೆಗಳಲ್ಲಿದೆ..! ಅಚ್ಚರಿ ಅಂದ್ರೆ ದಕ್ಷಿಣಾಫ್ರಿಕ ಮತ್ತು ಸಿಂಗಪೂರ್ ಸೇರಿದಂತೆ ವಿಶ್ವದ ನಾನಾ ಕಡೆಗಳಲ್ಲಿ ಈ ಸಂಪ್ರದಾಯವನ್ನು ಆಚರಣೆಯಲ್ಲಿದೆ..! ಈ ಕೆಂಡಸ್ನಾನ, ಕೆಂಡದ ಮೇಲಿನ ನಡುಗೆ ಸಂಪ್ರದಾಯನೇನ್ರೀ..? ಇದೆಂಥಾ ನಬಿಕೆ..!?

3. ಮಕ್ಕಳನ್ನು ಕೆಳಗೆ ಬಿಡುವುದು :
ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡರಲ್ಲೂ ಇರುವ ಬುದ್ಧಿಹೀನ ಅಸಂಪ್ರದಾಯ..! ಮಕ್ಕಳಿಗೆ ( ಹಸುಗೂಸು) ಒಳ್ಳೆಯದಾಗಲೆಂದು 50 ಅಡಿ ಎತ್ತರದಿಂದ ಕೆಳಗೆ ಬಿಟ್ಟು ಅದೃಷ್ಟ ಪರೀಕ್ಷಿಸುವ ಕೆಟ್ಟ ಆಚರಣೆ, ನಂಬಿಕೆ..! ಕೆಳಗೆ ಕುಳಿತವರು ಆ ಮಗುವನ್ನು ಹಿಡಿಯದೇ ಕೈ ಚೆಲ್ಲಿದರೆ.. ಮಗುವಿನ ಕತೆ..?! ಇದು ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಅಲ್ಲವೇ..!? ಮಹಾರಾಷ್ಟ್ರ ಸಮೀಪದ ಶೋಲ್ಪುರದ ಬಾಬಾ ಉಮೆರ್ ದಗರ್ಾದಲ್ಲಿ ಈ ಅನಿಷ್ಟ ಪದ್ಧತಿಯನ್ನು ಕಣ್ಣಾರೆ ನೋಡ್ಬಹುದು…! ದೇಶದ ಬೇರೆ ಕಡೆಯೂ ಈ ಹೀನ ಸಂಪ್ರದಾಯ ಆಚರಣೆಯಲ್ಲಿದೆಯಂತೆ…!

4. ಮಾಟ ಮಂತ್ರ..!
ರೀ, ದೇವಸ್ಥಾನದಲ್ಲಿ ದೇವ್ರನ್ನ ಪೂಜಿಸೋರು ನಾವೇ..! ಸ್ಮಶಾನದಲ್ಲಿಯೂ ಪೂಜೆ ಮಾಡೋ ಅವಿವೇಕಿಗಳೂ ನಾವೇ..! ಸ್ಮಶಾನದಲ್ಲಿ ಮೂಳೆ, ಬೂದಿ ನಿಂಬೆಹಣ್ಣನ್ನು ಇಟ್ಟುಕೊಂಡು ದೇವಿಆರಾಧನೆ ಮಾಡುವ ಮಂತ್ರವಾಧಿಯ ಭಕ್ತರೂ ನಾವೇ..! ಇದು ಮೌಢ್ಯ ಅಲ್ದೇ ಮತ್ತೇನು..? ನರಬಲಿ, ನರ ಭಕ್ಷಣೆಯೂ ಇದೆ ಅಂದ್ರೆ, ನೀವೇ ಹೇಳಿ ನಮ್ಮದು ಸಂಪ್ರದಾಯವಾ..? ಇದನ್ನೆಲ್ಲಾ ಫಾಲೋ ಮಾಡ್ಲೇಬೇಕೆನ್ರೀ..?! ಸುಮ್ಮನೇ ಸಿಂಪಲ್ ಆಗಿ ಯೋಚ್ನೆ ಮಾಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡೋ ತಾಕತ್ತು ಸ್ಮಶಾನವಾಸಿ ಮಂತ್ರವಾದಿಗೆ ಇದ್ದಿದ್ರೆ ಅವನೇಕೆ ಸ್ಮಶಾನವಾಸಿ ಆಗ್ತಾ ಇದ್ದ..!? ನಮ್ಮ ಜ್ಯೋತಿಷ್ಯ, ಭವಿಷ್ಯ ಹೇಳೋ ಜ್ಯೋತಿಷಿಗಳೇಕೆ ಗಲ್ಲಿ ಗಲ್ಲಿಯಲ್ಲಿ ಜ್ಯೋತಿಷ್ಯದ ನೆಪದಲ್ಲಿ ಭಿಕ್ಷೆಬೇಡ್ಬೇಕಿತ್ತು..!?

5. ದನಗಳಿಂದ ತುಳಿಸಿಕೊಳ್ಳೋದು :
ಹಿಂದೂ ಧರ್ಮದಲ್ಲಿ ದನ ಅಥವಾ ಹಸುವಿನ ಬಗ್ಗೆ ಪೂಜನೀಯ ಭಾವನೆ ಇದೆ..! ಈ ಭಕ್ತಿ ಗೌರವ, ನಂಬಿಕೆಯನ್ನೂ ಒಪ್ಪಿಕೊಳ್ಳೋಣ..! ಹಸುವನ್ನು ಪೂಜಿಸೋದು ಓಕೆ, ಆದ್ರೆ ಅವುಗಳಿಂದ ತುಳಿಸಿಕೊಳ್ಳೋದು ಯಾವ ಸಂಪ್ರದಾಯ ರೀ..!? ದೀಪಾವಳಿಗೆ ಒಂದು ದಿನ ಮುನ್ನ ಮಹರಾಷ್ಟ್ರದ ಬೈಡ್ವಾಡ್ ಮೊದಲಾದ ಹಳ್ಳಿಗಳಲ್ಲಿ ದಾರಿಯ ನಡುವೆಯೇ ಹೊಟ್ಟೆ ಅಡಿಮಾಡಿ ಮಲಗಿ ಹಸುಗಳಿಂದ ತುಳಿಸಿಕೊಳ್ಳೋ ದರಿದ್ರ ಆಚರಣೆಯೂ ಇದೆ..! ಹೆಚ್ಚು ಕಡಿಮೆ ಆದ್ರೆ ಸತ್ತೇ ಹೋಗ್ತಾನೆ,… ಭಕ್ತಿಯ ಉತ್ತುಂಗ ಸಾವಿಗೆ ದಾರಿ ಆಗುತ್ತೆ..! ಏನ್ ಹುಚ್ಚು ನಂಬಿಕೆ ರೀ..!

6. ತುಟಿ/ ಬಾಯಿಗೆ ಮೊಳೆ ಚುಚ್ಚಿ ಕೊಳ್ಳುವುದು..!
ಇದೂ ನಮ್ ದೇಶದ ಸಂಪ್ರದಾಯವೆಮದು ಕರೆಯಲ್ಪಡುತ್ತಿರುವ ಅಸಂಪ್ರದಾಯದಲ್ಲೊಂದು..! ತುಟಿಯ ನಡುವೆ, ಎರಡೂ ಕೆನ್ನೆಯೊಳಗೆ ಹಾದು ಹೋಗುವಂತೆ ಚೂಪಾದ ಸರಳನ್ನು ಚುಚ್ಚಿಸಿಕೊಳ್ಳುವುದು ಎಂಥಾ ಹುಚ್ಚುತನ..!?

7. ಕಪ್ಪೆಗಳ ಮದುವೆ :
ಮಳೆ ಬರದೇ ಇರುವಾಗ ಕಪ್ಪೆಗಳಿಗೆ ಮದುವೆ ಮಾಡಿಸಿದ್ರೆ ಮಳೆ ಆಗುತ್ತೆ ಅನ್ನೋ ನಂಬಿಕೆಯೂ ಇದೆ..! ಇದೆಂಥಾ ಕಾಮಿಡಿ ರೀ..! ನಮ್ಮ ಬಯಲು ಸೀಮೆ ಮಂದಿ ಮಳೆಯಿಲ್ಲ ಅಂತ ಸಾಯ್ತಾ ಇರ್ತಾರೆ..! ಆ ಪ್ರದೇಶಗಳಿಗೆ ಹೋಗಿ ಕಪ್ಪೆ ಮದುವೆ ಮಾಡಿ ನಮ್ಮ ಬಯಲು ಸೀಮೆ ರೈತರನ್ನು ಉಳಿಸ್ಬಹುದಲ್ವಾ..! ಕಪ್ಪೆಗಳಿ ಮದ್ವೆ ಮಾಡಿದ್ರೆ ಮಳೆ ಬರುತ್ತಂತೆ ವಾರೆವ್ಹಾ..,ಕಾಮಿಡಿ ಕಾಮಿಡಿ ಕಾಮಿಡಿ..! ಹಹಹಹ

8. ತಲೆಯ ಮೇಲೆ ತೆಂಗಿನ ಕಾಯಿ ಹೊಡೆಯೋದು..!:
ತಮಿಳು ನಾಡಿನ ಕರೂರು ಜಿಲ್ಲೆಯ ಮಹಾಲಕ್ಷ್ಮಿ ದೇವಾಲಯದಲ್ಲಿ ಭಕ್ತಾಧಿಗಳ ತಲೆಗೆ ಕಾಯಿ ಹೊಡೆಯುವ ಸಂಪ್ರದಾಯವಿದೆ..! ಪ್ರತಿವರ್ಷ ತಮಿಳು ತಿಂಗಳ 18ನೇ ದಿನ ಈ ದೇವಾಲಯದಲ್ಲಿ ಈ ಆಚರಣೆ ನಡೆಯತ್ತದೆ..! ಭಕ್ತರೂ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ..!

ಹೀಗೆ ಅನೇಕ ಸಂಪ್ರದಾಯಗಳಿವೆ..! ಕೆಲವೊಂದು ಪರವಾಗಿಲ್ಲ, ಮತ್ತೊಂದಿಷ್ಟು ಕಾಮಿಡಿ ಸಂಪ್ರದಾಯಗಳು..! ಇನ್ನೊಂದಿಷ್ಟು ಸಂಪ್ರದಾಯಗಳನ್ನು ನೋಡಿದ್ರೆ ಸಿಕ್ಕಾಪಟ್ಟೆ ಬೇಜಾರ್ ಆಗುತ್ತೆ..! ವಿದ್ಯಾವಂತರೂ ಕೂಡ ಇದರಲ್ಲಿ ಭಾಗಿ ಆಗ್ತಾರೆ ಅಂದ್ರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿದೆಯೇ..?! ಇದನ್ನೆಲ್ಲಾ ಪ್ರಶ್ನೆ ಮಾಡಿದ್ರೆ ನಂಬಿಕೆಯನ್ನು ಹೀಯಾಳಿಸಿದಂತೆ ಎಂದು ವಾದ ಮಾಡೋ ಜನರೂ ಇದ್ದಾರೆ..! ಪ್ರಶ್ನೆ ಮಾಡ್ದೇ ಇದ್ರೆ ನಾವೂ ಅವಿವೇಕಿಗಳಾಗ್ತೀವಿ..! ಇಲ್ಲಿ ಯಾರ ನಂಬಿಕೆ ಸಂಪ್ರದಾಯಕ್ಕೆ ನೋವುಂಟು ಮಾಡೋ ಉದ್ದೇಶವಿಲ್ಲ..! ಸ್ವಲ್ಪ ಆದ್ರೂ ಯೋಚಿಸಿ ತಿದ್ದಿಕೊಳ್ಳೋಣ ಎಂಬ ಆಶಯವಿದೆ..! ಯಾವತ್ತು ನಮ್ ಜನ ಸಂಪ್ರದಾಯಕ್ಕೂ, ನಂಬಿಕೆಗೂ, ಮೌಡ್ಯಕ್ಕೂ ವ್ಯತ್ಯಾಸ ಕಂಡುಕೊಳ್ತಾರೋ…!? ಯಾರಿಗೆ ಗೊತ್ತ್ರೀ..

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಶಿವಣ್ಣ ಆರಾಮಾಗಿದ್ದಾರೆ…ಡೋಂಟ್ ವರಿ..!

ಬಿಯರ್ ಬಾಟಲ್ ಗಳ ಮುಚ್ಚಳ ತೆಗೆದ ಹೆಲಿಕಾಪ್ಟರ್..!

ವಿಷ ಕುಡಿದು ಪ್ರೀತಿ ಉಳಿಸಿಕೊಂಡವರ ಕಥೆ..! ಅಷ್ಟಕ್ಕೂ ಅವರು ವಿಷ ಕುಡಿದಿದ್ದು ಯಾಕೆ ಗೊತ್ತಾ..?

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

“ಜುಕರ್ ಬರ್ಗ್”, “ಸ್ಟೀವ್ ಜಾಬ್ಸ್” ರಂತಹ ಉದ್ಯಮಿಗಳ ಯಶಸ್ಸಿಗೆ ಭಾರತದ ದೇವರೇ ಕಾರಣ..!

ಭಾರತೀಯರು ನೋಡಬೇಕಾದ ಭಾರತೀಯರ ವೀಡಿಯೋ..!

ಸಲ್ಮಾನ್ ಖಾನ್ ಹಾಗೂ ಪ್ರೇಮ್ ಗೂ ಎನ್ ಸಂಬಂಧ ಗೊತ್ತಾ…? ಇಲ್ಲಿದೆ ಸಲ್ಮಾನ್ ಪ್ರೇಮ್ ಕಹಾನಿ..

ನೀವು ತಿಳಿದುಕೊಳ್ಳಲೇಬೇಕಾದ ಕಂಪ್ಯೂಟರ್ ಟ್ರಿಕ್ಸ್..!

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

LEAVE A REPLY

Please enter your comment!
Please enter your name here