ಶಾರೂಕ್ ಖಾನ್ ಹತ್ಯೆಗೆ ಸಂಚು..! ಡಾನ್ `ಪೂಜಾರಿ' ಅದ್ಯಾಕೆ ಮುಹೂರ್ತವಿಟ್ಟ..!?

Date:

raaaಅಂಡರ್ ವರ್ಲ್ಡ್ ಗೂ, ಬಾಲಿವುಡ್ ಗೂ ತೀರಾ ಹಳೆಯ ನಂಟು. ಭೂಗತ ದೊರೆ ದಾವೂದ್ ಇಬ್ರಾಹೀಂ ಆ ಕಾಲದಲ್ಲೇ ಬಾಲಿವುಡ್ ಚಿತ್ರರಂಗಕ್ಕೆ ಫೈನಾನ್ಸ್ ಮಾಡುತ್ತಿದ್ದ. ಅಬು ಸಲೇಂ ಇಡೀ ಬಾಲಿವುಡ್ ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದ. ಛೋಟಾ ರಾಜನ್, ಅರುಣ್ ಗೌಳಿ ಸೇರಿದಂತೆ ಕುಖ್ಯಾತ ಡಾನ್ ಗಳೆಲ್ಲಾ ಬಾಲಿವುಡ್ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯಿಂದ ಮಿಂದೇಳುತ್ತಿರುವವರೇ. ಬಾಲಿವುಡ್ ಮಂದಿ ಅಂಡರ್ವರ್ಲ್ಡ್ ಮಾತು ಕೇಳಲೇಬೇಕು. ಅದು ನಿಯಮ. ಮಾತು ಕೇಳದಿದ್ದವರನ್ನು ಅನಾಯಾಸವಾಗಿ ಸುಟ್ಟು ಬಿಸಾಕುತ್ತಾರೆ. ಅಂಥ ಅಂಡರ್ವರ್ಲ್ಡ್ ಮಂದಿಯ ಕ್ರೂರತೆಗೆ ಮೊದಲು ಬಲಿಯಾಗಿದ್ದು ಟಿ-ಸಿರೀಸ್ ಮಾಲೀಕ ಗುಲ್ಶನ್ ಕುಮಾರ್.

ಅಂಥ ಬಾಲಿವುಡ್ ಚಿತ್ರರಂಗವನ್ನು ಕಳೆದ ಕೆಲ ವರ್ಷಗಳಿಂದ ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ರವಿ ಪೂಜಾರಿ. ಅಸಲಿಗೆ ಈ ರವಿ ಪೂಜಾರಿ ಹೇಗಿದ್ದಾನೋ..? ಅದೆಲ್ಲಿದ್ದಾನೋ..? ಅದು ಯಾವಾಗ ಹಾವಳಿಯಿಡುತ್ತಾನೋ..? ಅವನ ನಡೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಆತ ಕಳೆದ ದಶಕಗಳಿಂದಲೂ ಬಾಲಿವುಡ್ ಮಂದಿಗೆ ಥ್ರೆಟ್ ಹಾಕುತ್ತಿದ್ದಾನೆ. ಬಾಲಿವುಡ್ಡಿನಲ್ಲಿ ತನ್ನ ಮಾತು ನಡೆಯಲೇಬೇಕು ಎಂಬ ಹಕೀಕತ್ತಿಗೆ ಬಿದ್ದಿದ್ದಾನೆ. ಹೀಗಾಗಿಯೇ ಶಾರೂಕ್ ಖಾನ್ಗೆ ಅದ್ಯಾವುದೋ ಕಾರಣಕ್ಕೆ ಇಂಡೈರೆಕ್ಟ್ ಆಗಿ ಟಾಂಗ್ ಕೊಟ್ಟಿದ್ದ.

ಅದು ಮುಂಬೈನ ಪ್ರತಿಷ್ಟಿತ ಏರಿಯಾ ಜುಹು. ಶಾರೂಖ್ ಖಾನ್ ಮನೆಯಿರುವುದು ಇದೇ ಪ್ರಾಂತ್ಯದಲ್ಲಿ. ಇತ್ತೀಚೆಗೆ ಹಾಡಹಗಲೇ ಒಂದಿಬ್ಬರು ಅಪರಿಚಿತರು ಬೈಕಿನಲ್ಲಿ ಬಂದವರೇ ಶಾರೂಕ್ ಖಾನ್ ಮನೆ ಸಮೀಪ ಒಂದೆರಡು ರೌಂಡ್ ಬೈಕಿನಲ್ಲಿ ಅಡ್ಡಾಡಿದ್ದಾರೆ. ಆಮೇಲೆ ನೋಡುತ್ತಿದ್ದ ಹಾಗೇ, ಶಾರೂಕ್ನ ಬಿಸಿನೆಸ್ ಪಾಟ್ರ್ನರ್ ಕಂ ಫಿಲ್ಮ್ ಪ್ರೊಡ್ಯೂಸರ್ ಅಲಿ ಮೊರಾನಿ ಮನೆ ಮೇಲೆ ನಾಲ್ಕು ಸುತ್ತಿನ ಗುಂಡಿನ ಮಳೆಗರೆದಿದ್ದಾರೆ. ಅಷ್ಟಕ್ಕೂ ಮುಂಬೈಗೆ ಈ ಸ್ಫೋಟ, ಶೂಟೌಟ್ಗಳು ಹೊಸತೇನಲ್ಲ. ಗುಂಡಿನ ಮೊರೆತವಾಗಿದ್ದು ಶಾರೂಕ್ ಖಾನ್ ಮನೆ ಹತ್ರ. ಅದೂ ಶಾರೂಕ್ ಆಪ್ತ, ಜೊತೆಗೆ ಬಿಸಿನೆಸ್ ಪಾರ್ಟ್ ನರ್ ಅಲಿ ಮೊರಾನಿ ಮನೆ ಮೇಲೆ. ಶೂಟೌಟ್ ಆಗಿ ಕೆಲ ಘಂಟೆಗಳಲ್ಲೇ ಅದರ ವೀಳ್ಯ ತೆಗೆದುಕೊಂಡಿದ್ದ ರವಿಪೂಜಾರಿ. ಅಂಡರ್ವರ್ಲ್ಡ್ ಡಾನ್ಗಳೇ ಹಾಗೇ ಮೊದಲು ಗುಪ್ತ ಒಪ್ಪಂದ ಮಾಡಿಕೊಳ್ಳುತ್ತಾರೆ. ವ್ಯವಹಾರ ಕುದುರದಿದ್ದಾಗ ಹೀಗೊಂದು ಶೂಟೌಟ್ ಮಾಡಿ ಬಿಸ್ಕೆಟ್ ಹಾಕ್ತಾರೆ. ಕ್ರೆಡಿಟ್ಟು ತಗೊಂಡು ಆನಂತರ ಡೀಲ್ಗಳನ್ನು ಮುಗಿಸಿಕೊಳ್ಳುತ್ತಾರೆ. ರವಿಪೂಜಾರಿ ಮಾಡಿದ್ದು ಅದೇ..!

ರವಿಪೂಜಾರಿಗೂ ಹಾಗೂ ಶಾರೂಖ್ ಖಾನ್ಗೂ ನೇರಾ ನೇರಾ ದುಷ್ಮನಿ ಇದ್ಯಾ..? ಹಾಗೊಂದು ವೇಳೆ ದುಷ್ಮನಿ ಇದ್ದರೂ ಅವನೇಕೆ ಅಲಿ ಮೊರಾನಿ ಮನೆ ಮೇಲೆ ಶೂಟ್ ಮಾಡುತ್ತಾನೆ..? ಹಾಗಾದ್ರೇ ಏನದು ಅಸಲಿಯತ್ತು..? ಅಂತ ಕೆದಕುತ್ತಾ ಹೋದರೇ.. ಅದೇ ಒಂದು ಇಂಟರೆಸ್ಟಿಂಗ್ ಸಮಾಚಾರ. ರಾಜ ಹಿಂದೂಸ್ತಾನಿ, ಧಮ್ ಸೇರಿದಂತೆ ಅನೇಕ ಬಾಲಿವುಡ್ ಚಿತ್ರಗಳನ್ನು ನಿರ್ಮಿಸಿರುವ ಅಲಿ ಮೊರಾನಿ, ಶಾರೂಕ್ ಜೊತೆ ಫಿಲ್ಮ್ ಪ್ರೊಡಕ್ಷನ್ ನಲ್ಲಿ ಪಾರ್ಟ್ ನರ್ ಆಗಿದ್ದ. ಅವನ ಮೇಲೆಯೇ ಮೊದಲು ರವಿಪೂಜಾರಿ ಕಣ್ಣಿಟ್ಟಿದ್ದ. ಅಲಿ ಮೊರಾನಿ ಅನುಕೂಲಸ್ತ ಕುಳ..! ಅವನ ಬಳಿ ಹಫ್ತಾ ಕೇಳಿದ್ದ. ಈ ಬಗ್ಗೆ ಮೊರಾನಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಶಾರೂಕ್ ಸಲಹೆ ಕೇಳಿದ್ದ. ಹಫ್ತಾ ವಿಚಾರದಲ್ಲಿ ಏನೇನೋ ಆಗಿ ಅಂತಿಮವಾಗಿ ಅದು ಶೂಟೌಟ್ ವರೆಗೆ ಬಂದು ನಿಂತಿತ್ತು. ಆದರೆ ಇಲ್ಲಿ ಇವೆಲ್ಲವನ್ನೂ ಮೀರಿ ಇನ್ನೊಂದು ವಿಚಾರವೂ ಇದೆ.. ರವಿಪೂಜಾರಿ ಅಸಲಿಗೆ ಶಾರೂಖ್ ಖಾನ್ನನ್ನೇ ಕೆಣಕಿದ್ದ. ಅದಕ್ಕೆ ಕಾರಣ ಅಂಡರ್ವರ್ಲ್ಡ್..!

ಅಮೀರ್ ಖಾನ್ ನಟಿಸಿದ ಎರಡು ದಶಕಗಳ ಹಿಂದಿನ ಜಬ್ಬರ್ದಸ್ತ್ ಹಿಟ್ ಮೂವಿ ರಾಜ ಹಿಂದೂಸ್ತಾನಿ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ಅಲಿ ಮೊರಾನಿ ಆನಂತರ ಶಾರೂಖ್ ಜೊತೆ ವ್ಯವಹಾರ ಮಾಡಿಕೊಂಡಿದ್ದ. ಬಹುಶಃ ರವಿಪೂಜಾರಿ ಅಲಿ ಮೊರಾನಿ ಮನೆಯ ಮೇಲೆ ಫೈರ್ ಮಾಡುವುದಕ್ಕೆ ಬೇರೇನು ಬಲವಾದ ಕಾರಣಗಳಿರಲಿಲ್ಲ. ಒಂದೋ ಹಫ್ತಾದ ವಿಚಾರ. ಇಲ್ಲ ಅವನಿಗೆ ಬಿಸ್ಕೆಟ್ ಹಾಕಿದರೇ ಶಾರೂಕ್ ರಿಸಿವ್ ಮಾಡುತ್ತಾನೆ ಎಂಬುದು ಡಾನ್ ಉದ್ದೇಶವಿರಬಹುದು. ಬಾದ್ಷಾ ಮೇಲೆ ರವಿಪೂಜಾರಿಗಿರುವ ಸಿಟ್ಟು, ಅಸಮಾಧಾನಕ್ಕೂ ಕಾರಣವಿದೆ. ಯಾವ ದಿಕ್ಕಿನಿಂದ ಅಳೆದು ತೂಗಿದರೂ ಬಾಲಿವುಡ್ಡನ್ನು ನಿಭಾಯಿಸುತ್ತಿರುವುದು ಮುಸ್ಲಿಂ ಮಾಫಿಯಾ. ಮುಸ್ಲಿಂ ಮಾಫಿಯಾಕ್ಕೂ ಖಾನ್ ಗಳಿಗೂ ನಿಕಟ ಸಂಬಂಧವಿದೆ. ಅಷ್ಟಕ್ಕೂ ಬಾಲಿವುಡ್ಡನ್ನು ಮೂರು ಖಾನ್ ಗಳು ಆಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಕ್ ಇವತ್ತು ಬಾಲಿವುಡ್ಡ್ ಮಟ್ಟಿಗೆ ಅನಭಿಷಿಕ್ತ ದೊರೆಗಳು. ದಾವೂದ್ ಕಾಲದಿಂದಲೂ ಬಾಲಿವುಡ್ ಮುಸ್ಲಿಂ ಹಿಡಿತದಲ್ಲಿದ್ದದ್ದೇ ಹೆಚ್ಚು. ಸಾಜಿದ್ ನಾದಿಯಾವಾಲಾನಂಥ ಅನೇಕ ದೊಡ್ಡ ದೊಡ್ಡ ನಿರ್ಮಾಪಕರು ಮುಸ್ಲಿಂ ಮಾಫಿಯಾದ ಹಿಡಿತದಲ್ಲೇ ಇದ್ದಾರೆ. ಇನ್ನು ಮುಸ್ಲೀಮರನ್ನು ಕಂಡರಾಗದ ರವಿಪೂಜಾರಿಗೆ, ದಾವೂದ್, ಶಕೀಲ್ ದುಷ್ಮನಿಯಿದೆ. ಅವರಿಬ್ಬರ ನಿಕಟವರ್ತಿಗಳನ್ನು ಹಣಿಯುವುದೇ ಅವನ ಅಸಲಿ ಅಜೆಂಡಾ..! ಅವನಿಗೂ ಬಾಲಿವುಡ್ ಬೇಕು, ಹಾಗಾಗಿ ಬಾಲಿವುಡ್ಡನ್ನು ಹಿಡಿತಕ್ಕೆ ತಂದುಕೊಳ್ಳುವುದಕ್ಕೆ ಅವಶ್ಯವಾಗಿ ಖಾನ್ ಬೇರುಗಳ ಬುಡ ಅಲ್ಲಾಡಿಸಲೇಬೇಕು. ಅದರ ಸಣ್ಣ ಸ್ಯಾಂಪಲ್ ಅನ್ನು ತೋರಿಸಿರಬಹುದು ಎಂಬುದು ಅನುಮಾನವಷ್ಟೇ..!

ಈ ಮುಂಬೈ ಸಣ್ಣ ಪಾತಕಿಗಳನ್ನು ಬಲುಬೇಗನೇ ಬೆಳೆಸಿಬಿಡುತ್ತದೆ. ಈ ರವಿಪೂಜಾರಿ ಮುಂಬೈನ ಅಂದೇರಿಯಲ್ಲಿ ಸಣ್ಣಪುಟ್ಟ ಪಾತಕ ಮಾಡಿಕೊಂಡು ಬೆಳೆದಿದ್ದ. ಮುಂಬೈ ಅಂಡರ್ವರ್ಲ್ಡ್ ನ ಅಷ್ಟೂ ಮಗ್ಗಲುಗಳನ್ನು ಕಂಡಿದ್ದ. ಅವನೊಳಗೊಬ್ಬ ಗ್ಯಾಂಗ್ ಸ್ಟರ್ ಸದ್ದಿಲ್ಲದೇ ಹುಟ್ಟಿಕೊಂಡಿದ್ದ. ಅಷ್ಟೇನೂ ಹೆಸರು ಮಾಡದ ಸ್ಮಾಲ್ ಟೈಂ ಪಾತಕಿ ಬಾಳಾ ಜಲ್ತೆ ಎಂಬಾತನನ್ನು ಕೊಲ್ಲುವ ಮೂಲಕ, ನಾನೊಬ್ಬ ಇದ್ದೀನಿ ಅಂತ ಪಾತಕಲೋಕಕ್ಕೆ ನಿಚ್ಚಳ ಮೆಸೇಜ್ ಕಳುಹಿಸಿದ್ದ. ಆನಂತರ ಆತನನ್ನು ಎರಡೂ ಕೈಯಿಂದ ಬಾಚಿ ತಬ್ಬಿಕೊಂಡಿದ್ದು ಛೋಟಾ ರಾಜನ್. ಆತನ ಜೊತೆ ಸೇರಿ ಹೊಂದಿಷ್ಟು ಅನಾಹುತಗಳನ್ನು ಮಾಡಿದ. 1990ರಲ್ಲಿ ದುಬೈ ಸೇರಿದ. ಅಲ್ಲಿ ಕುಂತೇ ಇಲ್ಲಿನ ಬಿಲ್ಡರ್ಸ್ಗಳಿಗೆ, ಹೋಟೆಲ್ಸ್ ಮಾಲೀಕರಿಗೆ ಕರೆ ಮಾಡಿ ಹಫ್ತಾ ಕೇಳುವ ಪರಿಪಾಠ ಶುರುಮಾಡಿದ. ಸಧ್ಯಕ್ಕೆ ಅವ್ನು ಆಸ್ಟ್ರೇಲಿಯಾ ಸೇರಿಕೊಂಡಿದ್ದಾನೆ ಅಂತ ಇಂಟರ್ ಫೋಲ್ ಹೇಳುತ್ತಿದೆಯೇ ವಿನಃ, ಇವತ್ತಿಗೂ ಅವನ ನೆರಳನ್ನೂ ಹಿಡಿಯಲಾಗುತ್ತಿಲ್ಲ.

ರವಿಪೂಜಾರಿ ಈ ಹಿಂದೆ ಸಲ್ಮಾನ್ ಖಾನ್ಗೂ ಥ್ರೆಟ್ ಹಾಕಿದ್ದ. ಫರ್ಹಾನ್ ಅಖ್ತರ್, ಫರ್ಹಾನ್ ಅಜ್ಮಿ, ರಿತೇಶ್ ಸಿದ್ವಾನಿ ಸೇರಿದಂತೆ ಅನೇಕರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದ ರವಿಪೂಜಾರಿ, ತೀರಾ ಇತ್ತೀಚೆಗೆ ಪ್ರೀತಿ ಜಿಂಟಾಳ ಪರವಾಗಿ ನೆಸ್ವಾಡಿಯಾನಿಗೆ ಫೋನ್ ಮಾಡಿ ಧಮ್ಕಿ ಹಾಕಿದ್ದ. ಅದೂ ಕೂಡ ಇಂಟರೆಸ್ಟಿಂಗ್ ವಿಚಾರ. ಭಯಂಕರ ಲವ್ ಮಾಡುತ್ತಿದ್ದ ಪ್ರೀತಿ-ನೆಸ್ ವಾಡಿಯಾ ಮಧ್ಯೆ 2011ರಲ್ಲಿ ಬಿರುಕು ಮೂಡಿತ್ತು. ಇತ್ತೀಚೆಗೆ ಪ್ರೀತಿ, ನೆಸ್ ವಾಡಿಯ ಮೇಲೆ ಲೈಂಗಿಕ ಕಿರುಕುಳದ ಕೇಸ್ ಹಾಕಿದ್ದಳು. ಈ ವಿವಾದದ ಬೆನ್ನಿಗೆ ನೆಸ್ ವಾಡಿಯಾ ಮತ್ತವನ ತಂದೆ ನುಸ್ಲಿ ವಾಡಿಯಾ ಮುಂಬೈ ಪೊಲೀಸರ ಮುಂದೆ ಭೂಗತ ಪಾತಕಿಗಳಿಂದ ರಕ್ಷಣೆ ಕೊಡಿ ಎಂದು ಅಲವತ್ತುಕೊಂಡಿದ್ದರು. ಪ್ರೀತಿ ಜಿಂಟಾ ತಂಟೆಗೆ ಹೋದ್ರೇ ನೆಟ್ಟಗಿರುವುದಿಲ್ಲ, ಹೊಡೆದು ಹಾಕುತ್ತೇನೆ ಅಂತ ರವಿಪೂಜಾರಿ, ನೆಸ್ ವಾಡಿಯಾನಿಗೆ ಥ್ರೆಟ್ ಹಾಕಿದ್ದ. ಅದರ ಮುಂದುವರಿದ ಸರಣಿ ಎಂಬಂತೆ ಶಾರೂಕ್ ಖಾನ್ನನ್ನು ಕೆಣಕಿದ್ದಾನೆ. ಎಚ್ಚರ ತಪ್ಪಿದರೇ ಅಪಾಯ ತಪ್ಪಿದ್ದಲ್ಲ.

  •  ರಾ ಚಿಂತನ್.

POPULAR  STORIES :

ಬಿ ಎಸ್ ವೈ ಪತ್ನಿ ಶೋಭಾ ಕರಂದ್ಲಾಜೆ ಅಂತೆ…!

ಮುಂದಿನ ದಿನಗಳಲ್ಲಿ ಪೆಟ್ರೋಲ್ ಸಿಗುವುದಿಲ್ಲ..!! ನೀರಿಗೆ ಮಾತ್ರವಲ್ಲ, ಪೆಟ್ರೋಲ್ಗೂ ಬರಗಾಲ..!

ಯಶವಂತಪುರ ಮತ್ತು ಬುರ್ಖಾದೊಳಗಿನ ಗುಟ್ಟು..! ( ಬೆಗ್ಗರ್ಸ್ ಮಾಫಿಯಾ- ಇನ್ವೆಸ್ಟಿಗೇಶನ್- ಭಾಗ 2 )

ಹುಡುಗಿರಿಗೆ ಈ ಮಾತನ್ನು ಕೇಳಿದ್ರೆ ಬಿಲ್ಕುಲ್ ಇಷ್ಟ ಆಗಲ್ಲ.!!

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...