ರಿಯಲ್ ಸ್ಟಾರ್ ಉಪೇಂದ್ರ ಈ ಬಾರಿ ತಮ್ಮ ಪಕ್ಷದ ಮೂಲಕ ಚುನಾವಣಾ ಕಣದಲ್ಲಿ ಸೆಣೆಸುತ್ತಾರೆ. ಉಪ್ಪಿ ಗೆಲ್ಲುತ್ತಾರೆ….ಅವರ ಪಕ್ಷ ಅಧಿಕಾರಕ್ಕೆ ಬರದೇ ಇರಬಹದು…ಉಪ್ಪಿ ಮಾತ್ರ ಗೆದ್ದು ಶಾಸಕರಾಗಿ ವಿಧಾನಸೌದ ಪ್ರವೇಶಿಸುತ್ತಾರೆ ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ಪ್ರಜಾಕೀಯ ಕಲ್ಪನೆಗಳ ಮೂಲಕ ಉಪ್ಪಿ ರಾಜಕೀಯ ಎಷ್ಟು ಬೇಗ ಎಷ್ಟೊಂದು ಸದ್ದು ಮಾಡಿತ್ತೋ….ಅಷ್ಟೇ ಬೇಗ ತಣ್ಣಗಾಗಿದೆ. ಆದರೆ, ಈಗ ಉಪ್ಪಿ ಒಪ್ಪಿದ್ರೆ ಇವರೀಗ ಸಿಎಂ ಆಗ್ತಾರೆ….!

ಅರೆ, ಏನಿದು…? ಇದು ರಿಯಲ್ ಲೈಫಲ್ಲಲ್ಲ…ಸಿನಿಮಾದಲ್ಲಿ.
ಸಿಎಂ ಎಂಬ ಸಿನಿಮಾ ಟೈಟಲ್ ಉಪೇಂದ್ರ ಅವರ ಬಳಿ ಇದೆ. ಅವರು ಅದನ್ನು ಬಿಟ್ಟುಕೊಟ್ಟರೆ ವಿನೋದ್ ಪ್ರಭಾಕರ್ ಸಿಎಂ ಆಗ್ತಾರೆ.
ವಿನೋದ್ ಅಭಿನಯದ ಸಿನಿಮಾಕ್ಕೆ ನಿರ್ದೇಶಕ ರವಿಗೌಡ ‘ಸಿಎಂ’ (ಕಾಮನ್ ಮ್ಯಾನ್) ಎಂಬ ಟೈಟಲ್ ಇಡೋಕೆ ಯೋಚಿಸಿದ್ದಾರೆ. ಆದರೆ ಇದು ಉಪ್ಪಿ ಬಳಿ ಇದೆ.

ಉಪ್ಪಿ ಟೈಟಲ್ ಬಿಟ್ಟು ಕೊಟ್ರೆ ಮೇ 11ಕ್ಕೆ ಸಿನಿಮಾ ಮಹೂರ್ತ ನಡೆಯುತ್ತದೆ. ಚುನಾವಣೆ (ಮೇ 12) , ಹಾಗೂ ಚುನಾವಣಾ ಫಲಿತಾಂಶ (ಮೇ 15) ರ ಮೊದಲೇ ವಿನೋದ್ ಪ್ರಭಾಕರ್ ಸಿಎಂ ಆಗ್ತಾರೆ.






