ಭಾರತದ ಮಿಸಾಳ್ ಪಾವ್ ವಿಶ್ವದ ಅತಿ ರುಚಿಕರ ಖಾದ್ಯ..! ವಿಶ್ವಮಟ್ಟದಲ್ಲಿ ಭಾರತದ ತಿಂಡಿಗೆ ಸಿಕ್ಕಿತು ಮಹಾನ್ ಗೌರವ..!

Date:

ವಿಶ್ವದಲ್ಲಿ ಅತಿ ರುಚಿಕರ ಸಸ್ಯಾಹಾರಿ ಖಾದ್ಯ ಯಾವುದೆಂದು ಕೇಳಿದರೆ ಏನೆಂದು ಹೇಳಬಹದು..? ಉತ್ತರ ಸಿಗದೇ ತಲೆ ಕೆರೆದುಕೊಳ್ಳುತ್ತಾ ಕೂರಬಹುದು. ಆದರೆ ಅದಕ್ಕೆ ಉತ್ತರ ಸಿಕ್ಕಿದೆ. ಅದೇ ಭಾರತದ ಮಿಸಾಳ್ ಪಾವ್..!
ಯೆಸ್.. ಲಂಡನ್ ನಲ್ಲಿ ನಡೆದ ರುಚಿಕರ ಖಾದ್ಯಗಳ ಸ್ಪರ್ಧೆಯಲ್ಲಿ ಸಸ್ಯಹಾರ ವಿಭಾಗದಲ್ಲಿ ಭಾರತದ `ಮಿಸಾಳ್ ಪಾವ್’ ಮೊದಲ ಸ್ಥಾನ ಪಡೆಯುವ ಮೂಲಕ ವಿಶ್ವದ ಅತ್ಯಂತ ರುಚಿಕರ ಸಸ್ಯಹಾರಿ ಖಾದ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಬೀನ್ಸ್, ಅಲೂಗಡ್ಡೆ, ಈರುಳ್ಳಿ, ಬಟಾಣಿ ಮೊದಲಾದವನ್ನು ಬಳಸಿ ತಯಾರಿಸುವ ಮಸಾಲೆಯನ್ನು ಬ್ರೆಡ್ ಜೊತೆ ಉಪಹಾರವಾಗಿ ಸೇವಿಸುವ ಪದ್ದತಿ ಮಹಾರಾಷ್ಟ್ರದಲ್ಲಿ ಸಾಮಾನ್ಯವಾಗಿದೆ. ಮುಂಬೈನ ದಾದರಿನಲ್ಲಿರುವ `ಅಸ್ವಾದ್ ರೆಸ್ಟೋರೆಂಟ್’ ಬಾಣಸಿಗರು ತಯಾರಿಸಿದ್ದ ಮಿಸಾಳ್ ಪಾವ್ ತೀಪರ್ುಗಾರರ ಮೆಚ್ಚುಗೆಗೆ ಪಾತ್ರವಾಗುವ ಮೂಲಕ ಮೊದಲ ಸ್ಥಾನ ಪಡೆದಿದೆ.
ಮುಂಬೈನಲ್ಲಿ ಇದನ್ನು ಮಿಸಾಳ್ ಪಾವ್ ಎಂದು ಕರೆದರೆ, ಪುಣೆಯಲ್ಲಿ ಪುನೇರಿ ಪಾವ್ ಎನ್ನುತ್ತಾರೆ. ಹೀಗೆ ಮಹಾರಾಷ್ಟ್ರದ ಆಯಾ ಪ್ರಾಂತ್ಯಗಳ ಹೆಸರಿನಿಂದಲೇ ಕರೆಯಲ್ಪಡುವ ಇದು ಇಂದು ದೇಶದ ಇತರೆ ಭಾಗಗಳಲ್ಲೂ ಜನಪ್ರಿಯಗೊಂಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಮಿಸಾಳ್ ಪಾವ್ ಹಾಗೂ ವಡಾ ಪಾವ್ ಶಾಪ್ ಗಳು ತಲೆಯೆತ್ತಿದ್ದು ಈ ರುಚಿಕರ ಖಾದ್ಯವನ್ನು ಮಾರಾಟ ಮಾಡುತ್ತಿದ್ದಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...