ಪತ್ರಕರ್ತ, ನಿರೂಪಕ ರೆಹಮಾನ್ ಹಾಸನ್ ಸದ್ಯ ಸುದ್ದಿ ವಾಹಿನಿಗಳಿಂದ ದೂರವಿದ್ದು, ಸಿನಿಮಾ ರಂಗದಲ್ಲಿ ಬ್ಯುಸಿ ಆಗಿರೋ ವಿಷಯ ನಿಮಗೆಲ್ಲಾ ಗೊತ್ತೇ ಇದೆ.
ಕನ್ನಡ ಬಿಗ್ ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿದ್ದ ರೆಹಮಾನ್ ಅವರು ಬಳಿಕ ನ್ಯೂಸ್ ಚಾನಲ್ ಗಳಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾ ರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದೂರದರ್ಶನದಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದಾರೆ.
ರೆಹಮಾನ್ ಸಿನಿಮಾದಲ್ಲಿ ಬ್ಯುಸಿ, ಬ್ಯುಸಿ ಅಂತೀರಿ, ಎಲ್ಲಿ? ಅವರ ಯಾವ ಸಿನಿಮಾದ ಸುದ್ದಿಯೂ ಇಲ್ಲವಲ್ಲ? ಅನ್ನೋದು ನಿಮ್ಮ ಸಹಜ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವೇ ‘ವೆನಿಲ್ಲಾ’ .
ಹೌದು , ಜಯ ತೀರ್ಥ ನಿರ್ದೇಶನದ ವೆನಿಲ್ಲಾ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜಯರಾಂ ಮೈಸೂರು ಅವರು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅವರ ಮಗ ಅವಿನಾಶ್ ನಾಯಕ ನಟನಾಗಿ ನಟಿಸುತ್ತಿದ್ದು , ಸ್ವಾತಿ ನಾಯಕಿ.ಸಿಲ್ಲಿಲಲ್ಲಿ ಖ್ಯಾತಿಯ ರವಿಶಂಕರ್, ಪವನ್ , ಬಿ. ಸುರೇಶ್ ಮೊದಲಾದವರು ಚಿತ್ರದಲ್ಲಿದ್ದಾರೆ.
ಟಿವಿ9 ರೆಹಮಾನ್ ಎಂದೇ ಖ್ಯಾತರಾಗಿರಿವ ರೆಹಮಾನ್ ಹಾಸನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರ ಸಿನಿಮಾದ ದಿಕ್ಕನ್ನು ಬದಲಾಯಿಸುತ್ತಂತೆ. ರೆಹಮಾನ್ ತನ್ನ ಪಾತ್ರ ಯಾವುದು? ಹೇಗಿದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ತನ್ನ ಪಾತ್ರವೇ ಸಿನಿಮಾಕ್ಕೆ ಟರ್ನಿಂಗ್ ಪಾಯಿಂಟ್ ಎಂದು ಹೇಳಿದ್ದಾರೆ.
ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು , ನಿರೀಕ್ಷೆಯನ್ನು ಹುಟ್ಟುಹಾಕಿದೆ. ಯಾವುದಕ್ಕೂ ನೀವೊಮ್ಮೆ ಟ್ರೇಲರ್ ನೋಡಿ.