ವರ್ಗೀಸ್ ಕುರಿಯನ್.. ಈ ಹೆಸರು ಕೇಳದವರ್ಯಾರಿದ್ದಾರೆ ಹೇಳಿ..? ಭಾರತದಂತಹ ಬೃಹತ್ ದೇಶದಲ್ಲಿ ಕ್ಷೀರ ಕ್ರಾಂತಿಯನ್ನೇ ಮಾಡಿದ ಕೀರ್ತಿ ಅವರದ್ದು. ಆದ್ದರಿಂದ ಅವರ ಕೀರ್ತಿ ಇಡೀ ವಿಶ್ವಕ್ಕೇ ಹರಡಿದೆ. ಇಂದು ವರ್ಗೀಸ್ ಕುರಿಯನ್ ರ 94ನೇ ಜನ್ಮದಿನ ಆದ್ದರಿಂದ ಗೂಗಲ್ ತನ್ನ ಡೂಡಲ್ ಮೂಲಕ ಕ್ಷೀರ ಕ್ರಾಂತಿ ಪಿತಾಮಹನಿಗೆ ಹುಟ್ಟು ಹಬ್ಬದ ಶುಭಾಷಯ ಕೋರುತ್ತಿದೆ.
ಈ ಡೂಡಲ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದ್ದು, ವರ್ಗೀಸ್ ಕುರಿಯನ್ ರವರು ಹಾಲಿನ ಕ್ಯಾನ್ ಗಳನ್ನು ಕೈಯಲ್ಲಿ ಹಿಡಿದು ಕುಳಿತಿದ್ದು, ಅವರ ಪಕ್ಕದಲ್ಲೇ ಒಂದು ಎಮ್ಮೆ ಇರುವಂತೆ ಚಿತ್ರಿಸಲಾಗಿದೆ. ಆ ಮೂಲಕ ಮಹಾನ್ ವ್ಯಕ್ತಿಗೆ ತನ್ನದೇ ಶೈಲಿಯಲ್ಲಿ ಗೂಗಲ್ ಜನ್ಮದಿನದ ಶುಭಾಷಯ ಕೋರಿದೆ.
ವರ್ಗೀಸ್ ಕುರಿಯನ್ ರವರು 1921 ನವೆಂಬರ್ 26ರಂದು ಕೇರಳದ ಕ್ಯಾಲಿಕಟ್ ನಲ್ಲಿ ಜನಿಸಿದರು. ಮದ್ರಾಸ್ ನ ಲೊಯೋಲಾ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪದವಿ ಪಡೆದರು. 1940ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದರು.
1998ರಲ್ಲಿ ವರ್ಗೀಸ್ ಕುರಿಯನ್ ರ ಪ್ರಯತ್ನದ ಫಲವಾಗಿ ಭಾರತ ದೇಶ ಅಮೆರಿಕಾವನ್ನು ಮೀರಿಸಿ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಎಂಬ ಖ್ಯಾತಿಗೆ ಪಾತ್ರವಾಯಿತು. ಆದ್ದರಿಂದ ವರ್ಗೀಸ್ ಕುರಿಯನ್ ರ ನೆನಪಿಗಾಗಿ ಇಂದು ರಾಷ್ಟ್ರೀಯ ಹಾಲು ದಿನಾಚರಣೆಯನ್ನೂ ಆಚರಿಸಲಾಗುತ್ತಿದೆ. ಇಂದು ದೇಶದ ಎಲ್ಲಾ ಡೈರಿಗಳು, ಹಾಲು ಉತ್ಪಾದಕ ಸಂಸ್ಥೆಗಳು ಈ ದಿನಾಚರಣೆಯನ್ನು ಆಚರಿಸುತ್ತವೆ. ಆ ಮೂಲಕ ವರ್ಗೀಸ್ ಕುರಿಯನ್ ರಿಗೆ ಗೌರವ ಸಲ್ಲಿಸುತ್ತವೆ.
ಕುರಿಯನ್ ರವರು ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್(ಜಿಸಿಎಂಎಂಎಫ್)ನ್ನು ಸ್ಥಾಪಿಸಿದರು. ಅದರ ಮೂಲಕ ಅಮೂಲ್ ಎಂಬ ಡೈರಿ ಬ್ರಾಂಡ್ ನ್ನು ಹೊರತಂದರು. ಇಂದು ಅಮೂಲ್ ನ ಆಹಾರ ಪದಾರ್ಥಗಳು ವಿಶ್ವವಿಖ್ಯಾತಿಯಾಗಿವೆ. ಐಆರ್ಎಂಎ ಮತ್ತು ಎನ್ ಡಿಡಿಬಿಗಳೂ ಸೇರಿ ಸುಮಾರು 30ಕ್ಕೂ ಹೆಚ್ಚು ಸಂಸ್ಥೆಗಳನ್ನು ಹುಟ್ಟುಹಾಕಿದ ಕೀರ್ತಿ ವರ್ಗೀಸ್ ಕುರಿಯನ್ ರಿಗೆ ಸಲ್ಲುತ್ತದೆ. ಅಂಥಹ ಮಹಾನ್ ವ್ಯಕ್ತಿಗೆ ತನ್ನ ಡೂಡಲ್ ಮೂಲಕ ನಮನ ಸಲ್ಲಿಸಿದ ಗೂಗಲ್ ಕಾರ್ಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.
- ರಾಜಶೇಖರ ಜೆ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಎಲ್ಲರಿಗೂ ಸಂವಿಧಾನ ದಿನದ ಶುಭಾಷಯಗಳು..! ಭಾರತ ಪ್ರಧಾನ ಮಂತ್ರಿಗಳಿಂದ ಘೋಷಣೆ..!
ರಾಹುಲ್ ಗಾಂಧಿ ಇಂದು ಮೇಕ್ ಇನ್ ಇಂಡಿಯಾ ವರ್ಕ್ ಆಗ್ತಿಯಾ ಅಂತ ಕೇಳಿದ್ರು..! ಬೆಂಗಳೂರು ಹುಡುಗೀರು ಏನಂದ್ರು ಗೊತ್ತಾ..?!
ಅಭಿಷೇಕ್ ಗೆ ಗೂಗಲ್ ನೀಡುತ್ತೆ 20000000 ರೂಪಾಯಿಗಳ ಸಂಬಳ..! ಐಐಟಿ ವಿದ್ಯಾರ್ಥಿಗೆ ಕೋಟಿ ಕೋಟಿ ಸಂಬಳದ ಆಫರ್ ..!
ಅವಳಲ್ಲದೆ ಅವನನ್ನು ಬೇರೆ ಯಾರೂ ಮದುವೆ ಆಗ್ತಿರಲಿಲ್ಲ..! ಈ ಸ್ಟೋರಿ ಓದಿದ ಮೇಲೆ ಹೇಳ್ತೀರಾ, ಅವಳು ನಿಜಕ್ಕೂ ಗ್ರೇಟ್..!
ಅಮೀರ್ ಖಾನ್ ಹೇಳಿದ್ದು ಎಷ್ಟು ಸರಿ…? ಕಿರಿಕ್ ಕೀರ್ತಿ ಮಾತನಾಡಿದ್ದಾರೆ ಕೇಳಿ… ನಿಮಗೇನನ್ಸುತ್ತೋ ಹೇಳಿ..!