ವಿದ್ಯಾ ವೋಕ್ಸ್ ಬೆಂಗಳೂರಿಗೆ ಬರ್ತಿದ್ದಾರೆ…!

Date:

ಅಮೇರಿಕಾದ ಜನಪ್ರಿಯ ಯೂಟ್ಯೂಬರ್ ವಿದ್ಯಾ ಐಯ್ಯರ್ ನಮ್ಮ ಬೆಂಗಳೂರಿಗೆ ಬರ್ತಿದ್ದಾರೆ. ಇವರು ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಐಯ್ಯರ್ ಕುಟುಂಬದ ಈ ಬೆಡಗಿ, ನೆಲೆನಿಂತಿದ್ದು ಅಮೆರಿಕಾದಲ್ಲಿ…! ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಮನಶಾಸ್ತ್ರ ವಿಷಯದಲ್ಲಿ ಪದವಿ ಶಿಕ್ಷಣ ಪಡೆದ ಇವರೀಗ ಜನಪ್ರಿಯ ಯೂಟ್ಯೂಬ್ ಸ್ಟಾರ್.

2015ರಲ್ಲಿ ‘ವಿದ್ಯಾ ವೋಕ್ಸ್’ ಎಂಬ ಯೂಟ್ಯೂಬ್ ಚಾನಲ್ ಓಪನ್ ಮಾಡಿದ್ದಾರೆ. ಕೇವಲ ಎರಡೇ ಎರಡು ವರ್ಷದಲ್ಲಿ 3ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ಇವರ ಚಾನಲ್‍ಗೆ ಸಬ್ಸ್‍ಕ್ರೈಬ್ ಆಗಿದ್ದಾರೆ…!


ವಿದ್ಯಾ ಐಯ್ಯರ್ ಅಂದ್ರೆ ಯಾರಿಗೂ ಅಷ್ಟಾಗಿ ಅರ್ಥವಾಗಲ್ಲ..! ವಿದ್ಯಾ ವೋಕ್ಸ್ ಅಂದ್ರೆ ಮಾತ್ರ ಗೊತ್ತಾಗೋದು..! ಅಷ್ಟರಮಟ್ಟಿಗೆ ವಿದ್ಯಾ ಅವರ ವಿದ್ಯಾ ವೋಕ್ಸ್ ಚಾನಲ್ ಜನಪ್ರಿಯವಾಗಿದೆ. ಪಾಶ್ಚಿಮತ್ಯ ಹಾಡು ಮತ್ತು ಭಾರತೀಯ ಸಿನಿಮಾ ಹಾಡುಗಳನ್ನು ಮಿಕ್ಸ್ ಮಾಡಿ ಇವರದ್ದೇ ಶೈಲೀಲಿ ವೀಡಿಯೋ ರೆಕಾರ್ಡ್ ಮಾಡಿ ಯೂಟ್ಯೂಬ್‍ಗೆ ಬಿಟ್ಟು ಫೇಮಸ್ ಆದವರು..!


ಕರ್ನಾಟಕ ಸಂಗೀತದ ಜೊತೆಗೆ ಪಾಶ್ಚಿಮಾತ್ಯ ಸಂಗೀತದ ಮಿಶ್ರಣ ಹೊಸ ಟ್ರೆಂಡ್ ಅನ್ನೇ ಸೃಷ್ಠಿಸಿಬಿಟ್ಟಿತು. ಕೋಟಿಗಟ್ಟಲೆ ಜನ ವಿದ್ಯಾ ವೋಕ್ಸ್ ವೀಡಿಯೋಗಳನ್ನು ನೋಡುತ್ತಾರೆ. ಇದನ್ನು, ಅಂದರೆ ಎರಡು ಭಿನ್ನ ಗೀತೆಗಳನ್ನು ಒಟ್ಟಿಗೆ ಸೇರಿಸಿ ಒಂದೇ ವಾದ್ಯ ಸಂಯೋಜನೆಗೆ ಒಳಪಡಿಸಿ, ಸರಿ ಹೊಂದಿಸಿ ಹಾಡೋದನ್ನು ಮ್ಯಾಷಪ್ ಅಂತಾರೆ.


ಹೀಗೆ ಮ್ಯಾಷಪ್ ಮೂಲಕ ಪರಿಚಿತರಾದ ವಿದ್ಯಾವೋಕ್ಸ್ ನಂತರ ಈ ಮ್ಯಾಷಪ್ ಜೊತೆ ಜೊತೆಗೆ ತಮ್ಮ ಖಾಸಗಿ ಬದುಕಿನ ವೀಡಿಯೋಗಳನ್ನೂ ಸಹ ಅಪಲೋಡ್ ಮಾಡಲಾರಂಭಿಸಿದ್ರು. ಅಷ್ಟೇಅಲ್ಲದೆ ತಮ್ಮ ಸ್ವಂತ ಹಾಡಿನ ವೀಡಿಯೋಗಳ ಮೂಲಕ ಸದ್ದು ಮಾಡ್ತಿದ್ದಾರೆ. ಏನಿಲ್ಲ ಅಂದ್ರು ಕನಿಷ್ಠ 50 ಲಕ್ಷ ಮಂದಿಯಾದ್ರೂ ಇವರ ವೀಡಿಯೋ ನೋಡೇ ನೋಡ್ತಾರೆ…!


ಈಗೀಗ ಇವರ ವೇದಿಕೆ ಕಾರ್ಯಕ್ರಮಗಳಿಗೂ ಭರ್ಜರಿ ಬೇಡಿಕೆ ಕ್ರಿಯೇಟ್ ಆಗಿದೆ. ಇವರೀಗ ನಮ್ಮಬೆಂಗಳೂರಿಗೆ ಬರ್ತಿದ್ದಾರೆ.


ರೇಡಿಯೋ ಮಿರ್ಚಿಯವರು ವಿದ್ಯಾ ಐಯ್ಯರ್ ಅಲಿಯಾಸ್ ವಿದ್ಯಾ ವೋಕ್ಸ್ ಅವರನ್ನು ಬೆಂಗಳೂರಿಗೆ ಕರೆತರ್ತಿದ್ದಾರೆ. ಇದೇ ನವೆಂಬರ್‍ನಲ್ಲಿ ಪುಣೆ, 18ರಂದು ಕೋಲ್ಕತ್ತಾ, 19ರಂದು ಹೈದರಾಬಾದ್, 24ರಂದು ಬೆಂಗಳೂರು, 25ರಂದು ನವದೆಹಲಿ, 26ರಂದು ಅಹಮದಾಬಾದ್‍ನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಮಿರ್ಚಿ ಲೈವ್ ಕಾರ್ಯಕ್ರಮಕ್ಕೆ ಬರಲು ಹಾಗೂ ಇಲ್ಲಿನ ಅಭಿಮಾನಿಗಳನ್ನು ಕಾಣಲು ತುಂಬಾ ಉತ್ಸುಕಳಾಗಿದ್ದೇನೆ ಅಂತಾರೆ ವಿದ್ಯಾ ವೋಕ್ಸ್.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...