ಸಾಮಾನ್ಯ ಅಟೆಂಡರ್ ಆಗಿದ್ದ ವಿಜಯಲಕ್ಷ್ಮಿ ಆಸ್ಪತ್ರೆಯ ವೈದ್ಯರನ್ನೇ ಹೆದರಿಸ್ತಾ ಇದ್ಲು ಅಂದ್ರೆ ನಂಬ್ತೀರಾ..?

Date:

ಮಾಜಿ ಅಬಕಾರಿ ಸಚಿವ ಹೆಚ್ ವೈ ಮೇಟಿ ತನ್ನನ್ನು ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳೆದುರು ಬಾಯ್ಬಿಟ್ಟಿದ್ದ ವಿಜಯಲಕ್ಷ್ಮಿ ಸರೂರ ಓರ್ವ ಸಾಮಾನ್ಯ ಅಟೆಂಡರ್ ಆಗಿದ್ದಳು. ಅದೂ ಕೂಡ ಗುತ್ತಿಗೆ ಆಧಾರದ ಮೇಲೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಷಯ. ಆದ್ರೆ ನಿಮಗೆಲ್ಲಾ ಇನ್ನೊಂದು ವಿಷಯ ಗೊತ್ತಿಲ್ಲ ಅನ್ಸತ್ತೆ. ಅದೇನಂದ್ರೆ ಸಾಮಾನ್ಯ ಆಸ್ಪತ್ರೆ ಅಟೆಂಡರ್ ಇಡೀ ಆಸ್ಪತ್ರೆಯ ಅಧಿಕಾರಿಗಳನ್ನೆ ತನ್ನ ಹಿಡಿತದಲ್ಲಿಟ್ಟುಕೊಂಡಿದ್ಲು ಅಂದ್ರೆ ನಂಬ್ತೀರಾ..? ನಂಬ್ಲೇಬೇಕು..! ಅಷ್ಟಕ್ಕೂ ಇಷ್ಟೊಂದು ಪವರ್ ಆಕೆಗೆ ಬರಲು ಕಾರಣವಾದ್ರೂ ಯಾರು..? ಮೇಲಾಧಿಕಾರಿಗಳಿಂದ ಹಿಡಿದು ಆಸ್ಪತ್ರೆಯ ವೈದ್ಯರವರೆಗೂ ಗುತ್ತಿಗೆ ನೌಕರಿಯ ಈ ವಿಜಯಲಕ್ಷ್ಮಿ ಹೆದರಿಸ್ತಾ ಇದ್ಲು ಅಂದ್ರೆ ಆ ಪವರ್ ಕೊಟ್ಟಿದಾದ್ರೂ ಯಾರು..? ಇವಕ್ಕೇಲ್ಲಾ ಮಾಜಿ ಸಚಿವ ಹೆಚ್.ವೈ ಮೇಟಿಯೇ ಕಾರಣಾನ..? ಅದರ ಸಂಪೂರ್ಣ ಡಿಟೇಲ್ಸ್ ನಾವೇಳ್ತಿವಿ ಕೇಳಿ..!

ಬೆನ್ನು ನೋವಿನ ಸಮಸ್ಯೆಯಿಂದ ಬಳಲ್ತಾ ಇದ್ದ ಮಾಜಿ ಅಬಕಾರಿ ಸಚಿವ ಮೇಟಿ ಅವರು ಬಾಗಲಕೋಟೆಯ ಆಯುಷ್ ಅಧಿಕಾರಿಯಾದ ಡಾ. ಪರಮೇಶ್ವರ್ ಎಸ್ ಗುಗ್ಗರಿ ಅವರು ತಮ್ಮ ಆಸ್ಪತ್ರೆಗೆ ಆಹ್ವಾನ ನೀಡಿದ್ರಂತೆ..! ಇದೇ ಆಸ್ಪತ್ರೆಯಲ್ಲಿ ಸಾಮಾನ್ಯ ಅಟೆಂಡರ್ ಆಗಿದ್ದ ವಿಜಯಲಕ್ಷ್ಮಿ ಹಾಗೂ ಇತರೆ ಮೂವರು ಅಟೆಂಡರ್‍ಗಳು ವೈದ್ಯರಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸ್ತಾ ಇದ್ರು. ಚಿಕಿತ್ಸೆಗೆಂದು ಮೊದ ಮೊದಲು ಈ ಆಸ್ಪತ್ರೆಗೆ ಬಂದ ಮೇಟಿ ಅವರಿಗೆ ಸಹಕಾರಿಯಾಗಿ ಪುರುಷ ನೌಕರರು ರಜೆಯಲ್ಲಿದ್ದ ಕಾರಣ ಮೇಟಿಗೆ ಸರ್ವಾಂಗ ಅಭ್ಯಂಗ, ಸರ್ವಾಂಗ ಸ್ವೇದ ಹಾಗೂ ಬಸ್ತಿ ಚಿಕಿತ್ಸೆಗಳನ್ನು ನೀಡಲು ವಿಜಯಲಕ್ಷ್ಮೀ ನೆರವಾಗಿದ್ದರು.  ಒಂದೆರಡು ಬಾರಿ ಮೇಟಿ ಅವರು ಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ಭೇಟಿ ಮಾಡಿದಾಗ್ಲೂ ಇವರಿಬ್ಬರ ನಡುವೆ ಸಂಬಂಧ ಇದೆ ಅನ್ನೋದು ಗೊತ್ತಾಗಿರಲಿಲ್ಲ ಅಂತಾರೆ ಅಲ್ಲಿನ ವೈದ್ಯ ಡಾ. ಪರಮೇಶ್ವರ್. ಅವರ ಪ್ರಕಾರ ಅವರಿಬ್ಬರಿಗೆ ಆಗಲೇ ಮೊದಲ ಪರಿಚಯವಾದದ್ದು ಎನ್ನುತ್ತಾರೆ.

ಅಟೆಂಡರ್ ವೃತ್ತಿಯಲ್ಲಿದ್ದ ವಿಜಯಲಕ್ಷ್ಮಿಗೆ ಯಾವಾಗ ಮೇಟಿ ಅವರ ಪರಿಚಯವಾಯ್ತೋ ಅಲ್ಲಿಂದ ಆಕೆಯ ವರಸೆ ಬದ್ಲಾಗುತ್ತಾ ಹೋಯ್ತಂತೆ..! ಇಡೀ ಆಸ್ಪತ್ರೆಯ ಅಧಿಕಾರಿಗಳ ಮೇಲೆ ತನ್ನ ಪ್ರಭಾವ ಹೆಚ್ಚಿಸೋಕೆ ಆರಂಭಿಸಿದ್ದಳು. ಮೇಲಾಧಿಕಾರಿ, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡುವ ಮೂಲಕ ಎಲ್ಲರಿಗೂ ಬೆದರಿಕೆ ಒಡ್ಡುತ್ತಿದ್ದರು. ನಾನು ಸಚಿವೆ ಆಪ್ತೆ ಅಂತ ಹೇಳ್ಕೊಳ್ತಾ ಮೇಲಾಧಿಕಾರಿಗಳೂ ನನಗೆ ಗೌರವ ನೀಡ್ಬೇಕು ಅಂತ ಬಲವಂತ ಪಡಿಸಿದ್ದರು. ಎಷ್ಟೋ ವೈದ್ಯರು ಈಕೆಯ ಬೆದರಿಕೆಗೆ ಹೆದರಿ ವರ್ಗಾವಣೆ ಮೊರೆ ಹೋದ ಉದಾಹರಣೆಗಳೂ ಇದೆ. ತನಗೆ ಇಷ್ಟ ಬಂದಾಗ ಆಸ್ಪತ್ರೆಗೆ ಬರೋದು, ಅಕಸ್ಮಾತ್ ಬಂದ್ರೂ ಕೂಡ ಆರಾಮಾಗಿ ಕುಳಿತುಕೊಳ್ತಾ ಇದ್ರಂತೆ..!
ಅಟೆಂಡರ್ ಬಳಿ ಇತ್ತು ಲಕ್ಸುರಿ ಕಾರು..!
ಸಾಧಾರಣ ಅಟೆಂಡರ್ ಆಗಿದ್ದ ವಿಜಯಲಕ್ಷ್ಮಿ ತನ್ನ ಗಂಡನ ಹೆಸ್ರಲ್ಲಿ ಮೂರು ತಿಂಗಳ ಹಿಂದೆ ಹ್ಯೂಂಡೈ ಅಸೆಂಟ್ ಕಾರನ್ನು ಖರೀದಿ ಮಾಡಿದ್ರಂತೆ..! ಕಾರು ಕೊಂಡ ದಿನ ಆಕೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರೆಂದು ಸಿಬ್ಬಂದಿಯೋರ್ವರು ಮಾಹಿತಿ ನೀಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

ಬಿಗ್‍ಬಾಸ್ ಮನೆಯಿಂದ ಸುಕೃತ ಔಟ್.?

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..! Kirik vs Pratham

ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?

ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!

ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!

ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...