ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿನಯದ ಸೂರ್ಯವಂಶ, ಬಹುಭಾಷ ನಟ ಪ್ರಕಾಶ್ ರೈ ನಟನೆಯ ‘ನಾಗಮಂಡಲ’ ಸಿನಿಮಾ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ತನ್ನದೇಯಾದ ಹೆಸರು ಮಾಡಿರೋ ನಟಿ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಿನಿಮಾ ರಂಗದಿಂದ ದೂರವಿದ್ದರು. ಇವರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು.
ಈಗ ಈ ಚಂದದ ನಟಿ ಚಂದನವನಕ್ಕೆ ರೀ ಎಂಟ್ರಿ ಕೊಡ್ತಿದ್ದಾರೆ.
ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್ ‘ ಸಿನಿಮಾದಲ್ಲಿ ವಿಜಯ ಲಕ್ಷ್ಮಿ ಅಭಿನಯಿಸಲಿದ್ದಾರೆ.
ನೂತನ್ ಉಮೇಶ್ ನಿರ್ದೇಶನದ ‘ಫೈಟರ್’ ನಲ್ಲಿ ವಿಜಯಲಕ್ಷ್ಮಿ ವಿನೋದ್ ಪ್ರಭಾಕರ್ ಅವರ ತಾಯಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಆಗಸ್ಟ್ 6 ರಿಂದ ಚಿತ್ರೀಕರಣ ಶುರುವಾಗಲಿದೆ.