ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರ ಮುಡಿಗೆ ಮತ್ತೊಂದು ಕಿರೀಟ ಅಲಂಕರಿಸಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 6 ಸಾವಿರ ರನ್ ಗಳನ್ನು ಪೂರೈಸಿದ್ದು, ಭಾರತ ಪರ 6 ಸಾವಿರ ರನ್ ಗಡಿ ದಾಟಿದ 10ನೇ ಕ್ರಿಕೆಟಿಗ ಎಂಬ ಕೀರ್ತಿ ಇವರದ್ದಾಗಿದೆ.
Another day, another milestone for captain @imVkohli. 6K and counting in Tests ??? #TeamIndia #ENGvIND pic.twitter.com/fX3g22ZEXM
— BCCI (@BCCI) August 31, 2018
ಇಂಗ್ಲೆಂಡ್ ವಿರುದ್ಧ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 6 ಸಾವಿರ ರನ್ ಗೆ 6ರನ್ ಬೇಕಿತ್ತು. ಜೇಮ್ಸ್ ಆ್ಯಂಡರ್ ಸನ್ ಎಸೆತದಲ್ಲಿ ಬೌಂಡರಿ ಬಾರಿಸುವುದರೊಂದಿಗೆ ವಿರಾಟ್ ದಾಖಲೆ ನಿರ್ಮಿಸಿದರು.
ಸುನಿಲ್ ಗವಾಸ್ಕರ್ 117ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರು. ವಿರಾಟ್ 119 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಅತಿವೇಗವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 6ಸಾವಿರ ರನ್ ಗಡಿದಾಟಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಖ್ಯಾತಿ ವಿರಾಟ್ ಅವರದ್ದಾಗಿದೆ.