ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪ್ರತಿ ಮ್ಯಾಚಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡುತ್ತಲೇ ಇರುತ್ತಾರೆ.
ಅತಿವೇಗವಾಗಿ 10ಸಾವಿರ ರನ್ ಪೂರೈಸಿದ ರೆಕಾರ್ಡ್ ಸೇರಿದಂತೆ ಲೆಕ್ಕವಿಲ್ಲದಷ್ಟು ರೆಕಾರ್ಡ್ ಗಳನ್ನು ಈಗಾಗಲೇ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ಆದರೆ ವಿರಾಟ್ ಯಾವ ರೆಕಾರ್ಡ್ ಬರೆದರೂ, ಯಾರ ರೆಕಾರ್ಡ್ ಮುರಿದರೂ ಈ ರೆಕಾರ್ಡ್ ಮಾತ್ರ ಎಂದೂ ಮುರಿಯಲು ಸಾಧ್ಯವೇ ಇಲ್ಲ ಅನ್ನಬಹುದು.
ಅದ್ಯಾವುದು ಅಂದ್ರಾ? ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಬ್ಯಾಟಿಂಗ್ ಸರಾಸರಿ. ಬ್ರಾಡ್ಮನ್ ಅವರು ಬ್ಯಾಟಿಂಗ್ ಸರಾಸರಿ 99.99 ಅನ್ನು ವಿರಾಟ್ ಅಳಿಸಿ ಹಾಕುವುದು ಕಷ್ಟ. ಹೀಗಂತ ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ವಾ ಹೇಳಿದ್ದಾರೆ.