ಪ್ರಿಯಾ ಓದುಗರೆ.. ನಾನು ಈಗ ಹೇಳ್ತೀರೊ ಮಾತುಗಳು ನನ್ನವಲ್ಲ.. ಬದಲಿಗೆ ನನ್ನ ಹತ್ತಿರದವರಿಂದ ಕೇಳಿರೋದು.. ಈ ಮಾತುಗಳನ್ನ ಕ್ರಿಕೆಟ್ ನಡೆಯೋ ಸಂದರ್ಭದಲ್ಲಿ ನೀವು ಖಂಡಿತ ಕೇಳಿರ್ತೀರಾ.. ಅದೇನಂದ್ರೆ
1. ನಾನು ಮ್ಯಾಚ್ ನೋಡಿದ್ರೆ ನಮ್ಮೋರು ಗೆಲ್ಲ..!
2.ಸಚಿನ್ ಸೆಂಚ್ಯುರಿ ಹೊಡೆದ್ರೆ ಮ್ಯಾಚ್ ಗೆಲ್ಲೋದೆ ಇಲ್ಲ..!
3.ಇವ್ನು ಔಟ್ ಆದ್ನ ಅಲ್ಲಿಗೆ ಮ್ಯಾಚ್ ಮುಗಿತು ಬಿಡು..!
4.ಅವನು ಯಾಕೋ ಫೇಸ್ ಬಂದ ಅಲ್ಲಿಗೆ ಇವತ್ತು ಮ್ಯಾಚ್ ಗೆದ್ದಹಾಗೆ..!
5. 111 ರನ್ ಬಂತಲ್ಲೋ ಹಾಗಿದ್ರೆ ಇವತ್ತಿನ ಮ್ಯಾಚ್ ಗೋವಿಂದ..
5.ಇದೆಲದಕ್ಕಿಂತ ಹೆಚ್ಚಾಗಿ ಈಗ ಕೇಳಿ ಬರ್ತಿರೋ ಮಾತು ವಿರಾಟ್ ಕೊಹ್ಲಿ 100 ಹೊಡೆದ್ನ ಅಲ್ಲಿಗೆ ನಮ್ಮೋರು ಗೆಲ್ಲೋದೆ ಇಲ್ಲ ಬಿಡು..
ಟಿವಿ ಆಫ್ ಮಾಡು.. ಈ ಎಲ್ಲ ಮಾತುಗಳನ್ನ ನೀವ್ ಕೇಳಿರ್ತೀರಾ..
ಹೀಗೆ ಹೇಳೋರೆಲ್ಲ ಕವಡೆ ಹಾಕದೆ ಅಂಜನ ನೋಡದೆ ಭವಿಷ್ಯವನ್ನ ನುಡಿಯೋ ಮಹಾನ್ ಕ್ರಿಕೆಟ್ ಜ್ಯೋತಿಷಿಗಳು…
ಈಗ ವಿರಾಟ್ ಕೊಹ್ಲಿಯ ಆಟಕ್ಕೆ ಇಡೀ ವಿಶ್ವವೇ ತಲೆಬಾಗಿದೆ.. ರನ್ ಮಿಷನ್ ಅನ್ನೋ ಕಿರೀಟವನ್ನ ನೀಡಿ ಹೆಮ್ಮೆಯಿಂದ ನಮ್ಮವ ವಿರಾಟ್ ಅಂತಿದ್ದಾರೆ.. ಹೀಗಿದ್ರು ಕೊಹ್ಲಿ ನೂರು ಹೊಡೆದ್ರೆ ಮ್ಯಾಚ್ ಗೆಲ್ಲೋಲ್ಲ ಅನ್ನೋದಕ್ಕೆ ಕೊಹ್ಲಿ ಈ ಹಿಂದೆ ನಡೆದ ಆರ್ಸಿಬಿ ಪಂದ್ಯದಲ್ಲಿ ಉತ್ತರವನ್ನ ನೀಡಿದ್ದಾರೆ.. ತಾನೊಬ್ಬನೆ ನಿಂತು ಆರ್ಸಿಬಿಗೆ ಗೆಲುವನ್ನ ತಂದು ಕೊಟ್ಟಿದ್ದಾರೆ.. ಇದು ಕೊಹ್ಲಿಯ ತಾಕತ್ತು..
ನಿಜವಾಗ್ಲೂ ವಿರಾಟ್ ಸೆಂಚ್ಯುರಿ ಹೊಡೆದಿರೋ ಮ್ಯಾಚ್ಗಳನ್ನ ನಮ್ಮ ತಂಡ ಗೆದ್ದಿಲ್ವ..? ಅದಕ್ಕೂ ಇಲ್ಲಿದೆ ನೋಡಿ ಅಂಕಿ ಅಂಶಗಳು..
ಶ್ರೀಲಂಕಾ ವಿರುದ್ದದ ಮ್ಯಾಚ್ ನ ಮೂಲಕ 24/12/2009ರಿಂದ ತನ್ನ ಸೆಂಚ್ಯುರಿ ಅಕೌಂಟ್ ನ ಓಪನ್ ಮಾಡಿದ ಕೊಹ್ಲಿಯ ಆ ಮೊದಲ 107 ರನ್ಗಳ ನೆರವಿನಿಂದ ಭಾತರ ಆ ಮ್ಯಾಚ್ ನ ಗೆಲ್ಲುತ್ತೆ… ಅಲ್ಲಿಂದ ಇಲ್ಲಿವರೆಗೆ ಅಂದ್ರೆ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯವರೆಗೆ ಕೊಹ್ಲಿ 25 ಸೆಂಚ್ಯುರಿಯನ್ನ ಸಿಡಿಸಿದ್ದಾರೆ.. ಈ 25 ಶತಕಗಳಲ್ಲಿ 21 ಪಂದ್ಯಗಳನ್ನ ಭಾತರ ಗೆದ್ದಿದೆ ಅನ್ನೋದನ್ನ ಮರಿಯಬಾರದು.. ಇಲ್ಲಿ ಇಂಡಿಯಾ ಸೋತಿರೋದು ಕೇವಲ 4 ಪಂದ್ಯಗಳನ್ನ..
ಇನ್ನೂ ಐಪಿಲ್ನಲ್ಲಿ ಕೊಹ್ಲಿ ಸಿಡಿಸಿರೋದು 2 ಶತಕ ಮಾತ್ರ.. ಮೊದಲನೇ ಶತಕ ಗುಜರಾತ್ ಲಯನ್ಸ್ ಆಪೋಸಿಟ್.. ಆದ್ರೆ ಅಂದು ಕೊಹ್ಲಿ ಆಟಕ್ಕೆ ಟೀಮ್ ಕಡೆಯಿಂದ ತಕ್ಕ ಸಾಥ್ ಸಿಕ್ಕಿದ್ರೆ ಆ ಪಂದ್ಯ ಸಹ ನಮ್ಮದಾಗ್ತಿತ್ತು.. ಬಟ್ ಆ ಮ್ಯಾಚ್ ಸೋತಿದ್ದೆ ಬಂತು ಮತ್ತೆ ಕೇಳಿ ಬಂದಿದ್ದು ಕೊಹ್ಲಿ 100 ಹೊಡೆದ್ರೆ ಮ್ಯಾಚ್ ಗೆಲಲ್ಲ ಅಂತ.. ಆದ್ರೆ ಪುಣೆ ಆಪೋಸಿಟ್ ನಡೆದ ಮ್ಯಾಚ್ ನಲ್ಲಿ ಮತ್ತೆ ಕೊಹ್ಲಿ ಬ್ಯಾಟ್ ಮೋಡಿ ಮಾಡಿದೆ.. 58 ಬಾಲ್ ಗಳಲ್ಲಿ ನಾಟೌಟ್ ಆಗಿ 108 ರನ್ ಬಾರಿಸೋದ್ರ ಮೂಲಕ ಬೆಂಗಳೂರಿಗೆ ಜಯವನ್ನ ತಂದುಕೊಟ್ಟಿದ್ಧಾರೆ..
ಹೀಗೆ ಮಾತಾಡೋರಿಗೆ ತನ್ನ ಬ್ಯಾಟ್ನ ಮೂಲಕವೆ ಉತ್ತರವನ್ನ ನೀಡಿದ್ದಾರೆ ಈ ರನ್ ಮಿಶನ್.. ನಿಮಗೆ ಇಲ್ಲಿ ಇನ್ನೂ ಒಂದು ಮಾತನ್ನ ನೆನಪಿಸಬೇಕಿದೆ.. ಅದೇನಂದ್ರೆ ಅನುಷ್ಕಾ ಮ್ಯಾಚ್ ನೋಡೋಕೆ ಹೊದ್ರೆ ಆ ಮ್ಯಾಚ್ ನಲ್ಲಿ ಕೊಹ್ಲಿ ಔಟ್ ಆಗ್ತಾನೆ ಅಂತಾ.. ಕಾಕತಾಳಿಯಾನೋ ಏನೋ ಆ ಕ್ಷಣಗಳಲ್ಲಿ ಹಾಗೆ ಆಗಿದುಂಟು… ಬಟ್ ಕೊಹ್ಲಿ ಬ್ಯಾಟ್ ಬೀಸಿದ್ರೆ ಮ್ಯಾಚ್ ಸೋತಿರೋದು ತುಂಬಾ ಕಮ್ಮಿ.. ಇನ್ ಮೇಲಾದ್ರ ಟಿಪಿಕಲ್ ಭವಿಷ್ಯವನ್ನ ನುಡಿಯೋದನ್ನ ನಿಲ್ಲಿಸಿ… ಆಟಗಾರನ ಆಟವನ್ನ ಗೌರವಿಸಿ.. ಅಂದಹಾಗೆ ಈ ಸಂಧರ್ಭದಲ್ಲಿ ಕೊಹ್ಲಿ ಪರವಾಗಿ ನಮ್ಮ ಸಿನಿಮಾ ಡೈಲಾಗ್ ಒಂದು ನೆನಪಿಗೆ ಬರುತ್ತೆ.. ಅದೇನ್ ಗೊತ್ತಾ..? `ಅಣ್ತಮ್ಮ ಕಾಲ್ ಎಳೆಯೋರು ಯಾವಾಗ್ಲೂ ಕಾಲ್ ಕೆಳಗೆ ಇರ್ತಾರೆ’.. ಜೈ ವಿರಾಟ್ ಕೊಹ್ಲಿ…. 😉
- ಅಶೋಕ
POPULAR STORIES :
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie
ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!






