ಮನೆಕೆಲಸದಾಕೆಗೆ ಹಿರಿಯ ನಟಿ ತಾರಾ ಕಿರುಕುಳ ನಿಜವಾ…?

Must read

ಹಿರಿಯ ನಟಿ ಹಾಗೂ ಎಂಎಲ್‌ಸಿ ತಾರಾ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಗುವನ್ನು ನೋಡಿಕೊಳ್ಳೋ ಸಲುವಾಗಿ ಕರೆದುಕೊಂಡು ಹೋಗಿ ತಾರಾ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧ ಪಟ್ಟಂತೆ ತುಮಕೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಲತಾ ಎನ್ನುವ ಮಹಿಳೆ, ಮಗುವನ್ನ ನೋಡಿಕೊಳ್ಳುವುದಕ್ಕೆ ಕರೆದುಕೊಂಡು ಹೋದ ತಾರ ನಂತರ ನನ್ನಿಂದ ಎಲ್ಲ ಕೆಲಸವನ್ನ ಮಾಡಿಸುತ್ತಿದ್ದರು ಆ ಮೂಲಕ ನನ್ನನ್ನು ಹಿಂಸಿಸುತ್ತಿದ್ದರು ಎಂದು ಹೇಳಿದ್ದಾರೆ.

ಬೆಳಿಗ್ಗೆ 5 ಗಂಟೆಯೊಂದ  ರಾತ್ರಿ 12 ಗಂಟೆಯವರೆಗೆ ಕೊಂಚವೂ ಬಿಡುವಿಲ್ಲದೆ ಎಲ್ಲಾ ಕೆಲಸ ಮಾಡಬೇಕಿತ್ತು ಇಷ್ಟೇ ಅಲ್ಲದೇ, ಅವರ ತಾಯಿ ನನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳತ್ತಿದ್ದರು. ವೈಯಕ್ತಿಕವಾಗಿಯೂ ನಿಂದಿಸುತ್ತಿದ್ದರು. ಇನ್ನು ಅವರು ತಿಂಡಿ ಊಟ ಮಾಡುವವರೆಗೂ ನಾನು ಮಾಡುವ ಹಾಗಿರಲಿಲ್ಲ. ಒಂದು ಲೋಟ ಕಾಫಿಯನ್ನು ಕುಡಿಯುವ ಹಾಗಿರಲಿಲ್ಲ ಎಂದು ದೂರಿದ್ದಾರೆ.

ನಾನು 3 ತಿಂಗಳ ಹಿಂದೆ ರಜೆ ಊರಿಗೆ ಬಂದೆ ನಂತರ ಆರೋಗ್ಯ ಹದಗೆಟ್ಟ ಕಾರಣ ಮತ್ತೆ ಕೆಲಸಕ್ಕೆ ತಾರಾ ಅವರ ಮನೆಗೆ ಹೋಗಲು ಸಾಧ್ಯವಾಗ್ಲಿಲ್ಲ. ಇದರಿಂದ ಸಿಟ್ಟಾಗಿರೋ ತಾರಾ ನೀನು ವಾಪಸ್ ಬರಬೇಕು ಇಲ್ಲದಿದ್ದರೆ ಪೊಲೀಸ್ಗೆ  ದೂರು ಕೊಡಬೇಕಾಗುತ್ತದೆ ಎಂದು ಧಮಕಿ ಹಾಕುತ್ತಿದ್ದಾರೆ. ಅಲ್ಲದೇ, ತಮ್ಮ ಪ್ರಭಾವ ಬಳಸಿ ತನ್ನ ಅಣ್ಣನ ಕೆಲಸ ಕೂಡ ತೆಗೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸದಾ ನೊಂದ ಹೆಣ್ಣುಮಕ್ಕಳ ಪರ ದನಿ ಎತ್ತುತ್ತಿದ್ದ ತಾರಾ ಈ ರೀತಿ ಮಾಡುತ್ತಿರೋದು ಎಷ್ಟರ ಮಟ್ಟಿಗೆ ಸರಿ. ಅಥವಾ ತಾರಾ ವಿರುದ್ದ ವೃಥಾ ಆರೋಪ ಮಾಡಲಾಗ್ತಿದ್ಯಾ ಅನ್ನೋದು ಪ್ರಶ್ನೆಯಾಗೇ ಉಳಿದಿದೆ.

  • ಶ್ರೀ

POPULAR  STORIES :

ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie

ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ

ಐಪಿಎಲ್ ಮ್ಯಾಚ್ನಿಂದ ಕೊಹ್ಲಿ ಸಸ್ಪೆಂಡ್..!!? ಕೊಹ್ಲಿ ನಸೀಬು ಹೀಗ್ಯಾಕೆ ಆಯ್ತು..!!?

`ಕಾಡಿಗೆ ಬೆಂಕಿ’ 50000 ಜನರು ಸುಟ್ಟು ಕರಕಲಾದರು..!?

ಪ್ರಿಯಾಂಕ ಲಡ್ಡು, ರಾಹುಲ್ ಫುಡ್ಡು, ಶೀಲಾ ಉಪ್ಪಿನಕಾಯಿ..! ಉತ್ತರ ಪ್ರದೇಶದಲ್ಲಿ ಪ್ರಶಾಂತ್ `ಕೈ’ ಚಳಕ..!?

ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?

ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!

 

- Advertisement -spot_img

More articles

- Advertisement -spot_img

Latest article