ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಜನ್ಮದಿನವನ್ನು ಪತ್ನಿ ಅನುಷ್ಕಾ ಶರ್ಮಾ ಜೊತೆ ಉತ್ತರಾಖಂಡದ ಹರಿದ್ವಾರದ ಆಶ್ರಮದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಕೊಹ್ಲಿ ಹಾಗೂ ಅನುಷ್ಕಾ ಇಂದು ಅನಂತ್ ಧಾಮ್ ಆತ್ಮಭೋದ್ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮಹರಾಜ್ ಅನಂತ್ ಬಾಬ ಆಶ್ರಮದ ಮುಖ್ಯಸ್ಥರಾಗಿದ್ದು, ಅನುಷ್ಕಾ ಅವರ ಕುಟುಂಬದ ಆಧ್ಯಾತ್ಮಿಕ ಗುರು ಎನ್ನಲಾಗಿದೆ.