No menu items!
12.4 C
Munich
Wednesday, April 29, 2026

ಮದುವೆಗೆ ಜಾಸ್ತಿ ಜನಕ್ಕೆ ಕರೆದರೆ ದಂಡ..! ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.

Must read

ಇನ್ಮುಂದೆ ಮದುವೆಗೆ ಹೆಚ್ಚು ಜನರನ್ನ ಕರೆಯೋಕೆ ಹೋಗ್ಬೇಡಿ..! ಒಂದು ವೇಳೆ ಸಿಕ್ಕಾಪಟ್ಟೆ ಜನ ಮದುವೆಗೆ ಬಂದ್ರೆ ನೀವು ದಂಡವನ್ನು ಕಟ್ಟಬೇಕಾಗುತ್ತೆ..! ಮದುವೆ ಮನೆ ಅಂದ್ರೆ ತುಂಬಾ ಜನ ಸೇರ್ಬೇಕು ಅಂತ ಹೇಳ್ತಾ ಇದ್ದ ಕಾಲ ಸಧ್ಯದಲ್ಲೇ ದೂರ ಆದ್ರೂ ಆಗ್ಬಹುದು..! ಕಡಿಮೆ ಖರ್ಚು, ಸಿಂಪಲ್ ಮದುವೆ ಪಾಲಿಸಿಯನ್ನು ಅಳವಡಿಸಿಕೊಳ್ಳಿ..! ಇನ್ನು ಡಾಂ ಡೂಂ ಮದುವೆ ಮಾಡಂಗಿಲ್ಲ..!
ರೀ, ಹಿಂಗಂತ ನಾವೇನು ಕಟ್ಟಪ್ಟಣೆ ಹೊರಡಿಸ್ತಾ ಇಲ್ಲ..! ಇಂಥಹದ್ದೊಂದು ಕಾನೂನು ನಮ್ಮ ಕರ್ನಾಟಕದಲ್ಲಿ ಜಾರಿ ಆಗಬಹದು..! ಈ ಮದುವೆ ಪುರಾಣದ ಕಾನೂನಿನ ಬಗ್ಗೆ ವಿವರ ಇಲ್ಲದೆ.
ನಮ್ಮ ಮನೆಯ ಮದುವೆಗೆ ಬರೋ ಅತಿಥಿಗಳ ಸಂಖ್ಯೆ 300ಕ್ಕೆ ಸೀಮಿತ..! 300ನ್ನೂ ಮೀರಲೇ ಬಾರದು..! ಮದುವೆಯಾದ ಒಂದು ತಿಂಗಳೊಳಗೆ ವಿವಾಹ ನೋಂದಣಿಯನ್ನು ಮಾಡಿಸಲೇ ಬೇಕು..! ಹುಡುಗ-ಹುಡಗಿ (ವಧು-ವರ) ಮತ್ತು ಅವರ ಪೋಷಕರ ಬಗ್ಗೆ ಸಂಪೂರ್ಣ ವಿವರವನ್ನು ನೀಡ್ಬೇಕು..! ಇಂಥಹದ್ದೊಂದು ಖಾಸಗಿ ವಿಧೇಯಕ ನಿನ್ನೆ (ಗುರುವಾರ) ನಮ್ಮ ವಿಧಾನ ಸಭೆಯಲ್ಲಿ ಮಂಡನೆ ಆಗಿದೆ..!
ನಮ್ಮ ರಾಜ್ಯ ಸರ್ಕಾರ ಹಿಂದೆಯೇ ಜಾರಿಗೆ ತರಲು ಯೋಚಿಸಿದ್ದ ಅದ್ದೂರಿ ವಿವಾಹ ನಿಯಂತ್ರಣ ಕಾಯಿದೆ ಈಗ ಖಾಸಗಿ ರೂಪದಲ್ಲಿ ವಿಧಾನ ಸಭೆಯಲ್ಲಿ ಮಂಡನೆಯಾಗಿದೆ..! ಮಾಜಿ ಸ್ಪೀಕರ್ ಹಾಗೂ ಕಾಂಗ್ರೇಸಿನ ಹಿರಿಯ ಶಾಸಕರಾಗಿರೋ ರಮೇಶ್ ಕುಮಾರ್ ಅವರು ಈ ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.
ಈ ವಿದೇಯಕದ ನೀತಿ ನಿಯಮಗಳ ಪ್ರಕಾರ 50 ಸಾವಿರಕ್ಕೂ ಹೆಚ್ಚಿನ ಶುಲ್ಕ ವಿಧಿಸುವಂತಹ ಕಲ್ಯಾಣ ಮಂಟಪಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ..! ಮದುವೆ ಆಹ್ವಾನಿತರ ಮಾಹಿತಿಯನ್ನು 15 ದಿನಗಳ ಮೊದಲೇ ನೀಡಬೇಕು..! ಅತಿಥಿಗಳ ಸಂಖ್ಯೆ 300 ಮೀರಬಾರದು..! ಆಹಾರವನ್ನು ಹಾಳು ಮಾಡುವಂತಿಲ್ಲ..! ಕಡಿಮೆ ಅಲಂಕಾರ ಇರ್ಬೇಕು..! ಮದುವೆ ಆದ ಒಂದು ತಿಂಗಳೊಳಗೆ ವಿವಾಹ ನೋಂದಣಿ ಮಾಡಿಸಲೇಬೇಕು..! ಈ ನಿಯಮ ಪಾಲಿಸದೇ ಇದ್ದರೆ ಪೋಷಕರ ವಿರುದ್ಧ ಕ್ರಮಕೈಗೊಳ್ಳಲಾಗುತ್ತೆ..!
ಈ ಖಾಸಗಿ ವಿಧೇಯಕ ಈಗಷ್ಟೇ ಮಂಡನೆಯಾಗಿದ್ದು ಅನುಮೋದನೆಗೆ ಇನ್ನೂ ತುಂಬಾ ಟೈಮು ಹಿಡಿಯುತ್ತೆ ಬಿಡಿ, ಅನುಮೋದನೆ ಆಗದೇ ಇದ್ರೂ ಇರಬಹುದು..! ನೋಡೋಣ ಏನ್ ಏನ್ ಆಗುತ್ತೋ ಏನೋ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

ಆ ಪಟ್ಟಿಯಲ್ಲಿದ್ದಾರೆ 7 ಜನ ಭಾರತೀಯ ಮಹಿಳೆಯರು..! ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿರೋ ಆ ಏಳು ಜನ ಯಾರು ಗೊತ್ತಾ..?!

1 ರೂಪಾಯಿ ನೋಟಿನ ಬೆಲೆ 99 ರೂಪಾಯಿ..! ಆನ್ ಲೈನ್ ತಾಣದಲ್ಲಿ ಮಾರಾಟಕ್ಕಿದೆ ನೋಟು

ಬೆಂಗಳೂರಿನ ಜನ ಮಲ್ಟಿಪ್ಲೆಕ್ಸ್ ಗಳಲ್ಲಿ ಬಕ್ರಾ ಆಗ್ತಿದೀರಿ..! ಯಾಕ್ರೀ ಮಾಮೂಲಿಗಿಂತ ಜಾಸ್ತಿ ದುಡ್ಡು ಕೊಡಬೇಕು…? – ಕಿರಿಕ್ ಕೀರ್ತಿ ಪ್ರಶ್ನೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!

ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!

ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….

ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article