ಚೀನಾ-ಪಾಕ್ ಗೆ ಖಡಕ್ಕು ಸಂದೇಶ..! ನರೇಂದ್ರ ಮೋದಿ ಗೇಮ್ ಸ್ಟಾರ್ಟ್..!

Date:

`ಪಾಕ್ ಭಾರತವನ್ನು ಕಚ್ಚಿ ಗಾಯಗೊಳಿಸುತ್ತಿದ್ದರೂ ಭಾರತವೇಕೆ ಸುಮ್ಮನಿದೆ. ಯುದ್ಧ ಮಾಡಿ ಪಾಕಿಸ್ತಾನವನ್ನು ನಾಶ ಮಾಡೋದಲ್ವಾ..?’ ಅಂತ ಹಲವರು ಅಜ್ಞಾನಿಗಳಂತೆ ಮಾತನಾಡುತ್ತಾರೆ. ಆದರೆ ಯಾವುದೇ ದೇಶ ಮತ್ತೊಂದು ದೇಶದ ಮೇಲೆ ಯುದ್ಧ ಮಾಡುವುದು ಈಗ ಮೊದಲಿನಷ್ಟು ಸೋಬಿಯಲ್ಲ. ಅದರಲ್ಲೂ ಪಾಕಿಸ್ತಾನದ ಮೇಲೆ ಭಾರತ ಯುದ್ಧಕ್ಕೆ ಹೊರಡುವಂತೆಯೂ ಇಲ್ಲ. ಇತ್ತ ಭಾರತದ ಮೇಲೆ ಚೆನ್ನಾಗಿದ್ದಂತೆ ನಟಿಸಿ ಅತ್ತ ಪಾಕಿಸ್ತಾನದ ಜೊತೆ ನಂಟಿಟ್ಟುಕೊಂಡು ಆಟವಾಡುತ್ತಿರುವ ಚೀನಾವೇನು ಸಾಮಾನ್ಯ ಕುತಂತ್ರಿಯಲ್ಲ. ಇದರ ಜೊತೆಗೆ ಪಾಕಿಸ್ತಾನ ಜೊತೆ ಭಾರತಕ್ಕೆ ಕೆಲವು ಅನಿವಾರ್ಯತೆಗಳಿವೆ. ಆ ಅನಿವಾರ್ಯತೆಯ ಹೆಸರು ಗ್ವಾದಾರ್. ಭಾರತ ಮಧ್ಯಪ್ರಾಚ್ಯ ಹಾಗೂ ಅಫ್ಘಾನಿಸ್ತಾನವನ್ನು ಸಂಪಕರ್ಿಸಲು ಗ್ವಾದಾರ್ ಮಾರ್ಗವನ್ನು ಬಳಸುತ್ತಿದೆ. ಇದು ಪಾಕಿಸ್ತಾನದಲ್ಲಿದೆ. ಭಾರತವನ್ನು ಭದ್ರತಾ ಆತಂಕದ ಜೊತೆಗೆ, ಆರ್ಥಿಕವಾಗಿ ಮಟ್ಟಹಾಕಬೇಕೆಂದು ಹುನ್ನಾರದಲ್ಲಿರುವ ಪಾಕಿಸ್ತಾನ ಈಗ ಅದೇ ಮಾರ್ಗದಲ್ಲಿ ಬಂದರು ನಿರ್ಮಿಸಲು ಚೀನಾಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನರೇಂದ್ರ ಮೋದಿ ಶತ್ರುಗಳ ಅಸ್ತ್ರವನ್ನು ಎದುರಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಅದೇ ಚಾಬಹಾರ್ ಒಪ್ಪಂದ. ಇರಾನ್ ಹಾಗೂ ಅಫ್ಘಾನಿಸ್ತಾನದ ಜೊತೆಗೆ ಉಭಯ ರಾಷ್ಟ್ರಗಳ ಹಡಗುಗಳು ನೇರವಾಗಿ ಬಂದುಹೋಗುವ ಚಾಬಹಾರ್ ಒಪ್ಪಂದಕ್ಕೆ ಮರುಜೀವ ನೀಡಿದ್ದಾರೆ. ಯುಪಿಎ ಅವಧಿಯಲ್ಲೇ ಚಾಬಹಾರ್ ಒಪ್ಪಂದಕ್ಕೆ ಬರಲಾಗಿತ್ತು. ಆದರೆ ಅಮೇರಿಕಾ ಇರಾನ್ ಮೇಲೆ ದಿಗ್ಭಂದನ ಹೇರಿದ್ದರಿಂದ ಒಪ್ಪಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಅದಕ್ಕೆ ಜೀವ ಬಂದಿದ್ದು ಚೀನಾ-ಪಾಕ್ ಕುತಂತ್ರಕ್ಕೆ ಮರ್ಮಾಘಾತವಾದಂತಾಗಿದೆ.

  • ರಾ ಚಿಂತನ್

POPULAR  STORIES :

ಹುಚ್ಚ ವೆಂಕಟ್ ಗೆ ಮಡಿಕೇರಿಯಲ್ಲಿ ಸಿಕ್ಕಳು ಹುಡುಗಿ..! `ಕೋಟಿ’ ಬೇಕಾದರೂ ಖರ್ಚಾಗಲಿ ಎಂದರಂತೆ..!?

ಐಶ್ ಮೇಲೆ ಅಭಿ ಗುರ್ರ್ ಅಂದಿದ್ದು ಇದಕ್ಕಾ… ?

ಆಕ್ರಮಣಶೀಲ ಆಟಗಾರ ಕೋಹ್ಲಿ `ಪೇಂಟಿಂಗ್’ ಮೂಲಕ ಎಲ್ಲರನ್ನೂ ನಗಿಸಬಲ್ಲ!

ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?

2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!

ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!

400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...