ಭಾರತದಲ್ಲಿ ನಡೆಯಲಿರುವ ಕಬಡ್ಡಿ ವಿಶ್ವಕಪ್‍ಗೆ ಇಂದು ಅಧಿಕೃತ ಚಾಲನೆ ದೊರೆಯಲಿದ್ದು, ಮೊದಲ ದಿನದಲ್ಲೇ ಭಾರತ ಎದುರಾಳಿ ದ. ಕೊರಿಯ ವಿರುದ್ದ ಸೆಣಸಾಡಲಿದೆ. ಇನ್ನು ಸತತ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತ ಈ ಬಾರಿಯೂ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಇನ್ನು ಇಂದು ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆಯಲಿರುವ ಮೊದಲ ಪಂದ್ಯವು ಅನೂಪ್ ಕುಮಾರ್ ಸಾರಥ್ಯದ ಭಾರತ ತಂಡ ದಕ್ಷಿಣ ಕೊರಿಯಾದ ವಿರುದ್ದ ಸೆಣಸಾಡಲಿದೆ. ರೌಂಡ್ ರಾಬಿನ್ ಹಾಗೂ ನಾಕೌಟ್ ಮಾದರಿಯ ಈ ಟೂರ್ನಿಯು ಅ.22ರ ವರೆಗೆ ನಡೆಯಲಿದೆ. ಅಥಿತೇಯ ಭಾರತ, ಬಾಂಗ್ಲಾದೇಶ, ಇರಾನ್, ದ. ಕೊರಿಯಾ, ಅಮೇರಿಕಾ, ಇಂಗ್ಲೆಂಡ್, ಪೋಲೆಂಡ್, ಕೀನ್ಯಾ, ಥಾಯ್ಲೆಂಡ್, ಅರ್ಜೆಂಟೇನಾ, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಒಟ್ಟು 12 ದೇಶಗಳು ಪೈಪೋಟಿ ನಡೆಸಲಿದೆ. ಲೀಗ್‍ನಲ್ಲಿ ಪ್ರತೀ ತಂಡ ಒಟ್ಟು ಐದು ಪಂದ್ಯಗಳನ್ನು ಆಡಲಿವೆ. ತಂಡಗಳನ್ನು ‘ಎ’ ಮತ್ತು ‘ಬಿ’ ಗುಂಪುಗಳಾಗಿ ವಿಂಗಡಿಸಿದ್ದು, ಭಾರತ ‘ಎ’ ಗುಂಪಿನಲ್ಲಿ ಕಾಣಿಸಿಕೊಂಡಿದೆ.
POPULAR STORIES :
ನಾನು ನಿನ್ನ ಮದ್ವೆ ಆಗ್ತೀನಿ.. ಅಂದಿದಕ್ಕೆ ತಲೆ ತಿರುಗಿ ಬಿದ್ಲು ನಾರಿ..! ಯಾಕೆ ಗೊತ್ತಾ..
ನೀವು ಕುಡಿಯೋದು ಕೂಲ್‍ಡ್ರಿಂಕ್ಸ್ ಅಲ್ಲ ಬದಲಾಗಿ ವಿಷ..!
ಧೋನಿ ಚಿತ್ರದಲ್ಲಿ ಸ್ವಂತ ಅಣ್ಣನ ಪಾತ್ರವೇ ಇಲ್ಲ ಯಾಕೆ ಗೊತ್ತಾ..?
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!