ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

0
413

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ವಿಶ್ವ ಕ್ರಿಕೆಟ್ ನಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ತಂಡ ಭಾರತ. ಟೀಮ್ ಇಂಡಿಯಾ ಮೂಲಕ ಅನೇಕ ಆಟಗಾರರು ವಿಶ್ವಮಟ್ಟದಲ್ಲಿ ಮಿಂಚಿದ್ದಾರೆ. ವಿಶ್ವ ಕ್ರಿಕೆಟ್ ಗೆ ಭಾರತದ ಕೊಡುಗೆ ಕೂಡ ಅಪಾರ. ವಿಶ್ವಶ್ರೇಷ್ಠ ಭಾರತೀಯ ಕ್ರಿಕೆಟ್ ಆಟಗಾರರ ಪೈಕಿ ಕನ್ನಡಿಗ ರಾಹುಲ್ ದ್ರಾವಿಡ್ ಕೂಡ ಪ್ರಮುಖರು . ಭಾರತೀಯ ಕ್ರಿಕೆಟ್ ಮತ್ತು ವಿಶ್ವ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ನೀಡಿದ ಕೊಡುಗೆಯನ್ನು ಪದಗಳಲ್ಲಿ ಬಣ್ಣಿಸುವುದು ಕಷ್ಟ ಸಾಧ್ಯ. ಟೀಮ್ ಇಂಡಿಯಾ ಬಯಸಿದ್ದೆಲ್ಲವನ್ನೂ ನೀಡಿದ ಆಪತ್ಭಾಂದವ ರಾಹುಲ್ ದ್ರಾವಿಡ್ .

ರಾಹುಲ್ ದ್ರಾವಿಡ್ ಒಬ್ಬ ಕ್ರಿಕೆಟರ್ ಆಗಿ ಮಾತ್ರವಲ್ಲ, ಒಬ್ಬ ನಾಯಕನಾಗಿಯೂ ಯಶಸ್ಸು ಕಂಡವರು. 2007ರ ವಿಶ್ವಕಪ್ ನಲ್ಲಿ ತಂಡ ಹೀನಾಯ ಸೋಲುಂಡಿದ್ದು ನಿಜವಾದರೂ ಆ ಒಂದು .. ಆ ಒಂದೇ ಒಂದು ಕೆಟ್ಟ ಸರಣಿಯಿಂದ ರಾಹುಲ್ ಅವರ ನಾಯಕತ್ವವನ್ನು ಟೀಕಿಸುವಂತಿಲ್ಲ. ವಿಶ್ವಕಪ್ ಹೊರತುಪಡಿಸಿ ದ್ರಾವಿಡ್ ನಾಯಕತ್ವದಲ್ಲಿ ತಂಡದ ಪರ್ಫಾರ್ಮೆನ್ಸ್ ನಿಜಕ್ಕೂ ಚೆನ್ನಾಗಿಯೇ ಇತ್ತು. ಆದರೆ, ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕರು ಯಾರು ಎಂಬ ಪ್ರಶ್ನೆ ಎದುರಾದಗಲೆಲ್ಲಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಹೆಸರು ಕೇಳಿ ಬರುತ್ತದೆ. ಆದರೆ ದ್ರಾವಿಡ್ ಹೆಸರು ಯಶಸ್ವಿ ನಾಯಕರ ಪಟ್ಟಿಯಲ್ಲಿ ಕೇಳಿಬರಲ್ಲ! ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ಓಪನರ್, 2011ರ ವಿಶ್ವಕಪ್ ಫೈನಲ್ ಮ್ಯಾಚ್  ಹೀರೋ, ಹಾಲಿ ಸಂಸದ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

‘’ ಟೀಮ್ ಇಂಡಿಯಾ ಅನೇಕ ದಿಗ್ಗಜ ನಾಯಕರನ್ನು ಕಂಡಿದೆ. ಶ್ರೇಷ್ಠ ನಾಯಕರ ಪೈಕಿ ರಾಹುಲ್ ದ್ರಾವಿಡ್ ಸಹ ಮುಂಚೂಣಿಯಲ್ಲಿದ್ದಾರೆ. ಆದರೆ ನಾಯಕತ್ವದ ವಿಚಾರದಲ್ಲಿ ದ್ರಾವಿಡ್ ಅವರ ಹೆಸರು ಪ್ರಸ್ತಾಪವಾಗುವುದೇ ಇಲ್ಲ. ಒಡಿಐನಲ್ಲಿ ಶೇ 56, ಟೆಸ್ಟ್ ನಲ್ಲಿ ಶೇ 33ರಷ್ಟು ಗೆಲುವಿನ ಸರಾಸರಿ ಹೊಂದಿರುವ ರಾಹುಲ್ ದ್ರಾವಿಡ್ ಅವರಿಗೆ ಸಿಗಬೇಕಾದ ಪ್ರಶಂಸೆ ಸಿಗುತ್ತಿಲ್ಲ’’ ಎಂದು ಗಂಭೀರ್ ಮನದಾಳದ ನುಡಿಗಳನ್ನಾಡಿದ್ದಾರೆ.

ತಂಡ ಹೇಳಿದ ಎಲ್ಲಾ ಜವಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಏಕೈಕ ಕ್ರಿಕೆಟಿಗ ರಾಹುಲ್ ದ್ರಾವಿಡ್. 2003ರ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್, ಆರಂಭಿಕ, ಮಧ್ಯಮ ಕ್ರಮಾಂಕ, ಕೆಳಕ್ರಮಾಂಕ ಸೇರಿದಂತೆ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್, ಸ್ಲಿಪ್ ಫೀಲ್ಡರ್, ಸ್ಪಿನ್ನರ್ ಹೀಗೆ ಎಲ್ಲಾ ಜವಬ್ದಾರಿಯನ್ನು ಅತ್ಯುತ್ತಮವಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದ್ರೆ ಅವರಿಗೆ ತಕ್ಕ ಗೌರವ ಸಿಗ್ಲಿಲ್ಲ.

ದ್ರಾವಿಡ್ ನಾಯಕನಾಗಿ 79 ಏಕದಿನದಿಂದ 42ರಲ್ಲಿ ಗೆಲುವು ಸಾಧಿಸಿದ್ದರೆ, 33 ಪಂದ್ಯ ಸೋತಿದ್ದಾರೆ. ಏಕದಿನದಲ್ಲಿ ಗೆಲವಿನ ಸರಾಸರಿ 56%. ಇನ್ನು 25 ಟೆಸ್ಟ್ ಪಂದ್ಯಗಳಿಂದ 8 ಗೆಲುವು 6 ಸೋಲು ಕಂಡಿದ್ದಾರೆ. ಗೆಲುವಿನ ಸರಾಸರಿ 56%. ಇನ್ನು 25 ಟೆಸ್ಟ್ ಪಂದ್ಯಗಳಿಂದ 8 ಗೆಲುವು 6 ಸೋಲು ಕಂಡಿದ್ದಾರೆ. ಗೆಲುವಿನ ಸರಾಸರಿ 32 ಶೇಕಡವಿದೆ ಎಂದು ಸ್ಮರಿಸಿದ್ದಾರೆ.

ಹೌದು , ಗಂಭೀರ್ ಹೇಳಿರುವಂತೆ ದ್ರಾವಿಡ್ ನಾಯಕತ್ವದ ವಿಚಾರದಲ್ಲೂ ಯಶಕಂಡವರು. ಅವರಿಗೆ ಸಿಗಬೇಕಾದ ಮೆಚ್ಚುಗೆ ಸಿಗಲೇಬೇಕು.

LEAVE A REPLY

Please enter your comment!
Please enter your name here