ನಾವು ಆಧುನಿಕ ಪ್ರಪಂಚದಲ್ಲಿ ವಾಸಿಸೋ ಆಧುನಿಕ ಮಂದಿ.ಹಾಗೂ ಈ ಆಧುನಿಕ ಜನಗಳು ಯಾವುದೇ ಕಾರಣವನ್ನು ನೀಡದ ವಿನಾಃ, ಏನನ್ನೂ ಸುಲಭವಾಗಿ ನಂಬಲಾರರು.ಹೌದು..ನೀವು ನಂಬ್ತೀರೋ ಬಿಡ್ತೀರೋ ಇದು ಅಕ್ಷರಶಃ ನಿಜವಾದ ಮಾತು.ಸೋ ಕಾಲ್ಡ್, ಪ್ರೆಸೆಂಟ್ ಜನರೇಷನ್ ಬ್ಲೈಂಡ್ ಆಗಿ ಯಾವುದನ್ನೂ ಪಾಲಿಸಲಾರರು ಹಾಗೂ ಯಾವುದೇ ಆಚಾರ ವಿಚಾರಕ್ಕೆ ಸಂಬಂಧಿಸಿದಲ್ಲಿ ಅದರ ಬಗೆಗೆ ನೂರು ಪ್ರಶ್ನೆಗಳನ್ನು ಕೇಳಿ ಪರಿಪೂರ್ಣ ಮಾಹಿತಿ ದೊರಕಿದ ಮೇಲೇನೇ ಆ ವಿಚಾರಗಳಲ್ಲಿ ತೊಡಗುತ್ತಾರೆ.
ಇಂತಹುದೇ ವಿಚಾರಗಳಿಗೆ ಸಂಬಂಧಿಸಿದಂತೆ ದೇವಸ್ಥಾನಗಳಲ್ಲಿ ಘಂಟಾನಾದವೂ ಒಂದು.ನೀವು ಯಾವುದೇ ಪ್ರಾರ್ಥನೆಗೆ ಮುನ್ನ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಘಂಟೆ ಬಾರಿಸುತ್ತೀರಲ್ಲವೇ???ಅದ್ರೆ ಯಾಕೆ ಆ ಥರ ಮಾಡ್ತೀವಿ ಅಂತ ಯಾವತ್ತಾದ್ರೂ ಯೋಚಿಸಿದ್ದೀರಾ?
ಇದರ ಹಿಂದೆ ಕೆಲವೊಂದು ವೈಜ್ಝ್ನಾನಿಕ ಕಾರಣಗಳಿವೆ.ಬನ್ನಿ ನೋಡೋಣ.
1.ದೇವಸ್ಥಾನದ ಘಂಟೆಯನ್ನು ಏಳು ಲೋಹಗಳಿಂದ ತಯಾರಿಸಲಾಗುತ್ತದೆ,ಇದರ ಶಬ್ದವು ವಾಯುವಿನಲ್ಲಿ ಏಳು ಸೆಕೆಂಡುಗಳ ತನಕ ಸಂಚರಿಸಿ,ನಮ್ಮ ಶರೀರವನ್ನು ಸ್ಪರ್ಶಿಸುತ್ತದೆ ಹಾಗೂ ನಮ್ಮ ಶರೀರದಲ್ಲಿರೋ ಏಳು ಚಕ್ರಗಳಿಗೆ ಈ ಶಬ್ದ ತಲುಪುತ್ತದೆ.ಇದಲ್ಲದೆ,ನಮ್ಮ ಎಡ ಬದಿಯ ಹಾಗೂ ಬಲಬದಿಯ ನರಕೋಶಗಳನ್ನು ಪ್ರಚೋದಿಸಿ,ಧ್ಯಾನವಸ್ಥೆಯತ್ತ ನಮ್ಮನ್ನು ತಳ್ಳುತ್ತದಲ್ಲದೆ,ನಮ್ಮನ್ನು ಧ್ಯಾನದಲ್ಲಿ ಸಂಪೂರ್ಣವಾಗಿ ತೊಡಗುವಂತೆ ಮಾಡುತ್ತದೆ.
2.ನೆಗೆಟಿವ್ ಶಕ್ತಿಯನ್ನು ಇದು ಹೊರಹಾಕುವಲ್ಲಿ ಸಹಕಾರಿ ಹಾಗೂ ಧ್ಯಾನಕ್ಕೆ ಸಂಬಂಧಿಸಿದಂತೆ ಅಡ್ಡಿಯಾಗುವ ಕೆಟ್ಟ ಅಂಶಗಳನ್ನು ಇದು ನಿವಾರಿಸುತ್ತದೆ.
3.ಹಿಂದಿನಿಂದಲೂ ಬಂದ ನಂಬಿಕೆಯಂತೆ ,ಭಕ್ತಾದಿಗಳು ನೀಡೋ ಪ್ರಸಾದವನ್ನು ಸ್ವೀಕರಿಸಲು ಭಗವಂತನಲ್ಲಿ ಕೇಳಿಕೊಳ್ಳುವ ಒಂದು ಪರಿ.
4.ಘಂಟಾನಾದದೊಂದಿಗೆ ಓಂ ಶಬ್ದವು ಹೊರಹೊಮ್ಮುತ್ತಿದ್ದು,ಇದೊಂದು ಪ್ರಾಕೃತಿಕ ಶಬ್ದೋಚ್ಛಾರವಾಗಿದ್ದು,ಪ್ರಪಂಚದ ಪ್ರತೀ ಜೀವಿಗಳ ನರ ನಾಡಿಗಳಲ್ಲಿ ಉಲ್ಲಾಸದ ಚೈತನ್ಯವನ್ನೀಯುತ್ತದೆ.
5.ಘಂಟೆಯ ಶಬ್ದವು ಒಂದು ಧಾರ್ಮಿಕ ಗಡಿಯಾರದ ಅಲರಾಂ ನಂತೆ ಇದನ್ನು ಬಾರಿಸಿದಾಗ ಉಂಟಾಗುವ ಶಬ್ದವು,ಧಾರ್ಮಿಕ ಭಾವನೆಗಳತ್ತ ನಮ್ಮನ್ನು ಸ್ಥಿತ ಪ್ರಜ್ನರಾಗುವಂತೆ ನೋಡುತ್ತದೆ.
- ಸ್ವರ್ಣಲತ ಭಟ್
POPULAR STORIES :
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!
ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!
ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?
ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!
ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ
ನಿಜವಾದ ಪ್ರೀತಿಗೆ ಸಾವಿಲ್ಲವಂತೆ.. ಇದೊಂದು ಇಂಟ್ರೆಸ್ಟಿಂಗ್ ಪ್ರೇಮ್ ಕಹಾನಿ..!
ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಫೇಸ್‍ಬುಕ್‍ನಲ್ಲಿ ಮುಖ್ಯಮಂತ್ರಿಗಳ ರಾಜೀನಾಮೆ..!!