ಸುಮಾರು 400ವರ್ಷಗಳ ಹಿಂದೆ ಮುಳುಗಿದ್ದ ಹಡಗೊಂದು ಪೋರ್ಚುಗಲ್ ನ ಸಾಗರದಾಳದಲ್ಲಿ ಪತ್ತೆಯಾಗಿದೆ.
ಲಿಸ್ಬಾನ್ ಬಳಿಯ ಸಾಗರದಾಳದಲ್ಲಿ ಈ ಹಡಗು ಪತ್ತೆಯಾಗಿದ್ದು, ಭಾರತದಿಂದ ಮಸಾಲೆ ಪದಾರ್ಥಗಳನ್ನು ಹೊತ್ತು ಸಾಗಿಸುತ್ತಿರುವಾಗ ಇದು ಮುಳುಗಿತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ. ಈ ಹಡಗು ಸಂಪೂರ್ಣ ಒಡೆದಿದ್ದು ಅದರ ಒಂದು ಭಾಗ ಮಾತ್ರ ಸಿಕ್ಕಿದೆ.