ಚುನಾವಣಾ ಪ್ರಚಾರದ ವೇಳೆ ನಡೆಯುತ್ತಿದ್ದ ಅಪಾಯದಿಂದ ರಾಕಿಂಗ್ ಸ್ಟಾರ್ ಯಶ್ ಅದೃಷ್ಟವಶಾತ್ ಪಾರಾಗಿದ್ದಾರೆ.
ರಾಜ್ಯಾದ್ಯಂತ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಯಶ್ ಪ್ರಚಾರ ಮಾಡ್ತಿದ್ದಾರೆ. ಹೀಗೆ ರಾಯಚೂರಿನ ಲಿಂಗಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಾದಪ್ಪ ವಜ್ವಲ್ ಅವರ ಪರ ಪ್ರಚಾರ ಮಾಡುತ್ತಿರುವಾಗ ಅಪಾಯದಿಂದ ಸ್ವಲ್ಪದರಲ್ಲೇ ಬಚಾವಾಗಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಕಿಡಿಗೇಡಿಯೊಬ್ಬ ಯಶ್ ನಿಂತಿದ್ದ ಕ್ಯಾಂಟರ್ ಗೆ ಮಾದಪ್ಪ ವಜ್ವಲ್ ಮೇಲೆ ಕಲ್ಲೆಸಿದಿದ್ದಾನೆ. ಹೆಚ್ಚು ಕಡಿಮೆ ಆಗಿದ್ರೆ ಆ ಕಲ್ಲು ಯಶ್ ಗೆ ಬೀಳುತ್ತಿತ್ತು. ಅದೃಷ್ಟವಶಾತ್ ಯಶ್ ಪಾರಾಗಿದ್ದಾರೆ.

ಗೋಕಾಕ್ ಚಳುವಳಿ ವೇಳೆ ಟ್ರಾನ್ಸ್ ಮಿಷನ್ ಲೈನ್ ರಾಜ್ ಕುಮಾರ್ ಅವರಿಗೆ ತಗಲುವ ಸಂದರ್ಭವಿತ್ತು. ಅಭಿಮಾನಿಯೋರ್ವರ ಸಮಯ ಪ್ರಜ್ಞೆಯಿಂದ ರಾಜ್ ಕುಮಾರ್ ಅವರು ಪಾರಾಗಿದ್ದನ್ನು ಈ ವೇಳೆ ಸ್ಮರಿಸಬಹುದು.






