ಇವರು ಕನ್ನಡದ ಸ್ಟಾರ್ ನಟ..! ಇವರ ಬಗ್ಗೆ ಗೊತ್ತಿಲ್ದೇ ಇರೋರೇ ಇಲ್ಲ ಅಂತ ಹೇಳ್ಬಹುದು..! ಅಪಾರ ಅಭಿಮಾನಿ ಬಳಗವನ್ನು ಹೊಂದಿರೋ ‘ರಾಜಹುಲಿ’..! ಆದರೆ, ಇವರ ಪರಿಚಯವೇ ಇಲ್ಲದ ಹುಡ್ಗೀರು ಇವರತ್ರ ಫೋಟೋ ತೆಗೆಯೋಕೆ ಅಂತ ಮೊಬೈಲ್ ಕೊಟ್ಟು ಫೋಸ್ ಕೊಟ್ಟಿದ್ದಾರೆ..! ನಾನೊಬ್ಬ ಸ್ಟಾರ್‍ನಟ ಎಂಬ ಅಹಂ ಇಲ್ಲದ ‘ರಾಮಾಚಾರಿ’ ಫೋಟೋ ತೆಗೆದಿದ್ದಾರೆ..! ಇದನ್ನು ಮಿಸಸ್ ರಾಮಾಚಾರಿ ಸೆರೆಹಿಡಿದು ಫೇಸ್‍ಬುಕ್‍ನಲ್ಲಿ ಹಾಕಿದ್ದಾರೆ..!
ಹೌದು, ನಟ ಯಶ್ ಅವರು ಹೊರಗಡೆ ಹೋಗಿದ್ದಾಗ ಅವರ ಪರಿಚಯವಿಲ್ಲದ ಹೊರ ರಾಜ್ಯದ ಹುಡ್ಗೀರು ಮೊಬೈಲ್ ನೀಡಿ.. ಒಂದು ಫೋಟೋ ತೆಗೆಯುವಂತೆ ಕೇಳಿಕೊಂಡಿದ್ದಾರೆ..! ಆಗ ಯಶ್ ಆ ಹುಡ್ಗೀರ ಫೋಟೋ ತೆಗೆದುಕೊಟ್ಟಿದ್ದಾರೆ..! ಯಶ್ ಹುಡ್ಗೀರ ಫೋಟೋ ತೆಗೆಯೋದನ್ನು ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ಸೆರೆಹಿಡಿದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ..
ಇವರು ಸ್ಟಾರ್‍ನಟ ಅಂತ ಗೊತ್ತಿಲ್ದೆ ಫೋಟೋ ತೆಗೆಯೋಕೆ ಹೇಳಿದ್ರು ಹುಡ್ಗೀರು..!
Date: