ಬಿಗ್ ಬಾಸ್ ನ ಬಾರ್ಬಿ ಡಾಲ್ ನಿವೇದಿತಾ ಗೌಡಗೆ ರಾಕಿಂಗ್ ಸ್ಟಾರ್ ಯಶ್ ಪ್ರಪೋಸ್ ಮಾಡಿದ್ದಾರೆ…! ಅದೂ ಸಹ ಪತ್ನಿ ರಾಧಿಕಾ ಪಂಡಿತ್ ಎದುರೇ…!
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡೋ ತನಕ ನಿವೇದಿತಾ ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಬಿಗ್ ಬಾಸ್ ಮನೆ ಪ್ರವೇಶಿಸುವುದರ ಮೂಲಕ ಕನ್ನಡಿಗರ ಮನವನ್ನೂ ಪ್ರವೇಶಿಸಿದರು ನಿವೇದಿತಾ.
ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಿವೀಯನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟ, ನಟಿಯರೂ ಸಹ ತುಂಬಾನೇ ಪ್ರೀತಿಸ್ತಾರೆ.
ಕಲರ್ಸ್ ಕನ್ನಡದ ಸಮಾರಂಭವೊಂದರಲ್ಲಿ ಸ್ಯಾಂಡಲ್ ವುಡ್ ನ ದಿಗ್ಗಜರು ಸೇರಿದ್ರು. ಶಿವಣ್ಣ ,ಅನಂತ್ ನಾಗ್ , ಅಂಬರೀಶ್ ಸೇರಿದಂತೆ ಅನೇಕರು ನೆರೆದಿದ್ದರು. ಇದೇ ಸಮಾರಂಭದಲ್ಲಿ ಯಶ್ ರಾಧಿಕಾ ಪಂಡಿತ್ ಅವರ ಎದುರೇ ನಿವೇದಿತಾ ಗೌಡಳನ್ನು ಪ್ರಪೋಸ್ ಮಾಡಿದ್ರು.
ಕಾರ್ಯಕ್ರಮದ ನಿರೂಪಕ ಅಕುಲ್, ಯಶ್ ಲವ್ ಸ್ಟೋರಿ ಬಗ್ಗೆ ಕೇಳಿದ್ರು. ರಾಧಿಕರನ್ನು ಹೇಗೆ ಪ್ರಪೋಸ್ ಮಾಡಿದ್ರಿ ಎಂಬ ಪ್ರಶ್ನೆಯನ್ನು ಅಕುಲ್ ಕೇಳಿದಾಗ ಯಶ್ ನಿವೇದಿತಾಗೆ ಪ್ರಪೋಸ್ ಮಾಡಿ ತೋರಿಸಿದ್ರು….!