ನಿನ್ನೆ ಪ್ರೇಮಿಗಳ ದಿನ..! ಇವತ್ತು ಸಹ ಎಷ್ಟೋ ಮಂದಿ ಅದೇ ಗುಂಗಿನಲ್ಲಿದ್ದಾರೆ. ನಿನ್ನೆಯಷ್ಟೇ ಪ್ರೀತಿ ನಿವೇದಿಸಿಕೊಂಡು ಗೆದ್ದವರ ಖುಷಿಗಂತೂ ಪಾರವೇ ಇಲ್ಲ…! ಅವರು , ಆಕಾಶದಲ್ಲಿ ತೇಲುತ್ತಿದ್ದಾರೆ…!
ಸ್ಯಾಂಡಲ್ ವುಡ್ ನ ಸೂಪರ್ ಜೋಡಿ ಯಶ್-ರಾಧಿಕಾ ಪಂಡಿತ್ ಪ್ರೇಮಿಗಳ ದಿನವನ್ನು ಹೇಗೆ ಆಚರಿಸಿಕೊಂಡ್ರು ಗೊತ್ತಾ….?
ರಾಧಿಕಾ ಅವರ ಅತ್ತಿಗೆ (ಅಣ್ಣನ ಹೆಂಡ್ತಿ) ಗಂಡು ಮಗುವಿಗೆ ಜನನ ನೀಡಿದ್ದಾರೆ. ಅದಕ್ಕಾಗಿ ರಾಧಿಕಾ ಅಮೆರಿಕಾದ ಚಿಕಾಗೋಕ್ಕೆ ತೆರಳಿದ್ದರು.
ಅಣ್ಣ, ಅತ್ತಿಗೆ, ಪಾಪು ಜೊತೆ ಒಂದು ನಾಲ್ಕು ದಿನ ಇರ ಬಯಸಿದ್ದಾರೆ ರಾಧಿಕಾ. ಈ ನಡುವೆ ನಿನ್ನೆ ಪ್ರೇಮಿಗಳ ದಿನ…ಈ ದಿನದಂದು ತಾನು ಪ್ರೀತಿಸಿ ಮದುವೆಯಾದವಳ ಜೊತೆಯೇ ಇರಬೇಕು ಎಂದು ಯಶ್ ಅಮೆರಿಕಾ ಕ್ಕೆ ಹೋಗಿದ್ದಾರೆ.
ರಾಧಿಕಾ ಪಂಡಿತ್ ಪ್ರೇಮಿಗಳ ದಿನದ ಪ್ರಯುಕ್ತ ದಶಕದ ಹಿಂದಿನ ಫೋಟೋವನ್ನು ಅಂದರೆ 2006ರಲ್ಲಿ ತೆಗೆಸಿಕೊಂಡ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದಾರೆ.
ಈ ಫೋಟೋ ತೆಗೆಯುವಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿತರಾಗಿದ್ವಿ…! ಆದರೆ, ಈಗ ಈ ಫೋಟೋ ನೋಡಿದಾಗ ಆಗಲೇ ನಮ್ಮ ಹೃದಯಾಳದಲ್ಲಿ ಪ್ರೀತಿ ಅಡಗಿತ್ತು…! ಅದು ನಮ್ಮ ಅರಿವಿಗೆ ಬಂದಿರಲಿಲ್ಲವೇನೋ ಎಂಬ ಭಾವನೆ ಮೂಡುತ್ತೆ ಎಂದು ರಾಧಿಕಾ ಬರೆದುಕೊಂಡಿದ್ದಾರೆ.