ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಯಾವ ಮಗು ಜನಸಿತ್ತದೆ ಎಂದು ಅಭಿಮಾನಿಗಳು ಚರ್ಚೆ ಶುರುಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೀಗ ಈ ಬಗ್ಗೆ ಚರ್ಚೆ ಆಗ್ತಿದೆ. ಯಶ್ ಅಭಿಮಾನಿಗಳು ಈಗಾಗಲೇ ‘ಮರಿ ಬಾಸ್’ ಎಂದು ತನ್ನ ನೆಚ್ಚಿನ ನಟನ ಮಗುವಿಗೆ ನಾಮಕರಣ ಮಾಡಿದ್ದಾರೆ…! ಆದರೆ, ಯಶ್ ತಮಗೆ ಹೆಣ್ಣುಮಗು ಬೇಕು ಎಂಬ ಆಸೆಯನ್ನು ಮನಬಿಚ್ಚಿ ಹೇಳಿದ್ದಾರೆ.
ತಮ್ಮ ಮನೆಯಲ್ಲಿ ಎಲ್ಲಾ ಗಂಡು ಮಕ್ಕಳೇ ಇರೋದು. ತಂಗಿಗೂ ಗಂಡು ಮಗುವಿದೆ.ಆದ್ದರಿಂದ ನಮಗೆ ಹೆಣ್ಣು ಮಗು ಬೇಕು ಎಂದು ಯಶ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಪತ್ನಿ ರಾಧಿಕಾ ಅವರ ಬಗ್ಗೆ ಸಹ ಪ್ರೀತಿಯಿಂದ ಮಾತಾಡಿರುವ ಯಶ್, ಈ ಸಮಯದಲ್ಲಿ ಎಲ್ಲರೂ ಸಾಮಾನ್ಯವಾಗಿ ಜಾಗರೂಕತೆಯಿಂದ ಇರುತ್ತಾರೆ. ಸಾಮಾನ್ಯವಾಗಿ ಹೆಣ್ಣು ಗರ್ಭಿಣಿಯಾಗಿರುವಾಗ ನೂರಾರು ಕನಸುಗಳನ್ನ ಕಾಣುತ್ತಾರೆ. ಆ ಎಲ್ಲಾ ಬಯಕೆಗಳನ್ನ ಈಡೇರಿಸುವುದು ಗಂಡನ ಕರ್ತವ್ಯವಾಗಿತ್ತದೆ. ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಕಾಲು ನೋವು, ಬೆನ್ನು ನೋವು ಬರುತ್ತವೆ. ಅವರಿಗೆ ನೋವು ಬಂದಾಗ ಕಾಲು ಒತ್ತಬೇಕು, ಇವೆಲ್ಲವನ್ನು ಗಂಡನಾಗಿ ಮಾಡಬೇಕು ಅದು ಅವನ ಜವಾಬ್ದಾರಿ ಜೊತೆಗೆ ಖುಷಿಯಾಗಿ ಮಾಡಬೇಕು ಎಂದಿದ್ದಾರೆ.