ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ..!

Date:

ಯಾರೊಬ್ಬರಲ್ಲೂ ಯಡಿಯೂರಪ್ಪಗಿರುವ ಛಾತಿಯಿಲ್ಲ. ಬಿಬಿಎಂಪಿ ಚುಣಾವಣೆಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಯಾವತ್ತು ಬರಲಿಲ್ಲವೋ ಅವತ್ತಿನಿಂದ ಆರ್ ಅಶೋಕ್ ಕಾಣಿಸುತ್ತಿಲ್ಲ. ಈಶ್ವರಪ್ಪನವರಿಗೆ ಎರಡ್ಮೂರು ದಶಕದ ರಾಜಕೀಯ ಅನುಭವವಿದ್ದರೂ ಅವರ ನಾಲಿಗೆಯೇ ಅವರ ಏಳಿಗೆಯನ್ನು ತಡೆಯುತ್ತಿದೆ. ಪ್ರಹ್ಲಾದ್ ಜೋಷಿ ಇದ್ದಿದ್ದರಲ್ಲೇ ಪರ್ವಾಗಿಲ್ಲ ಎನಿಸಿದರೂ, ಅಷ್ಟು ಶಾರ್ಪ್ ಎನಿಸುವುದಿಲ್ಲ. ಹೀಗಿರುವಾಗ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಗದ್ದುಗೆ ತರಲು ಶಕ್ತಿಯಿರುವ ನಾಯಕರೆಂದರೇ ಅದು ಯಡಿಯೂರಪ್ಪ ಮಾತ್ರ.

ಯಡಿಯೂರಪ್ಪ ಮುಂಗೋಪಿ. ಅವರ ಕೋಪಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಲಿಯಾಗಿತ್ತು. ಆನಂತರ ಮತ್ತೆ ಬಿಜೆಪಿಗೆ ಬಂದರಾದರೂ ಮೊದಲಿದ್ದ ಸ್ವತಂತ್ರ, ಶಕ್ತಿ ಎಲ್ಲವನ್ನೂ ಕಳೆದುಕೊಂಡಿದ್ದರು. ಎಲ್ಲೋ ಒಂದು ಕಡೆ ಅವರು ಬಿಜೆಪಿಗೆ ಅಪರಿಪೂರ್ಣರಾಗುತ್ತಿದ್ದಾರೆ ಎಂದನಿಸುತ್ತಿರೋದು ನಿಜ. ಹೀಗಾಗಿಯೇ ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಮತ್ತೆ ಫ್ರಂಟ್ಲೈನ್ಗೆ ತಂದಿದೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಚುಕ್ಕಾಣಿ ಹಿಡಿಯಲು ಯಡಿಯೂರಪ್ಪನವರಿಗಿಂತ ಸಮರ್ಥ ನಾಯಕ ಇನ್ನೊಬ್ಬ ಸಿಗುವುದಿಲ್ಲ ಎನ್ನುವುದೂ ಬಿಜೆಪಿಗೆ ಗೊತ್ತಿದೆ. ಬಹುಶಃ ಆ ಕಾರಣಕ್ಕೆ ಕೆಲ ತಿಂಗಳ ಹಿಂದೆಯೇ ಯಡಿಯೂರಪ್ಪನವರನ್ನು ಮೋದಿ ಟೀಂ ದೆಹಲಿಗೆ ಕರೆಸಿಕೊಂಡಿತ್ತು. ಮೀಟಿಂಗ್ನಲ್ಲಿ ಗುಪ್ತ ಚರ್ಚೆ ನಡೆಸಿ ಎದ್ದುಬಂದರು. ಅಲ್ಲೇನಾಯ್ತು ಎನ್ನುವುದಕ್ಕಿಂತ, ಅಲ್ಲಿಂದ ಬಂದ ನಂತರವೂ ಯಡಿಯೂರಪ್ಪ ಎಲ್ಲೂ ಕಾಣಿಸಲಿಲ್ಲ ಎಂಬುದೇ ವಾಸ್ತವವಾಗಿತ್ತು. ಅದಕ್ಕೆ ತಕ್ಕಂತೆ ಜಿಲ್ಲಾ, ತಾಲ್ಲೂಕ್ ಪಂಚಾಯತ್ ಚುನಾವಣೆಯಲ್ಲೆಲ್ಲೂ ಬಿಜೆಪಿ ಪರವಾಗಿ ಯಡಿಯೂರಪ್ಪ ಮತಯಾಚಿಸಲಿಲ್ಲ.

ಅದರಲ್ಲೂ ಕಾಂಗ್ರೆಸ್ ಮೇಲೆ ಅಸಮಾಧಾನ ಉಂಟಾಗಿರುವ ಸಮಯದಲ್ಲಿ ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳುವ ಪ್ರಯತ್ನವನ್ನು ಯಡಿಯೂರಪ್ಪ ಮಾಡಬಹುದಿತ್ತು. ಬಹುಶಃ ಹಾಗಾಗದೇ ಇದ್ದುದರಿಂದ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಪಡೆದುಕೊಳ್ಳುವುದರಲ್ಲಿ ಎಡವಿತು ಎನ್ನಬಹುದು. ಯಡಿಯೂರಪ್ಪ ಹೀಗೇಕೆ ಮಾಡಿದರು..? ಅವರನ್ನು ಅವರದ್ದೇ ಪಕ್ಷದವರು ದೂರವಿಟ್ಟರಾ..? ಸ್ವಾಭಿಮಾನಕ್ಕೆ ಧಕ್ಕೆ ಬಂದರೇ ತಮ್ಮ ನೆರಳನ್ನು ಅತ್ತ ಸೋಕಿಸದ ಅವರು ಇಂತಹ ಬೆಳವಣಿಗೆಯಿಂದ ಮುಜುಗರಕ್ಕೀಡಾಗಿ ತಾತ್ಕಾಲಿಕವಾಗಿ ದೂರ ಸರಿದರಾ..?. ಆದರೆ ಕಾಲ ಮಿಂಚಿದ ಮೇಲೆ ತಲೆ ಕೆರೆದುಕೊಳ್ಳುವ ಚಾಳಿ ಮುಂದುವರಿದಿದೆ. ಈ ಹಿಂದೇ ಇದೇ ಸಿಟ್ಟು ಬಿಜೆಪಿಯನ್ನು ಮೂಟೆ ಕಟ್ಟಿಸಿತ್ತು. ಅದೇ ಮುಂದುವರಿದು ಸಣ್ಣಪುಟ್ಟ ಚುನಾವಣೆಯಲ್ಲೂ ಹಿನ್ನಡೆಯಾಗುತ್ತಿದೆ. ಈ ಹಂತದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಇಂತಹ ಬೆಳವಣಿಗೆಗಳನ್ನು ಗ್ರಹಿಸಿರುವ ಯಡಿಯೂರಪ್ಪ, ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಹೇಗೆ ಕೇಳೋದು ಎಂಬ ಹುನ್ನಾರದಲ್ಲಿದ್ದರು.

ಕೋರ್ ಕಮಿಟಿಯ ಮುಂದೆ, `ಸಂಘಟಿತ ಶ್ರಮದಿಂದ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ, ಎಲ್ಲದಕ್ಕೂ ನಾನೊಬ್ಬನೇ ಹೊಣೆಯಲ್ಲ, ಪೂರ್ಣ ಪ್ರಮಾಣದ ಅಧಿಕಾರ ಕೊಟ್ಟು ನೋಡಿ. ಯಡಿಯೂರಪ್ಪ ಏನು ಅನ್ನೋದನ್ನ ತೋರಿಸ್ತೀನಿ’ ಎಂದು ಬೇಡಿಕೆಯಿಟ್ಟಿದ್ದರು. ಸ್ವಲ್ಪ ನಾಟಕ ಮಾಡಿದರೂ ಕಡೆಗೆ ಯಡಿಯೂರಪ್ಪನಿಗೆ ಜೈಕಾರ ಹಾಕಲು ಹೈಕಮಾಂಡ್ ಹಿಂದೆ ಮುಂದೆ ಯೋಚಿಸಲಿಲ್ಲ. ರಾಜ್ಯದ ಮಟ್ಟಿಗೆ ಯಡಿಯೂರಪ್ಪನವರ ಅವಶ್ಯಕತೆ ಎಷ್ಟಿದೆ ಎಂಬುದು ಹೈಕಮಾಂಡ್ಗೆ ಮಾತ್ರವಲ್ಲ, ಖುದ್ದು ಯಡಿಯೂರಪ್ಪನವರಿಗೆ ಗೊತ್ತಿದೆ. ಹಾಗಾಗಿಯೇ ಉಳಿದವರ ಉಪಸ್ಥಿತಿಯಲ್ಲಿ ಬಿಜೆಪಿ ಹೇಗಿದೆ ಎಂಬುದನ್ನು ತೋರಿಸಿ, ಪೂರ್ಣ ಪ್ರಮಾಣದಲ್ಲಿ ಅಖಾಢಕ್ಕಿಳಿಯಲು ಅವರು ತಯಾರಿ ನಡೆಸಿದ್ದಾರೆ. ರಾಜಕೀಯ ತಂತ್ರಗಾರಿಕೆಗಳ ಮೂಲವನ್ನು ಕೆದಕಿದಾಗ ಮಾತ್ರ ಇಂತಹ ವಾಸ್ತವಗಳು ಅರ್ಥವಾಗುತ್ತವೆ.

  •  ರಾ ಚಿಂತನ್

POPULAR  STORIES :

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...