ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

Date:

ದುಡ್ಡು ದುಡ್ಡು ದುಡ್ಡು..! ದುಡ್ಡಿಂದೇ ಜಮಾನ..! ಯಾರಿಗೆ ತಾನೆ ಬೇಡ ಹೇಳಿ ಈ ದುಡ್ಡು..! ಹುಟ್ಟುತ್ತಲೇ ಶ್ರೀಮಂತರಾಗಿದ್ರೆ ಓಕೆ, ಈ ದುಡ್ಡಿನ ಬಗ್ಗೆ ಟೆಕ್ಷನ್ನೇ ಇಲ್ಲ..! ಬಟ್, ದುಡ್ಡಿದ್ದವರಿಗೂ ಆ ದುಡ್ಡನ್ನು ದುಪ್ಪಟ್ಟು ಮಾಡೋ ಚಿಂತೆಯಿದ್ದಿದ್ದೇ..! ಲೈಫ್ನಲ್ಲಿ ಕಷ್ಟಪಟ್ಟರೆ ಏನ್ಬೇಕಾದ್ರೂ ಸಿಕ್ಕೇ ಸಿಗುತ್ತೆ..! ಇನ್ನು ದುಡ್ಡು ಸಿಗ್ದೇ ಇರುತ್ತಾ..? ಇವತ್ತು ಕಷ್ಟ ಇರಬಹುದು..! ಬಟ್, ನಮಗೂ ದುಡ್ಡು ಸಿಗುತ್ತೆ ಅಂತ ಕಾಯ್ತಾ ಕೂತ್ಕೊಂಡ್ರೇ.., ಅದೃಷ್ಟ ದೇವತೆ ಬಂದು ನಮ್ ಮನೆ ಬಾಗಿಲು ಬಡ್ದೇ ಬಡಿತಾಳೆ ಅಂತ ನೋಡ್ತಾ ಇದ್ರೆ, ದೇವ್ರಾಣೆಗೂ ದುಡ್ಡು ಬರಲ್ಲ..! ಅದಕ್ಕೊಸ್ಕರ ಫಿಪ್ಟಿ ಪರ್ಸೆಂಟ್ ಆದ್ರೂ ಎಫರ್ಟ್ ಬೇಕು..! ಬ್ಯುಸಿ ನೆಸ್ ಮಾಡ್ತೀವಿ ಅಂದ್ರೆ ಐಡಿಯಾ ಬೇಕು..! ಪಕ್ಕಾ ಪ್ಲಾನ್ ಇರ್ಬೇಕು..! ಪ್ಲಾನ್ ಪ್ಲಾಪ್ ಆದ್ರೂ ಮತ್ತೆ ಫಿನಿಕ್ಸ್ ನಂತೆ ಎದ್ದು ಬರ್ತೀವಿ ಅನ್ನೋ ನಂಬಿಕೆ ಬೇಕು..! ಮತ್ತೆ ನಮ್ಮನ್ನು ನಾವು ಬ್ಯುಸ್ನೆಸ್ ವಲ್ಡರ್್ಲಿ ಗುರುತಿಸಿಕೊಳ್ಳೋ ತಾಕತ್ತೂ ಬೇಕು..! ಗುರಿ ಇರ್ಬೇಕು, ಆ ನಿಟ್ಟಿನಲ್ಲಿ ಕೆಲಸವನ್ನೂ ಮಾಡ್ಬೇಕು..! ಆಗ ದುಡ್ಡೇ ನಮ್ಮಿಂದೆ ಬೇಡ ಬೇಡ ಅಂದ್ರೂ ಬರುತ್ತೆ..! ಅದಕ್ಕೆ ಸಾಕ್ಷಿಯೇ “ಇವಾನ್ ಸ್ಪೀಗೆಲ್”..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

“ಇವಾನ್ ಸ್ಪೀಗೆಲ್”..! “ಸ್ನ್ಯಾಪ್ ಚಾಟ್”ನ ಸಿಇಒ ಮತ್ತು ಕೋ-ಫೌಂಡರ್..! ಅವರೀಗ ಅತೀ ಕಿರಿಯ ಬಿಲೇನಿಯರ್..! ಹ್ಞಾಂ “ಫೋರ್ಬ್ಸ್” ನಿಯತಕಾಲಿಕೆ ಪ್ರಕಟಿಸಿದ ಶ್ರೀಮಂತರ ಪಟ್ಟಿಯಲ್ಲೀಗ ಇವರು ವಿಶ್ವದ ಅತ್ಯಂತ ಕಿರಿಯ ಬಿಲೇನಿಯರ್ ಆಗಿದ್ದಾರೆ..! ಈ “ಇವಾನ್ ಸ್ಪೀಗೆಲ್” ಗಿನ್ನೂ 25 ವರ್ಷ..! ಇಷ್ಟೊಂದು ಚಿಕ್ಕ ವಯಸ್ಸಲ್ಲಿಯೇ ಬಿಲೇನಿಯರ್ ಆಗೋದೆಂದ್ರೆ ಹುಡುಗಾಟಿಕೇನಾ..? ಕೇವಲ 25 ವರ್ಷದ ಇವರು 2.1 ಬಿಲಿಯನ್ $ ಆಸ್ತಿಯ ಒಡೆಯ..! ಹಂಗಂತ ಇವ್ರು ಅವರ ಪಿತ್ರಾರ್ಜಿತ ಆಸ್ತಿಯನ್ನು ನೆಚ್ಚಿಕೊಂಡು ಬಂದು ಕಿರಿಯ ಬಿಲೇನಿಯರ್ ಆಗಿದ್ದಲ್ಲ..! ಇವರ ಈ ಗಳಿಕೆಯ ಹಿಂದೆ ಕಷ್ಟದ ದಿನಗಳಲ್ಲಿ ಈಜಿದ್ದೂ ಇದೆ..! ಸೋಲಿನ ಸುಳಿಗೆ ಸಿಲುಕಿ ನರಳಿದ್ದೂ ಇದೆ..! ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿ ತನ್ನ ಐಡಿಯಾ, ಬುದ್ಧಿವಂತಿಕೆಯಿಂದಲೇ ಈ ಮಟ್ಟಕ್ಕೆ ಬೆಳೆದಿದ್ದಾರೆ..!
ಯಸ್, “ಇವಾನ್ ಸ್ಪೀಗೆಲ್” ಅಪ್ಪ ಅಮ್ಮ ಮಾಡಿಟ್ಟ ದುಡ್ಡಲ್ಲಿ ಮೇಲೆ ಬಂದವರಲ್ಲ..! ಅವರ ಸ್ಟೂಡೆಂಟ್ ಲೈಫ್ ನಲ್ಲೇ ತುಂಬಾ ಕಷ್ಟವನ್ನು ಪಟ್ಟಿರ್ತಾರೆ..! ಅವರಿಗೆ ಮನೆಯಲ್ಲಿ ಕೇಳ್ ಕೇಳಿದಾದ ಬೇಕಾದಷ್ಟು ದುಡ್ಡು ಕೊಡ್ತಾ ಇದ್ರೇನೋ.., ಗೊತ್ತಿಲ್ಲ..! ಬಟ್, ಇವ್ರು ಮನೆಯಿಂದ ದುಡ್ಡು ತೆಗೆದುಕೊಳ್ತಾ ಇರ್ಲಿಲ್ಲ..! ಅಮೇರಿಕಾದ ಬಹುತೇಕರಂತೆ ಇವ್ರೂ ಕೂಡ ವಿದ್ಯಾರ್ಥಿಯಾಗಿರುವಾಗ್ಲೇ ತನ್ನ ಖರ್ಚನ್ನು ತಾನೇ ನಿಭಾಯಿಸಿಕೊಳ್ಳಬಲ್ಲೆ ಎಂದು ಕೆಲಸಕ್ಕೆ ಹೋಗ್ತಾ ಇದ್ರು..! ಸಾರ್, ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ, ಇವ್ರು ಮುಂದೆ ಅನುಕೂಲ ಆಗ್ಬಹುದೇನೋ ಅಂತ “ರೆಡ್ ಬುಲ್” ಕಂಪನಿಯಲ್ಲಿ ನಯಾಪೈಸೆ ವೇತನ ಇಲ್ದೆ ಸೇಲ್ಸ್ ವಿಭಾಗದಲ್ಲಿ ಇಂಟರ್ನ್ ಶಿಪ್ ಮಾಡಿದ್ದರು..! ನಂತರ ಇಂಟರ್ನಿಯಾಗಿ “ಬಯೋ ಮೆಡಿಕಲ್” ಕಂಪನಿಯಲ್ಲಿ ಪಾರ್ಟ್ ಟೈಮ್ ಕೆಲಸವನ್ನೂ ಮಾಡ್ತಾರೆ…! ದಕ್ಷಿಣಾಫ್ರಿಕಾದಲ್ಲಿ ಕರೀಯರ್ಸ್ ಇನ್ಸ್-ಟ್ರಕ್ಟರ್ ಆಗಿಯೂ ದುಡಿಯುತ್ತಾರೆ..! ಇವೆಲ್ಲಾ ಆದ್ಮೇಲೆ ಅಮೇರಿಕಾದ ಪ್ರತರಿಷ್ಠಿತ ಕಂಪನಿಯಿಯೊಂದರಲ್ಲಿ ವೆಬ್ ಡೆವಲಪರ್ ಆಗಿ ಕೆಲಸವನ್ನೂ ಮಾಡ್ತಾರೆ..! ಇಷ್ಟೆಲ್ಲಾ ಕೆಲಸ ಮಾಡ್ತಾ ಮಾಡ್ತಾನೇ ಓದಿದ ಇವರು “ಸ್ಟ್ಯಾನ್ಫೋರ್ಡ್” ವಿಶ್ವವಿದ್ಯಾಲಯದಲ್ಲಿ ಪ್ರೋಡೆಕ್ಟ್ ಡಿಸೈನಿಂಗ್ ಕಲಿಯುತ್ತಾರೆ..! ಅಲ್ಲಿ ಗಣಿತವನ್ನು ಅಧ್ಯಯನ ಮಾಡ್ತಾ ಇದ್ದ, ತನಗಿಂತಲೂ ಎರಡು ವರ್ಷ ದೊಡ್ಡವನಾದ “ಬಾಬಿ ಮರ್ಫಿ”ಯ ಪರಿಚಯವಾಗುತ್ತೆ..! ನಂತರ “ಸ್ಟ್ಯಾನ್ಫೋರ್ಡ್” ವಿಶ್ವವಿದ್ಯಾಲಯ ಬಿಟ್ಟು ಮರ್ಫಿ ಜೊತೆ ಸೇರಿ ತನ್ನದೇ ಉದ್ಯಮವನ್ನು ಹುಟ್ಟು ಹಾಕೋ ಆಲೋಚನೆಯನ್ನು ಮಾಡ್ತಾರೆ..! ಅವರಿಬ್ಬರೂ ಒಟ್ಟಾಗಿ “ಪಿಕಾಬೂ” ಎಂಬ ಮೊಬೈಲ್ ಆ್ಯಪ್ ಅನ್ನು ಡೆವಲಪ್ ಮಾಡಿದ್ರು..! ಅದೊಂದು “ಫೋಟೋ ಮೆಸೇಜ್ ನ ಆ್ಯಪ್ ಆಗಿತ್ತು..! ಇಲ್ಲಿನ ಫೋಟೋಗಳ ಅವಧಿಯೂ ನಿಗಧಿಯಾಗಿರ್ತಾ ಇತ್ತು..! ಫೋಟೋಗಳನ್ನು ಅದರಿಂದ ಕಳುಹಿಸ ಬಹುದಾಗಿತ್ತು..! ಅದು 10 ಸೆಕೆಂಡ್ ಅಥವಾ ಅದಕ್ಕೂ ಕಡಿಮೆ ಸೆಕೆಂಡುಗಳಲ್ಲಿಯೇ ತೆಗೆಯ ಬೇಕಾಗಿತ್ತು( ರಿಮೂ ಆಗ್ತಾ ಇತ್ತು..! ಆದ್ರೆ ಈ ಆ್ಯಪ್ ಫೇಲ್ಯೂರ್ ಆಗುತ್ತೆ..! ಆದ್ರೆ ಇದರಲ್ಲಿ ಸೋತೆ ಅಂತ ಬ್ಯುಸಿ ನೆಸ್ ನಿಂದ ಹೊರಬರ್ಲಿಲ್ಲ..! ಅದೇ ಆ್ಯಪ್ ಅನ್ನು ಡೆವೆಲಪ್ ಮಾಡ್ತಾರೆ..! ಹೊಸ ಬ್ರಾಂಡ್ ನೊಂದಿಗೆ 2011ರಲ್ಲಿ ಅದನ್ನು ಹೊರ ತರ್ತಾರೆ..! ಅದೇ “ಸ್ನ್ಯಾಪ್ ಚಾಟ್”..!
ಈ “ಸ್ನ್ಯಾಪ್ ಚಾಟ್” ಜನರ ಮನಸ್ಸನ್ನು ಗೆಲ್ಲುತ್ತೇ..! ನಿಮಗೂ ಇದರ ಪರಿಚಯ ಇಲ್ದೇ ಇರಲ್ಲ..! ಈ “ಸ್ನ್ಯಾಪ್ ಚಾಟ್” ತಾತ್ಕಾಲಿಕ ಫೋಟೋ ಮತ್ತು ವಿಡಿಯೋ ಮೆಸೆಂಜಿಗ್ ಆ್ಯಪ್..! ಇವತ್ತು ಅಮೇರಿಕಾದಲ್ಲಿ ಅತ್ಯಂತ ಹೆಸರುವಾಸಿ ಆಗಿದೆ “ಸ್ನ್ಯಾಪ್ ಚಾಟ್”..! 13ರಿಂದ 34 ವರ್ಷದ ವಯಸ್ಸಿನ ಶೇಕಡ 60ಕ್ಕೂ ಹೆಚ್ಚು ಜನ ಈ ಆ್ಯಪ್ ಬಳಸ್ತಾ ಇದ್ದಾರೆ..! 2013ರಲ್ಲಿ ಸೋಶಿಯಲ್ ನೆಟ್ವರ್ಕ್ ನ ಹಿರಿಯಣ್ಣ “ಫೇಸ್ ಬುಕ್” 3 ಬಿಲಿಯನ್ ಗೆ “ಸ್ನ್ಯಾಪ್ ಚಾಟ್” ನ್ನು ಕೊಂಡು ಕೊಳ್ಳಲು ರೆಡಿಯಾಗಿತ್ತು..! ಆದ್ರೆ “ಇವಾನ್ ಸ್ಪೀಗೆಲ್” ಅದನ್ನು ಮಾರಲಿಲ್ಲ..! ಅವರಿಗೂ ಗೊತ್ತಿತ್ತು.. ಈ ನನ್ನ ಕಂಪನಿ ಬೆಳೆದೇ ಬೆಳೆಯುತ್ತೆ ಅಂತ..! ಅದು ನಿಜವೂ ಆಗಿತ್ತು, ಇನ್ನೂ ಬೆಳೆದಿತೂ ಕೂಡ..! ಈ “ಫೋಟೋ ಶೇರಿಂಗ್ ಸೋಶಿಯಲ್ ನೆಟ್ವರ್ಕಿಂಗ್ ಹೆಚ್ಚು ಜನಪ್ರೀಯವಾಗಿದ್ದು ಮೇ,2015ರಲ್ಲಿ $538ಮಿಲಿಯನ್ ಹೂಡಿಕೆಯನ್ನು ಹೆಚ್ಚಿಸಿ ಬೆಳೆಯುತ್ತಲೇ ಇದೆ..!
ಇದೇ “ಸ್ನ್ಯಾಪ್ ಚಾಟ್”ನ ಬ್ರಹ್ಮ “ಇವಾನ್ ಸ್ಪೀಗೆಲ್” ಇವತ್ತು ವಿಶ್ವದ ಅತ್ಯಂತ ಕಿರಿಯ ಬಿಲೇನಿಯರ್..!
ಮನಸ್ಸಿದ್ದರೇ ಮಾರ್ಗ.. ಪ್ರಯತ್ನ ಪಟ್ಟರೆ ಎಂಥಹದ್ದನ್ನೂ ಸಾಧಿಸ ಬಹುದು ಎನ್ನುವುದಕ್ಕೆ 25ರ ತರುಣ “ಇವಾನ್ ಸ್ಪೀಗೆಲ್ಲರೇ ಪ್ರತ್ಯಕ್ಷ ಸಾಕ್ಷಿ..! ಹ್ಞಾಂ ಇವರಿನ್ನೂ ಅವಿವಾಹಿತ ಯಾರಾದ್ರೂ ಹುಡ್ಗೀರು ಅಪ್ಲೀಕೇಶನ್ ಹಾಕಿ ನೋಡಿ ಹಹಹಹಹ…………

  • ಶಶಿಧರ ಡಿ ಎಸ್ ದೋಣಿಹಕ್ಲು

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಫಿಲ್ಮ್ ಫೇರ್ ಪಡೆಯದ ಅದ್ಭುತ ಸ್ಟಾರ್ ಗಳು..!..!

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...