ಟೀಂ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಸ್ಯಾಂಡಲ್ ವುಡ್ ನಟಿ ತನಿಷ್ಕಾ ಕಪೂರ್ ಜೊತೆ ಸುತ್ತಾಡಿ ಸುದ್ದಿಯಲ್ಲಿದ್ದುದು ನಿಮಗೆ ಗೊತ್ತೇ ಇದೆ. ಇದೀಗ ಸ್ಟಾರ್ ಕ್ರಿಕೆಟಿಗರೊಬ್ಬರ ಪತ್ನಿ ಮಾಡಿಕೊಟ್ಟ ಚಿಕನ್ ನಿಂದ ಚಹಲ್ ಸುದ್ದಿಯಾಗಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಆ್ಯಂಡ್ರ್ಯೂ ಸೈಮಂಡ್ಸ್ ಅವರ ಪತ್ನಿ ಚಹಲ್ ಗೆ ಬಟರ್ ಚಿಕನ್ ಮಾಡಿ ಉಣಬಡಿಸಿದ್ದಾರೆ…!
ಸೈಮಂಡ್ಸ್ ಮತ್ತು ಅವರ ಪತ್ನಿ ಬ್ರೂಕ್ ಇರೋದು ಆಸ್ಟ್ರೇಲಿಯಾದಲ್ಲಿ, ಚಹಲ್ ಇರೋದು ಭಾರತದಲ್ಲಿ. ಚಹಲ್ ಹೇಗೆ ಬ್ರೂಕ್ ಕೈ ರುಚಿ ಸವಿದ್ರು?
ಇದನ್ನು ಸ್ವತಃ ಚಹಲ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಸೈಮಂಡ್ಸ್ 2011ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಆ ವೇಳೆ ಸೈಮಂಡ್ಸ್ ಮತ್ತವರ ಪತ್ನಿ ಬ್ರೂಕ್ ರ ಸ್ನೇಹಿತರಾದ್ರು ಚಹಲ್.
ಬಳಿಕ ಕಳೆದ ಸೆಪ್ಟೆಂಬರ್ ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಚಹಲ್ ಸೈಮಂಡ್ಸ್ ಜೊತೆ ಸುತ್ತಾಡಿದ್ರು. ಸೈಮಂಡ್ಸ್ ಅವರ ಪತ್ನಿ ಚಹಲ್ ಗೆ ಬಟರ್ ಚಿಕನ್ ಮಾಡಿ ಉಣಬಡಿಸಿದ್ರಂತೆ.