No menu items!
19.4 C
Munich
Friday, May 1, 2026

ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನಿಗೆ‌ ಧರ್ಮದೇಟು

Must read

ವಾಟ್ಸಪ್‌ ಹಾಗೂ ಫೇಸ್ ಬುಕ್ ಗಳಲ್ಲಿ ಯುವತಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಯುವಕನಿಗೆ ಯುವತಿಯರೇ ಧರ್ಮದೇಟು ನೀಡಿದ್ದಾರೆ.
ಈ ಘಟನೆ ನಡೆದಿರುವುದು ದಾವಣಗೆರೆಯ ಜಗಳೂರು ಪಟ್ಟಣದಲ್ಲಿ. ‌
ಇಲ್ಲಿನ ನವ್ಯಜ್ಞಾನ ಜ್ಯೋತಿ ಸಂಸ್ಥೆಯ ಯುವತಿಗೆ ಜಗಳೂರು ತಾಲೂಕಿನ ಕಲ್ಲೇದೇವಪುರ ಗ್ರಾಮದ ಯುವಕ ಪ್ರತಿನಿತ್ಯ ಫೇಸ್ ಬುಕ್ ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನಂತೆ.

ಪಟ್ಟಣದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಎನ್ನಲಾಗಿರುವ ಈ ಯುವಕ ಯುವತಿಯರಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಕಲ್ಪಿಸಿ ಸಂದೇಶ ರವಾನಿಸುತ್ತಿದ್ದನಂತೆ. ಇವನ ಕಾಟ ತಡೆಯಲಾಗದೆ ಯುವತಿಯರು ಆತನನ್ನು ಬುದ್ಧಿವಂತಿಕೆಯಿಂದ ಜಗಳೂರಿಗೆ ಕರೆಸಿ ಧರ್ಮದೇಟು ನೀಡಿದ್ದಾರೆ. ಆರೋಪಿಯನ್ನು ಜಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article