17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಕೆಯಾಗಿದ್ದ ಕಾರಣಕ್ಕೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರಲಿಲ್ಲ.
ಹೀಗಾಗಿ ಈ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಮುನಿರತ್ನ ಹಾಗೂ ಪ್ರತಾಪ್ ಗೌಡ ಅನರ್ಹ ಶಾಸಕರಾಗಿಯೇ ಉಳಿದುಕೊಂಡಿದ್ದರೂ ಹಾಗೂ ಉಪ ಚುನಾವಣೆಯ ಮುಗಿದು ಫಲಿತಾಂಶವೂ ಬಂದಾಯಿತು ಮುಂದೆ ನಮ್ಮ ನಡೆ ಏನು ಎಂಬ ಪ್ರಶ್ನೆ ಅವರಲ್ಲಿ ಮೂಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದ ಅನರ್ಹ ಶಾಸಕ ಮುನಿರತ್ನ, ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆನ್ನಲಾಗಿದೆ. ತಮ್ಮ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ಇರುವ ಅಡ್ಡಿಯನ್ನು ನಿವಾರಿಸುವುದಾಗಿ ನೀವು ಮಾತು ಕೊಟ್ಟಿದ್ರಿ. ಆದರೆ ಈವರೆಗೂ ಆ ಕಾರ್ಯವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.