ಅನುಷ್ಕಾ ಶೆಟ್ಟಿ….ಯಾರಿಗೆ ತಾನೆ ಈ ಚಂದದ ಗೊಂಬೆ ಗೊತ್ತಿಲ್ಲ ಹೇಳಿ? ತೆಲುಗು ಹಾಗೂ ತಮಿಳು ಚಿತ್ರರಂಗದ ಟಾಪ್ ನಟಿ..’ಬಾಹುಬಲಿ’ ದೇವಾಸೇನಾ…ಇಡೀ ದಕ್ಷಿಣ ಭಾರತದಲ್ಲೇ ಸದ್ದು ಮಾಡಿದ ಅರುಂಧತಿ…
ಈ ಸ್ಟಾರ್ ನಟಿಯ ತಾಯಿ ಪ್ರಫುಲ್ಲಾ ಶೆಟ್ಟಿಯ ಹುಟ್ಟುಹಬ್ಬ.. ತಾಯಿಯ ಬರ್ತ್ ಡೇ ಗೆ ಅನುಷ್ಕಾ ವಿಶ್ ಮಾಡಿದ್ದಾರೆ. ತಮ್ಮ ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅರೆ, ಅದರಲ್ಲೇನಿದೆ ವಿಶೇಷ..ಅದೊಂದು ಸುದ್ದಿನಾ ಅಂದ್ರಾ? ಅಯ್ಯೋ ಅದು ಬರೀ ಸುದ್ದಿಯಾಗಿದ್ದರೆ ವೈರಲ್ ಆಗ್ತಿರ್ಲಿಲ್ಲ…ನಾವಿಲ್ಲಿ ಬಹುಶಃ ಬರೆಯುತ್ತಲೂ ಇರ್ಲಿಲ್ಲ. ಅನುಷ್ಕಾ ಅಮ್ಮನಿಗೆ ಕನ್ನಡದಲ್ಲಿ ವಿಶ್ ಮಾಡಿದ್ದಾರೆ..!
#AnushkaShetty via FB & IG ? pic.twitter.com/kicSc9woJn
— Anushka Shetty (@Anushka_ASF) July 31, 2019
ಬೆಳೆಯುತ್ತಾ ಬೆಳೆಯುತ್ತಾ ಏರಿದ ಏಣಿಯನ್ನು ಒದೆಯುವ ..ತನ್ನ ತಾಯಿ ನುಡಿಯನ್ನೇ ಕೇವಲವಾಗಿ ನೋಡುವ ಅದೆಷ್ಟೋ ಸೋ ಕಾಲ್ಡ್ ಸ್ಟಾರ್ ನಟಿಮಣಿಯರನ್ನು ಕಂಡಿದ್ದೇವೆ. ಅಂತವರ ನಡುವೆ ಕನ್ನಡತಿ ಅನುಷ್ಕಾ ತುಂಬಾ ಗ್ರೇಟ್ ಅನಿಸಿಕೊಳ್ತಾರೆ.
ಅಮ್ಮನ ಜೊತೆ ಇರುವ ಫೋಟೋವನ್ನು ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿ ”ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಅಂತ ಅನುಷ್ಕಾ ಶೆಟ್ಟಿ ಬರೆದು ಕೊಂಡಿದ್ದಾರೆ.
ಅನುಷ್ಕಾರ ಕನ್ನಡ ಟ್ವೀಟ್ ನೋಡಿದ ಅಭಿಮಾನಿಗಳು ನಾವು ನಿಮ್ಮ ಸರಳತೆಗೆ ಫುಲ್ ಫಿದಾ ಆಗಿದ್ದೇವೆ ಅಂತ ಗುಣಗಾನ ಮಾಡುತ್ತಿದ್ದಾರೆ. ಅದೊಂದು ಟ್ವೀಟ್ ಈಗ ಎಲ್ಲೆಡೆ ಹರಿದಾಡುತ್ತಿದೆ. ಕನ್ನಡದವರೇ ಆಗಿ ಕನ್ನಡದಲ್ಲೇ ಗುರುತಿಸಿಕೊಂಡು ಈಗ ಯಾವ್ದೋ ಒಂದೆರಡು ಸಿನಿಮಾಗಳಲ್ಲಿ ನಟಿಸೋಕೆ ಅವಕಾಶ ಸಿಕ್ತು ಅಂತ ಬೇರೆ ಕಡೆ ಹೋದ ಮೇಲೆ ಕನ್ನಡ್ ಬರಲ್ಲ…ಕನ್ನಡ್ ಗೊತ್ತಿಲ್..ಕನ್ನಡ್ ಕಷ್ಟ ಅನ್ನೋ ಪುಣ್ಯಾತ್ಗಿತ್ತಿಯರು ಅನುಷ್ಕಾ ಅವರನ್ನು ನೋಡಿ ಕಲಿಬೇಕು..ಅನುಷ್ಕಾರಷ್ಟು ಟಾಪ್ ನಟಿಯಂತೂ ಅಲ್ಲ ಕನ್ನಡ ಕಷ್ಟ ಎಂದು ಟ್ರೋಲ್ ಆಗ್ತಿರೋ ನಟಿ ಎಂದು ಎಲ್ಲಾ ಮಾತಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಟ್ವೀಟ್ ನದ್ದೇ ಸದ್ದು….
ಎನಿವೇ ಅನುಷ್ಕಾ ಅವರ ತಾಯಿಗೆ ನಮ್ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು..