ಅಪ್ಪಿ-ತಪ್ಪಿಯೂ ದೇವರಿಗೆ ಪೂಜೆಯಲ್ಲಿ ಈ ತಪ್ಪು ಮಾಡ್ಬೇಡಿ: ಏನಾಗುತ್ತೆ ಗೊತ್ತಾ?
ಹಿಂದೂ ಧರ್ಮದಲ್ಲಿ ದೈನಂದಿನ ಪೂಜೆಗೆ ತನ್ನದೇ ಆದ ಮಹತ್ವವಿದೆ. ಮನೆಯಲ್ಲಿ ಮಾಡುವ ಸರಳ ಪೂಜೆಯೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿಯನ್ನು ಹೊಂದಿದೆ. ಆದರೆ ಪೂಜೆಯ ಫಲ ಸಿಗಬೇಕಾದರೆ ಅದರ ನಿಯಮಗಳು ಹಾಗೂ ಆಚರಣೆಗಳನ್ನು ತಪ್ಪದೆ ಪಾಲಿಸಬೇಕು. ಇಲ್ಲದಿದ್ದರೆ ಪೂಜೆ ಅಪೂರ್ಣವಾಗುತ್ತದೆ ಮತ್ತು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಪೂಜೆಯ ವೇಳೆ ತಪ್ಪಿಸಬೇಕಾದ ನಿಯಮಗಳು:
ದೇವರ ಮನೆಯಲ್ಲಿ 15 ಇಂಚಿಗಿಂತ ದೊಡ್ಡ ವಿಗ್ರಹ ಇರಬಾರದು.
ಗಣೇಶ, ಸರಸ್ವತಿ ಹಾಗೂ ಲಕ್ಷ್ಮಿಯ ನಿಂತಿರುವ ಮೂರ್ತಿಗಳು ಇರಬಾರದು.
ಗಿಫ್ಟ್ ಆಗಿ ಬಂದ ವಿಗ್ರಹಗಳು, ಮರ ಹಾಗೂ ಫೈಬರ್ ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಇಡಬಾರದು. ಅವನ್ನು ನದಿಗೆ ಬಿಡುವುದು ಉತ್ತಮ.
ದೇವರ ಮನೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ 3 ವಿಗ್ರಹ ಇರಬಾರದು.
ಶಿವಲಿಂಗ, ಸಾಲಿಗ್ರಾಮ ಮತ್ತು ಸೂರ್ಯನ ವಿಗ್ರಹಗಳನ್ನು 2 ಇಡುವುದು ತಪ್ಪು.
ದೇವರ ಕೋಣೆಯಲ್ಲಿ ದೇವರ ಬಟ್ಟೆ, ಪುಸ್ತಕ ಹಾಗೂ ಇತರ ವಸ್ತುಗಳನ್ನು ಇಡಬಾರದು.
ದೇವರ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು.
ದೀಪ ಹಚ್ಚುವ ವಿಧಾನ:
2 ದೀಪ ಹಚ್ಚುವುದು ಶುಭ.
ಬಲಬದಿಯಲ್ಲಿ ತುಪ್ಪದ ದೀಪ, ಎಡಬದಿಯಲ್ಲಿ ಎಣ್ಣೆಯ ದೀಪ ಹಚ್ಚಬೇಕು.
ಬೆಳಗ್ಗೆ ತುಪ್ಪದ ದೀಪ, ಸಂಜೆ ಎಣ್ಣೆಯ ದೀಪ ಹಚ್ಚುವುದೂ ಉತ್ತಮ.
ಪೂಜೆ ಮಾಡುವಾಗ ಗಮನಿಸಬೇಕಾದ ವಿಷಯಗಳು:
ನೆಲದ ಮೇಲೆ ನೇರವಾಗಿ ಕುಳಿತು ಪೂಜೆ ಮಾಡಬಾರದು; ಚಾಪೆ ಅಥವಾ ಬಟ್ಟೆ ಹಾಕಿ ಕುಳಿತುಕೊಳ್ಳಬೇಕು.
ಪೂರ್ವ ಅಥವಾ ಉತ್ತರ ದಿಕ್ಕಿನತ್ತ ಮುಖ ಮಾಡಿ ಪೂಜೆ ಮಾಡುವುದು ಒಳ್ಳೆಯದು.
ಪೂಜೆ ಮುಗಿಸಿದ ನಂತರ ಆಹಾರ ದಾನ ಮಾಡುವುದು ಅತ್ಯಂತ ಶ್ರೇಷ್ಠ.