ದರ್ಶನ್ ಬಳಿ ಯಾರಾದರೂ ಕಷ್ಟ ಅಂತ ಬಂದರೆ ಸಹಾಯ ಮಾಡದೆ ಕಳಿಸುವುದಿಲ್ಲ. ಈಗಾಗಲೇ ಅನೇಕ ಕುಟುಂಬಗಳಿಗೆ ತಮ್ಮ ಅಭಿಮಾನಿಗಳಿಗೆ ಸಹಾಯ ಮಾಡಿತ್ತಾ ಬಂದಿದ್ದಾರೆ. ಇದೀಗ ಅವರು ಕಷ್ಟದಲ್ಲಿರುವ ತಮ್ಮ ಅಭಿಮಾನಿಯ ಕುಟುಂಬಕ್ಕೆ ನೆರವಾಗಿದ್ದಾರೆ.
ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದಂದು ವಿಶ್ ಮಾಡಲು ರಾಕೇಶ್ ಎಂಬ ಅಭಿಮಾನಿ ಶುಭ ಹಾರೈಸಲು ಬಂದಿದ್ದರು. ಹೀಗೆ ಹಾರೈಸಿ ಮನೆಗೆ ವಾಪಾಸು ತೆರಳುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಆಗ ರಾಕೇಶ್ ಕುಟುಂಬದವರಿಗೆ ದರ್ಶನ್, ಎರಡು ಲಕ್ಷ ರೂಪಾಯಿ ಧನಸಹಾಯ ಮಾಡಿದ್ದರು. ಮುಂದೆಯೂ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದರು. ಈ ವರ್ಷ ಮಹನ ಹುಟ್ಟಿದ ದಿನದಂದು ರಾಕೇಶ್ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದಾರೆ ಹಾಗು ಮನೆಯ ಜವಬ್ದಾರಿಯನ್ನು ದರ್ಶನ ತೆಗೆದುಕೊಂಡಿದ್ದಾರೆ .