ಸರ್ಕಾರದ ಕುರ್ಚಿಗೆ ಕಂಟಕ ಎಂಬುದನ್ನು ಅರಿತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಸಚಿವರು, ಶಾಸಕರು ಪ್ರಚಾರದ ಕಾರ್ಯತಂತ್ರವನ್ನೇ ಬದಲಾಯಿಸಲು ಮುಂದಾಗಿದ್ದಾರೆ ಹಾಗಗಿ ಸಭೆಯನ್ನು ನೆಡೆಸಿ ಚರ್ಚೆ ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಹಾಗು ಯಡಿಯೂರಪ್ಪ ಅವರು ಏನಾದರು ಗೇಮ್ ಪ್ಲಾನ್ ಮಾಡಿದ್ದಾರಾ ಎಂಬ ಅನುಮಾನ ಕೂಡ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಬಹಿರಂಗ ಪ್ರಚಾರಕ್ಕೆ ಇನ್ನು ಕೆಲವೇ ದಿನಗಳು ಇರುವಾಗಲೇ ಬಿಜೆಪಿ ಚುನಾವಣಾ ಪ್ರಚಾರದ ತಂತ್ರವನ್ನು ಸಂಪೂರ್ಣವಾಗಿ ಬದಲಾಯಿಸಿದ್ದು, ಗ್ರಾಮ ಮಟ್ಟದಿಂದಲೇ ಪ್ರಚಾರ ನಡೆಸಿ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರವನ್ನು ರೂಪಿಸಿದೆ ರಾಜ್ಯ ಬಿಜೆಪಿ ಎಂದು ಹೇಳಲಾಗುತ್ತಿದೆ.