No menu items!
12 C
Munich
Thursday, May 7, 2026

ಚಿತ್ರದುರ್ಗಕ್ಕೆ ಬಂದ ಗಂಡುಗಲಿ ಮದಕರಿ ನಾಯಕ ದರ್ಶನ್ .

Must read

ಕೋಟೆ ನಾಡು ಚಿತ್ರದುರ್ಗಕೆ ದರ್ಶನ್ ಆಗಮನ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ  ಗಂಡುಗಲಿ ಮದಕರಿ ನಾಯಕ ಸಿನಿಮಾದ ಮುಹೂರ್ತ ಇಂದು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆಯಿತು ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು   , ಈ ಹಿನ್ನೆಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಚಿತ್ರತಂಡದವರು ಕೋಟೆನಾಡಿಗೆ ಆಗಮಿಸಿದ್ದಾರೆ. ಡಿಬಾಸ್​ ನೋಡಲು ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು ಎಂದು ಹೇಳಲಾಗುತ್ತಿದೆ .


ದರ್ಶನ್ ಸೇರಿದಂತೆ ಚಿತ್ರತಂಡ ಚಿತ್ರದುರ್ಗದ  ನೀಲಕಂಠೇಶ್ವರ, ಬರಗೇರಮ್ಮ, ಉಚ್ಚಂಗಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದರ್ಶನ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಾಹಿತಿ ಬಿ.ಎಲ್ ವೇಣು ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ.
ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article