ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮಗಳಿಗೆ ಯುವಕನೊಬ್ಬ ಮುತ್ತಿಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೀರ್ ಮೊದಲ ಪತ್ನಿಯ ಮಗಳು ಇರಾ ಖಾನ್, ತನ್ನ ಹಣೆಗೆ ಗೆಳೆಯ ಮಿಶಾಲ್ ಮುತ್ತು ಕೊಡ್ತಿರೋ ಫೋಟೋವನ್ನು ಇನ್ಟ್ರಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಳು. ಅಲ್ಲದೆ ಈ ಫೋಟೋವನ್ನು ಮಿಶಾಲ್ ಗೂ ಟ್ಯಾಗ್ ಮಾಡಿದ್ದಳು.
ನಟ ಮತ್ತು ನಿರ್ಮಾಪಕನಾಗಿರುವ ಮಿಶಾಲ್, ಇರಾ ಜೊತೆಯಲ್ಲಿರೋ ತಮ್ಮ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಅದ್ರಲ್ಲಿ ಒಂದು ಫೋಟೋಕ್ಕೆ ‘ಚಾರ್ಮರ್’ ಅಂತಾ ಬರೆದಿದ್ದಾರೆ. ಸಧ್ಯ ಈ ಫೋಟೋ ನೋಡಿರುವ ಅಭಿಮಾನಿಗಳು ಇಬ್ಬರು ಡೇಟಿಂಗ್‍ನಲ್ಲಿದ್ದಾರೆ ಅಂತಾ ಮಾತನಾಡಿಕೊಳ್ತಿದ್ದಾರೆ.