ಮಾಂತ್ರಿಕ ಹಳದಿ ಮಸಾಲೆ ಅಂತಾನೆ ಕರೆಯಲ್ಪಡುವ ಅರಿಶಿನ ನಮ್ಮಲ್ಲಿ ತುಂಬಾನೇ ಜನಪ್ರಿಯವಾದ ಮಸಾಲೆ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅರಿಶಿನ ಕೇವಲ ಆರೋಗ್ಯಕ್ಕೆ ಅಲ್ಲ ನಮ್ಮ ತ್ವಚೆ ಕಾಪಾಡಿಕೊಳ್ಳಲು ಕೂಡ ಉಪಯುಕ್ತವಾಗಿದೆ. ಇನ್ನೂ ಅರಿಶಿಣದ ಸೇವನೆಯಿಂದ ತೊಂದರೆಗಳು ಕೂಡ ಇದ್ದಾವೆ. ಅದು ಹೇಗೆ ಅಂತಾ ಬನ್ನಿ ತಿಳಿಯೋಣ.
“ಅತಿ ಸರ್ವತ್ರ್ ವರ್ಜನ್ಯೆ” ಎಂಬ ಸಾಲುಗಳನ್ನು ನಿಮ್ಮ ಹಿರಿಯರ ಬಾಯಿಂದ ನೀವು ಅನೇಕ ಬಾರಿ ಕೇಳಿರಬಹುದು. ಇದರರ್ಥ ಅತಿಯಾದ ಯಾವುದೇ ವಿಷಯವು ನಿಮಗೆ ಹಾನಿಕಾರಕವಾಗಬಹುದು. ಅದು ಎಷ್ಟೇ ಪ್ರಯೋಜನಕಾರಿಯಾಗಿದ್ದರೂ ಪರವಾಗಿಲ್ಲ. ಅತಿಯಾದರೆ ಅಮೃತವೂ ವಿಷವಾಗುತ್ತೆ. ಇದು ಅರಿಶಿನಕ್ಕೂ ಅನ್ವಯಿಸುತ್ತದೆ. ಅರಿಶಿನವು ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದು ಗಂಭೀರದಿಂದ ತೀವ್ರವಾದ ರೋಗಗಳನ್ನು ತೆಗೆದುಹಾಕಲು ಪರಿಣಾಮಕಾರಿಯಾಗಬಹುದು, ಆದರೆ ಅದನ್ನು ಅತಿಯಾಗಿ ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೂ ಮಾರಕವಾಗಬಹುದು. ಹೌದು, ಅರಿಶಿನದ ಸೇವನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅರಿಶಿನವನ್ನು ಅತಿಯಾಗಿ ತಿನ್ನೋದ್ರಿಂದ ಉಂಟಾಗುವ ಅನಾನುಕೂಲಗಳು ಯಾವುವು ಎಂದು ತಿಳಿಯೋಣ.
ಅರಿಶಿನವು ಆಂಟಿ-ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಈ ಗುಣಗಳು ನಿಮ್ಮನ್ನು ರೋಗಗಳಿಂದ ರಕ್ಷಿಸಲು ಕೆಲಸ ಮಾಡುತ್ತವೆ. ಈ ಗುಣಲಕ್ಷಣಗಳಿಂದಾಗಿ, ಅರಿಶಿನವು ಹೆಚ್ಚು ಪ್ರಸಿದ್ಧವಾಗಿದೆ. ಆದರೆ ನೀವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ನೀವು ಈ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರತಿದಿನ ಒಂದು ಟೀಸ್ಪೂನ್ ಅರಿಶಿನವನ್ನು ಸೇವಿಸುವುದು ಅದರ ಪ್ರಯೋಜನವನ್ನು ಪಡೆಯಲು ಸಾಕು ಎಂದು ತಜ್ಞರು ಸೂಚಿಸುತ್ತಾರೆ.
ಒಂದು ವೇಳೆ, ನೀವು ಅರಿಶಿನವನ್ನು ಹೆಚ್ಚು ಸೇವಿಸಿದರೆ, ಅದು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲದೇ ಇದರಿಂದ ತಲೆತಿರುಗುವಿಕೆ ಸಹ ಅನುಭವಿಸಬಹುದು. ಒಬ್ಬ ವ್ಯಕ್ತಿಯು ಇದನ್ನು ಕ್ಯಾಪ್ಸೂಲ್ ಅಥವಾ ಪೂರಕಗಳ ರೂಪದಲ್ಲಿ ಸೇವಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಇದು ಕಂಡುಬರುತ್ತದೆ. ಆದ್ದರಿಂದ, ತಜ್ಞರು ಆಗಾಗ್ಗೆ ಅರಿಶಿನವನ್ನು ನೈಸರ್ಗಿಕ ರೂಪದಲ್ಲಿ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ.
ನೀವು ಅರಿಶಿನವನ್ನು ಅತಿಯಾಗಿ ಸೇವಿಸಿದರೆ, ಅದು ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಯಾವುದೇ ಆಕ್ಸಲೇಟ್ ಸಮೃದ್ಧ ಆಹಾರದ ಅತಿಯಾದ ಸೇವನೆಯು ಕಿಡ್ನಿಯಲ್ಲಿ ಕಲ್ಲುಗಳನ್ನು ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು
ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ನಿಮ್ಮ ಹೊಟ್ಟೆಗೆ ಹಾನಿಯಾಗಬಹುದು. ನೀವು ದಿನವಿಡೀ 1 ಟೀಸ್ಪೂನ್ ಗಿಂತ ಹೆಚ್ಚು ಅರಿಶಿನ ಸೇವಿಸಿದರೆ, ಅದು ಹೊಟ್ಟೆಯ ಅಸ್ವಸ್ಥತೆ, ಅತಿಸಾರ, ವಾಂತಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅರಿಶಿನವನ್ನು ಅತಿಯಾಗಿ ಸೇವಿಸೋದ್ರಿಂದ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. ಹೆಚ್ಚು ಅರಿಶಿನವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣ ಹೀರಿಕೊಳ್ಳುವುದನ್ನು ನಿಲ್ಲಿಸುತ್ತದೆ. ಈ ಕಾರಣದಿಂದಾಗಿ ನಿಮ್ಮ ದೇಹದಲ್ಲಿ ರಕ್ತದ ಕೊರತೆ ಉಂಟಾಗಬಹುದು. ಅರಿಶಿನದಲ್ಲಿ ಅನೇಕ ಅಂಶಗಳು ಕಂಡುಬರುತ್ತವೆ, ಅವುಗಳಲ್ಲಿ ಒಂದು ಕರ್ಕ್ಯುಮಿನ್ ಆಗಿದೆ. ಈ ಕರ್ಕ್ಯುಮಿನ್ ಜೀರ್ಣಕಾರಿ ಸಮಸ್ಯೆಗಳನ್ನು (digestion problem) ಸೃಷ್ಟಿಸುತ್ತದೆ. ಈ ಕಾರಣದಿಂದಾಗಿ, ಅನೇಕ ಬಾರಿ ಅತಿಸಾರ ಅಥವಾ ವಾಂತಿಯ ಸಮಸ್ಯೆಯೂ ಸಂಭವಿಸಲು ಪ್ರಾರಂಭಿಸುತ್ತದೆ. ಆದರೆ ನೀವು ಹೆಚ್ಚು ಅರಿಶಿನವನ್ನು ಸೇವಿಸಿದರೆ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ. ಅರಿಶಿನದ ಗುಣಲಕ್ಷಣಗಳನ್ನು ಚರ್ಮ ಮತ್ತು ಆರೋಗ್ಯಕ್ಕೆ ಪ್ರಯೋಜನಕಾರಿ. ನೀವು ಅದನ್ನು ಅತಿಯಾಗಿ ಸೇವಿಸಿದಾಗ ಅದರಿಂದ ಚರ್ಮಕ್ಕೆ ಹಾನಿಯಾಗುತ್ತೆ. ಅರಿಶಿನದ ಸೇವನೆಯು ಉಸಿರಾಟದ ತೊಂದರೆ ಮತ್ತು ಚರ್ಮದ ದದ್ದುಗಳಿಗೆ ಕಾರಣವಾಗಬಹುದು. ಇದರಿಂದ ಉಂಟಾಗುವ ಅಲರ್ಜಿಯು ಚರ್ಮ ಮತ್ತು ಒಳಭಾಗಕ್ಕೂ ಹರಡಬಹುದು.
ಇನ್ನೂ ಅರಿಶಿನದಲ್ಲಿ ಸಕ್ರಿಯ ಸಂಯುಕ್ತವಾದ ಕರ್ಕುಮಿನ್ ಇದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುವ ಮತ್ತು ಅಲ್ಝೈಮರ್ ಮತ್ತು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯದಂಥ ವೈಜ್ಞಾನಿಕವಾಗಿ ಸಾಬೀತಾಗಿರುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಪ್ರಬಲ ಉರಿಯೂತ ನಿರೋಧಕ ಮತ್ತು ಉತ್ಕರ್ಷಣ ನಿರೋಧಕವಾಗಿದೆ. ಖಿನ್ನತೆ ಮತ್ತು ಸಂಧಿವಾತದ ಲಕ್ಷಣಗಳನ್ನು ಸುಧಾರಿಸಲೂ ಸಹಾಯ ಮಾಡಬಹುದು.
ಅರಿಸಿನ ವನ್ನು ಸೇವಿಸುವುದು ನಮಗೆ ತುಂಬಾ ಪ್ರಯೋಜನಕಾರಿ ಎಂದುಕೊಂಡಿದ್ದೇವೆ. ಆದರೆ, ಅರಿಶಿನವು ಎಲ್ಲರಿಗೂ ಒಂದೇ ರೀತಿಯ ಪ್ರಯೋಜನಗಳನ್ನು ತರುವುದಿಲ್ಲ. ಅರಿಶಿನದಿಂದ ಸಮಸ್ಯೆ ಎದುರಿಸಿದವರು ನಮ್ಮಲ್ಲಿ ಅನೇಕರು ಇದ್ದಾರೆ. ಅರಿಶಿನವನ್ನು ಯಾರು ಸೇವಿಸಬಾರದು ಎಂದು ಹೇಳುತಿದ್ದೇವೆ. ಅಂದರೆ, ಯಾರಿಗೆ ಅರಿಶಿನ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದು ನೋಡೋಣ.
ರಕ್ತಸ್ರಾವದ ಸಮಸ್ಯೆಯನ್ನು ಹೆಚ್ಚಿಸುತ್ತದೆ
ಅರಿಶಿನವು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ, ಮೂಗಿನಿಂದ ಅಥವಾ ದೇಹದ ಇತರ ಭಾಗಗಳಿಂದ ಹಠಾತ್ ರಕ್ತಸ್ರಾವವನ್ನು ಹೊಂದಿರುವ ಜನರು ಅರಿಶಿನದ ಸೇವನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವು ಅವರಿಗೆ ಹಾನಿ ಮಾಡಬಹುದು.
ಕಾಮಾಲೆ ಇರುವವರು ಅರಿಶಿನವನ್ನು ತಿನ್ನಬಾರದು. ಈ ಕಾಯಿಲೆಯಿಂದ ಚೇತರಿಸಿಕೊಂಡ ನಂತರವೂ ನೀವು ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವೇ ಅರಿಶಿನವನ್ನು ಸೇವಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು.
ಅರಿಶಿನದ ಶುದ್ಧೀಕರಣದ ಗುಣಗಳು ಸಹ ನಿಮ್ಮನ್ನು ಹೆಚ್ಚು ಸುಲಭವಾಗಿ ರಕ್ತಸ್ರಾವವಾಗುವಂತೆ ಮಾಡಬಹುದು. ಇದು ಏಕೆ ಸಂಭವಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅರಿಶಿನದ ಇತರ ಸೂಚಿಸಿದ ಪ್ರಯೋಜನಗಳಾದ ಕಡಿಮೆ ಕೊಲೆಸ್ಟ್ರಾಲ್ ಮತ್ತು ಕಡಿಮೆ ರಕ್ತದೊತ್ತಡ, ಬಹುಶಃ ನಿಮ್ಮ ರಕ್ತದಲ್ಲಿ ಅರಿಶಿನ ಕಾರ್ಯ ನಿರ್ವಹಿಸುವ ವಿಧಾನದೊಂದಿಗೆ ಏನಾದರೂ ಸಂಬಂಧ ಹೊಂದಿದೆ ಎನ್ನಲಾಗಿದೆ. ಇದರಿಂದ ರಕ್ತ ತೆಳುವಾಗುತ್ತದೆ ಎನ್ನಲಾಗಿದೆ.
ಅರಿಶಿನ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮೂತ್ರದ ಆಕ್ಸಲೇಟ್ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು, ಇದು ಮೂತ್ರಪಿಂಡದ ಕಲ್ಲು ರಚನೆಯ ಅಪಾಯವನ್ನು ಹೆಚ್ಚಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡುವುದು ಉಚಿತ. ಹೀಗೆ ಅರಿಶಿನ ಅನುಕೂಲದ ಜೊತೆ ಕೆಲವೊಂದು ಅನಾನುಕೂಲ ಹೊಂದಿದೆ.