‘ಅಸುರರು’ ದರೋಡೆ ಕಥೆ !

Date:

ಹುಲಿಬೇಟೆ ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ ಈಗ ದರೋಡೆ ಕಥೆ ಹೊತ್ತು ಬಂದಿದ್ದಾರೆ. ಅಸುರರು ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಜರುಗಿತು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು,.

ಈ ವೇಳೆ ನಿರ್ದೇಶಕ ರಾಜ್ ಬಹದ್ದೂರ್ ಮಾತನಾಡಿ, ಈ ಹಿಂದೆ ನಾನು ಹುಲಿಬೇಟೆ ಸಿನಿಮಾ ಮಾಡಿದ್ದೆ. ತಾತಾ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಿಂದ್ದಾಗ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಸಬೇಕು ಎಂದಾಗ ಅಸುರರು ಸಿನಿಮಾ ಮಾಡಿದ್ದು. ಅಸುರರು ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ಕಳ್ಳತನ ದರೋಡೆ ಮಾಡುವುದು. ಅವರೇ ಅಸುರರು ಎಂದು ತಿಳಿಸಿದರು.

ನಾಯಕ ತಮ್ಮಣ್ಣ ಮಾತನಾಡಿ, ಸಿನಿಮಾ ಇಲ್ಲಿವರೆಗೂ ಬರಲು ಕಾರಣ ಇಡೀ ಸಿನಿಮಾ ತಂಡ..ಎಲ್ಲರೂ ಎಲ್ಲಾ ಕೆಲಸ ಮಾಡಿದ್ದಾರೆ. ನವೆಂಬರ್ ಒಂದು ಬಿಡುಗಡೆ ಮಾಡಲು ತಯಾರಿ ನಡೆಸಿದ್ದೇವೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿದೆ ಎಂದರು.

ಅಸುರರು ಚಿತ್ರಕ್ಕೆ ರಾಜ್ ಬಹದ್ದೂರ್ ಆಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಮ್ಮಣ್ಣ ಟಿ.ಕೆ., ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.

ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣವಾಗಿರುವ ಅಸುರರು ಸಿನಿಮಾಗೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ಅಸುರರು ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿಕೊಡಲಾಗಿದೆ. ಟೀಸರ್ ಮೂಲಕ ಪ್ರಚಾರ ಕಾರ್ಯ ಪ್ರಾರಂಭಿಸಿರುವ ಚಿತ್ರತಂಡ ನವೆಂಬರ್ 1ಕ್ಕೆ ಸಿನಿಮಾವನ್ನು ತೆರೆಗೆ ತರಲಿದೆ.

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...