ಆಕ್ಷನ್ ಪ್ರಿನ್ಸ್ ಪೊಗರಿಗೆ ಸಿಕ್ತು ಮತ್ತೆ ಚಾಲನೆ.. ಎಂದಿನಿಂದ ಶೂಟಿಂಗ್..?
ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಪೊಗರು ಚಿತ್ರದ ಶೂಟಿಂಗ್ ತುಂಬಾ ಡಿಲೆ ಆಗ್ತಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು.. ಈಗ ಸದ್ಯಕ್ಕೆ ಒಂದು ಹಂತದ ಶೂಟಿಂಗ್ ಮುಗಿಸಿ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಚಿತ್ರತಂಡ ಈಗ ವಾಪಸ್ ಚಿತ್ರೀಕರಣಕ್ಕೆ ರೆಡಿಯಾಗಿದೆ.. ಹೀಗಾಗೆ ದೊಡ್ಡ ಸೆಟ್ ನ ನಿರ್ಮಾಣವಾಗಿದೆ..
ಹೈದ್ರಾಬಾದ್ ನಲ್ಲಿ ಪೊಗರು ಶೂಟಿಂಗ್ ಗಾಗಿ ಸೆಟ್ ನಿರ್ಮಾಣವಾಗಿದ್ದು, ಈ ಬಾರಿ ಶೂಟಿಂಗ್ ನಲ್ಲಿ ರಶ್ಮಿಕಾ ಮಂದಣ್ಣ ಹಾಗು ಧ್ರುವಾ ಸರ್ಜಾ ಇಬ್ಬರು ಪಾಲ್ಗೊಳ್ಳಲ್ಲಿದ್ದಾರೆ.. ಜೊತೆಗೆ ಧ್ರುವಾ ಮೊದಲ ಹಂತದ ಚಿತ್ರೀಕರಣಕ್ಕಾಗಿ 30 ಕೆಜಿವರೆಗು ತೂಕವನ್ನ ಇಳಿಸಿಕೊಂಡಿದ್ರು. ಈಗ ಮತ್ತೆ ತೂಕ ಹೆಚ್ಚಿಸಿಕೊಂಡಿದ್ದು, ಮತ್ತಷ್ಟು ರಗಡ್ ಆಗಿ ಕಾಣಿಸಲ್ಲಿದ್ದಾರೆ..ನಂದಕಿಶೋರ್ ನಿರ್ದೇಶನವಿರು ಈ ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್, ಸಾಧುಕೋಕಿಲಾ ಸೇರಿದಂತೆ ಹಲವರಿದ್ದಾರೆ..