ಭೂಮಿಯ ವಿವಾದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದು ಅದು ಕೊಲೆಯ ಅವರಿಗೂ ಹೋಗಿದೆ. ಹೌದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ತಹಸೀಲ್ದಾರ್ ಒಬ್ಬರನ್ನು ಆಫೀಸಿನ ಒಳಗೆ ನುಗ್ಗಿ ಕೊಲೆ ಮಾಡಲಾಗಿದೆ. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ವಿಜಯ ರೆಡ್ಡಿ ಮತ್ತು ರೈತ ಸುರೇಶ್ ಮುದಿರಾಜ್ ನಡುವೆ ಜಗಳ ಉಂಟಾಗಿದೆ.
ಇನ್ನು ಈ ಜಗಳ ಕೇವಲ ಮಾತಿನಲ್ಲಿ ಮುಗಿಯದೇ ಸುರೇಶ್ ನಿನ್ನೆ ಮಧ್ಯಾಹ್ನ ತಹಸೀಲ್ದಾರ್ ಕಚೇರಿಗೆ ಬಂದಿದ್ದಾನೆ ಈ ವೇಳೆ ವಿಜಯ ರೆಡ್ಡಿ ಅವರು ಊಟ ಮಾಡುತ್ತಿದ್ದರು. ಹೀಗೆ ಅವರ ಚೇಂಬರ್ ಒಳಕ್ಕೆ ನುಗ್ಗಿದ ಸುರೇಶ್ ತಹಸೀಲ್ದಾರ್ ಅವರಿಗೆ ಬೆಂಕಿ ಹಚ್ಚಿ ತದನಂತರ ಆಚೆ ಓಡಿ ಬಂದಿದ್ದಾನೆ. ಈ ಘಟನೆಯಲ್ಲಿ ಸುರೇಶ್ ಗೂ ಸಹ ಬೆಂಕಿ ತಗುಲಿದ್ದು ಆತನ ದೇಹ ಶೇ 60 ರಷ್ಟು ಸುಟ್ಟು ಹೋಗಿದ್ದು ತಹಸೀಲ್ದಾರ್ ಆದ ವಿಜಯಾ ರೆಡ್ಡಿ ಅವರು ಆಫೀಸಿನಲ್ಲಿಯೇ ಮೃತಪಟ್ಟಿದ್ದಾರೆ.